ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ರವಿ ಅಶ್ವಿನ್ ಗುಡ್​ಬೈ; ಅಶ್ವಿನ್ ಜೊತೆಗಿನ 14 ವರ್ಷಗಳ ಜರ್ನಿ ನೆನೆದು ಕೊಹ್ಲಿ ಭಾವುಕ

Kohl
Spread the love

ನ್ಯೂಸ್ ಆ್ಯರೋ: ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್, ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಗುಡ್​ಬೈ ಹೇಳಿದ್ದಾರೆ. ಅಶ್ವಿನ್ ನಿವೃತ್ತಿ ಸುದ್ದಿ ತಿಳಿದು ವಿಶ್ವ ಕ್ರಿಕೆಟ್​ನ ದಿಗ್ಗಜರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇನ್ನು ಸುದೀರ್ಘ 14 ವರ್ಷಗಳ ಕಾಲ ಅಶ್ವಿನ್ ಜೊತೆ ಕ್ರಿಕೆಟ್ ಪ್ರಯಾಣ ನಡೆಸಿದ್ದ ಕಿಂಗ್ ವಿರಾಟ್ ಕೊಹ್ಲಿ ಕೂಡ ಭಾವುಕರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಶ್ವಿನ್​ಗೆ ಕೊಹ್ಲಿ ಶುಭ ಹಾರೈಸಿ ಪೋಸ್ಟ್​ ಮಾಡಿದ್ದಾರೆ. ನಾನು ನಿಮ್ಮೊಂದಿಗೆ 14 ವರ್ಷಗಳಿಂದ ಆಡಿದ್ದೇನೆ. ಇಂದು ನೀವು ನಿವೃತ್ತಿ ಆಗುತ್ತಿದ್ದೇನೆ ಎಂದಾಗ ನಾನು ಭಾವುಕನಾದೆ. ಇಷ್ಟು ವರ್ಷಗಳಲ್ಲಿ ಒಟ್ಟಿಗೆ ಆಡಿದ ದಿನಗಳು ನೆನಪಿಗೆ ಬಂದವು.

ನಿಮ್ಮ ಜೊತೆಗಿನ ಪ್ರಯಾಣದ ಪ್ರತಿ ಕ್ಷಣವನ್ನೂ ನಾನು ಆನಂದಿಸಿದ್ದೇನೆ. ನಿಮ್ಮ ಸ್ಕಿಲ್, ಪಂದ್ಯ ಗೆಲ್ಲಿಸುವಲ್ಲಿ ನಿಮ್ಮ ಕೊಡುಗೆ ಅದಕ್ಕಿಂತ ಮತ್ತೊಂದಿಲ್ಲ. ಭಾರತೀಯ ಕ್ರಿಕೆಟ್‌ನ ದಂತಕಥೆಯಾಗಿ ನೀವು ಯಾವಾಗಲೂ ನೆನಪಿನಲ್ಲಿ ಉಳಿಯುತ್ತೀರಿ. ಮುಂದಿನ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಕೆಗಳು. ಧನ್ಯವಾದ ಗೆಳೆಯ ಎಂದು ಬರೆದುಕೊಂಡಿದ್ದಾರೆ.

ನಿವೃತ್ತಿ ಘೋಷಣೆಗೂ ಮುನ್ನ ಅಶ್ವಿನ್ ಅವರು ಕೊಹ್ಲಿ ಜೊತೆ ಕಾಣಿಸಿಕೊಂಡಿದ್ದರು. ಗಬ್ಬಾ ಟೆಸ್ಟ್ ಪಂದ್ಯದ ವೇಳೆ ಪೆವಿಲಿಯನ್​ನಲ್ಲಿ ಅಶ್ವಿನ್ ಮತ್ತು ಕೊಹ್ಲಿ ಕೂತು ಮಾತನಾಡುತ್ತಿದ್ದರು. ಈ ವೇಳೆ ಅಶ್ವಿನ್ ಅವರನ್ನು ಕೊಹ್ಲಿ ತಬ್ಬಿಕೊಂಡು ಶುಭ ಹಾರೈಸಿದ್ದರು. ಆದರೆ ಯಾವ ವಿಚಾರ ಅನ್ನೋದು ಗೊತ್ತಿರಲಿಲ್ಲ. ಇದೀಗ ನಿವೃತ್ತಿ ಘೋಷಣೆ ಬೆನ್ನಲ್ಲೇ ಅಸಲಿ ವಿಚಾರ ಗೊತ್ತಾಗಿದೆ. ಹೀಗಾಗಿ ಅಶ್ವಿನ್ ನಿವೃತ್ತಿ ವಿಚಾರ ವಿರಾಟ್ ಕೊಹ್ಲಿಗೆ ಮೊದಲೇ ಗೊತ್ತಿತ್ತು.

https://twitter.com/imVkohli/status/1869269640154923429?ref_src=twsrc%5Etfw%7Ctwcamp%5Etweetembed%7Ctwterm%5E1869269640154923429%7Ctwgr%5Ef432b0f94ed34d9f5f3b0d16b19e5be5c44ae248%7Ctwcon%5Es1_c10&ref_url=https%3A%2F%2Fnewsfirstlive.com%2Fkohli-gets-emotional-as-teary-eyed-ravichandran-ashwin-tells-him-his-retiring%2F

Leave a Comment

Leave a Reply

Your email address will not be published. Required fields are marked *

error: Content is protected !!