ತಲಕಾವೇರಿ ತೀರ್ಥೋದ್ಭವ ಸಂಭ್ರಮಕ್ಕೆ ಕ್ಷಣಗಣನೆ; ತೀರ್ಥರೂಪಿಣಿ ದರ್ಶನ ನೀಡುವುದು ಯಾವಾಗ ?
ನ್ಯೂಸ್ ಆ್ಯರೋ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿ ಕ್ಷೇತ್ರದಲ್ಲಿ ನಾಳೆ ಬೆಳಗ್ಗೆಯಿಂದ ವರ್ಷಕ್ಕೊಮ್ಮೆ ನಡೆಯುವ ಪವಿತ್ರ ತೀರ್ಥೋದ್ಭವದ ಸಂಭ್ರಮ ಕಳೆಗಟ್ಟಲಿದೆ. ತುಲಾ ಸಂಕ್ರಮಣದ ವೇಲೆ ಒಂದು ತಿಂಗಳು ನಡೆಯಲಿರುವ ಜಾತ್ರಮಹೋತ್ಸವಕ್ಕೆ, ನಾಳೆಯಿಂದ ವಿದ್ಯುಕ್ತ್ ಚಾಲನೆ ದೊರಕಲಿದೆ.
ರಾಜ್ಯದ ಬೇರೆ ಬೇರೆ ಭಾಗಗಳಿಂದ ಮಾತ್ರವಲ್ಲದೇ ತಮಿಳುನಾಡು ಹಾಗೂ ಕೇರಳದಿಂದಲೂ ಕೂಡ ಭಕ್ತರು ಆಗಮಿಸಿ ತೀರ್ಥೋದ್ಭದ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಲಿದ್ದಾರೆ. ಈ ಬಾರಿ ಅಕ್ಟೋಬರ್ 17ರ ಮುಂಜಾನೆ 7 ಗಂಟೆ 40 ನಿಮಿಷಕ್ಕೆ ತುಲಾ ಲಗ್ನದಲ್ಲಿ ತೀರ್ಥೋದ್ಭವ ಆಗಲಿದೆ. ಮುಂಜಾನೆಯಿಂದಲೇ ವಿವಿಧ ಹೋಮ ಹವನಗಳು ನಡೆಯಲಿದ್ದು. ತೀರ್ಥೋದ್ಭವಕ್ಕೂ ಎರಡು ಗಂಟೆ ಮೊದಲು ಮಹಾ ಸಂಕಲ್ಪ ಪೂಜೆ ನೆರವೇರಲಿದೆ. ಈ ಸಂಕಲ್ಪ ಪೂಜೆಯಲ್ಲಿಯೂ ಕೂಡ ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ.
ಮಹಾಸಂಕಲ್ಪ ಪೂಜೆ ನಡೆದ ಬಳಿಕ ಕುಂಡಿಕೆಯ ಪವಿತ್ರ ಜಲ ತನ್ನಷ್ಟಕ್ಕೆ ತಾನೇ ನಿಧಾನವಾಗಿ ಒಂದೆರಡು ಬಾರಿ ತೊಟ್ಟಿಲು ತೂಗಿದಂತೆ ಆಗುತ್ತದೆ. ಇದೇ ಕಾವೇರಿ ಮಾತೆ ತೀರ್ಥಸ್ವರೂಪಿಣಿಯಾಗಿ ದರ್ಶನ ಕೊಡುವ ಮುನ್ಸೂಚನೆ ಎಂದು ಹೇಳಲಾಗುತ್ತದೆ.
ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡುವ ಕ್ಷಣಕ್ಕೆ ಕಾತರದಿಂದ ಕಾಯುತ್ತಿರುತ್ತಾರೆ. ತೀರ್ಥೋದ್ಭವದ ಸಮಯದಲ್ಲಿ ಜೈ ಜೈ ಮಾತೆ ಕಾವೇರಿ, ಗೋವಿಂದಾ ಎಂಬ ಉದ್ಘೋಷಗಳು ಮೊಳಗುತ್ತವೆ. ಬಿಂದಿಗೆ ಕ್ಯಾನ್ಗಳಲ್ಲಿ ಪವಿತ್ರ ತೀರ್ಥವನ್ನು ಮನೆಗೆ ಕೊಂಡೊಯ್ಯಲಲು ಭಕ್ತರು ನೂಕುನುಗ್ಗಲಿನಲ್ಲಿ ನಿಂತಿರುತ್ತಾರೆ.
ಈ ಬಾರಿ ಮುಂಜಾನೆಯೇ ತೀರ್ಥೋದ್ಭವ ಆಗುತ್ತಿರುವುದರಿಂದ ಸಹಜವಾಗಿಯೇ ಭಕ್ತರ ಸಂಖ್ಯೆ ಹೆಚ್ಚಾಗಲಿದೆ.
Leave a Comment