ಪಟಾಕಿ ಸಿಡಿಸಲು ಕೇವಲ 2 ಗಂಟೆ ಡೆಡ್‌ಲೈನ್; ಗೈಡ್ಲೈನ್ಸ್ನಲ್ಲಿ ಏನೇನಿದೆ..?
ನ್ಯೂಸ್ ಆ್ಯರೋ: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸ್ತಿದೆ. ಸಂಭ್ರಮ-ಸಡಗರದಿಂದ ಹಬ್ಬ ಆಚರಿಸಲು ಭಾರೀ ತಯಾರಿ-ತಾಲೀಮು ನಡೆಯುತ್ತಿದೆ. ಪಟಾಕಿ ಹೊಡೆಯಲು ಯುವಕರು ಕಾತರದಿಂದ ಕಾಯ್ತಿದ್ದಾರೆ. ಹುಷಾರ್ ಬೇಕಾಬಿಟ್ಟಿ ಸಿಕ್ಕ ಸಿಕ್ಕ ಪಟಾಕಿಗಳನ್ನು ಹಚ್ಚುವ ಹಾಗಿಲ್ಲ. ಹಾಗೆ ಮಾಡಿದ್ರೆ ಕಾನೂನು ಕ್ರಮ ಎದುರಿಸಬೇಕಾಗುತ್ತೆ. ಪಟಾಕಿ ಸಿಡಿಸಲು ಪೊಲೀಸ್ ಇಲಾಖೆ ಗೈಡ್‌ಲೈನ್ಸ್ ಸಹ ಹೊರಡಿಸಿದೆ.
ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಈಗಾಗಲೇ ದೇಶಾದ್ಯಂತ ಸಂಭ್ರಮ ಮನೆಮಾಡಿದೆ. ಹೊಸ ಡ್ರೆಸ್ ಹಾಕಿ ಮಿಂಚೋಕೆ ಎಲ್ಲರೂ ತಯಾರಿ ನಡೆಸಿದ್ದಾರೆ. ಮಾತ್ರವಲ್ಲದೇ ಹಬ್ಬಕ್ಕೆ ತರಹೇವಾರಿ ಹಣತೆಗಳು ಸೇರಿದಂತೆ ಸಂಭ್ರಮ ದ್ವಿಗುಣಗೊಳಿಸುವಂತ ಎಲ್ಲ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇತ್ತ ಯುವಕರು ಪಟಾಕಿ ಸಿಡಿಸಲು ಕಾತರದಿಂದ ಕಾಯ್ತಿದ್ದಾರೆ. ಸರ್ಕಾರ ಈ ಸಂಭ್ರಮಕ್ಕೆ ಕೊಂಚ ಕಡಿವಾಣ ಹಾಕಿದೆ.
ಪಟಾಕಿ ಸಿಡಿಸಲು ಗೈಡ್‌ಲೈನ್ಸ್!
- ದೀಪಾವಳಿಗೆ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶ
- ಪರಿಸರಕ್ಕೆ ಹಾನಿಕರ ಪಟಾಕಿ ಹಚ್ಚೋದು ಸಂಪೂರ್ಣ ನಿಷೇಧ
- ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬೇಕು
- ನಿಷೇಧಿತ ಪಟಾಕಿ ಸಿಡಿಸದಂತೆ ತಡೆಯಲು ಅಗತ್ಯ ಕ್ರಮಗಳು
- ನಿಗಧಿತ ಅವಧಿಯನ್ನ ಮೀರಿ ಪಟಾಕಿ ಸಿಡಿಸಿದ್ರೆ ಕೇಸ್ ದಾಖಲು
- ಪರಿಸರ ಸಂರಕ್ಷಣಾ ಕಾಯ್ದೆ 1986, ಶಬ್ಧ ಮಾಲಿನ್ಯ ಕಾಯ್ದೆ-2000
- ಬಿಎನ್‌ಎಸ್ ಆ್ಯಕ್ಟ್ 2023 ಅಡಿಯಲ್ಲಿ ಕೇಸ್ ಬೀಳೋದು ಪಕ್ಕಾ
- ಪಟಾಕಿ ತಯಾರಕರು, ಮಾರಾಟಗಾರರಿಗೂ ಮಾರ್ಗಸೂಚಿ
- ಪಟಾಕಿ ಅವಘಡಗಳು ಆಗದಂತೆ ಮಾರಾಟ ಮಾಡಲು ಸೂಚನೆ
ಪಟಾಕಿ ಹೊಡೆಯುವಾಗ ಸಾಕಷ್ಟು ಬಾರಿ ಕಣ್ಣಿಗೆ ಗಾಯಗಳಾಗುವ ಸಂಭವ ಹೆಚ್ಚು. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಒಟ್ಟಾರೆ ಸುಪ್ರೀಂ ಕೋರ್ಟ್ 125 ಡೆಸಿಬಲ್ಗಿಂತ ಹೆಚ್ಚು ಶಬ್ದ ಮಾಡುವ ಮತ್ತು ಹೆಚ್ಚು ಹೊಗೆ ಹೊರಹೊಮ್ಮುವ ರಾಸಾಯನಿಕ ಪಟಾಕಿಗಳನ್ನು ನಿಷೇಧಿಸಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಪಟಾಕಿ ಸಿಡಿಸೋಕು ಮುನ್ನ ಎಚ್ಚರ.
Leave a Comment