
ಪುತ್ತೂರು : ಯುವತಿಯ ಕತ್ತು ಸೀಳಿ ಕೊಲೆ ಪ್ರಕರಣ – ಕೊಲೆಗೆ ಮೊದಲು ಯುವತಿಯೊಂದಿಗೆ ಕೊಲೆಗಾರ ಜಗಳವಾಡುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ…!!
- ಕರಾವಳಿ
- August 25, 2023
- No Comment
- 192
ನ್ಯೂಸ್ ಆ್ಯರೋ : ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಯುವತಿಯ ಕತ್ತು ಸೀಳಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಕೊಲೆಗೆ ಮೊದಲು ಯುವತಿ ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಕೊಲೆಗಾರ ಜಗಳ ಮಾಡುತ್ತಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿ ಇದೀಗ ಪತ್ತೆಯಾಗಿದೆ.
ಸಾವಿಗೀಡಾದ ಯುವತಿ ಗೌರಿ ಕೆಲಸ ಮಾಡುತ್ತಿದ್ದ ಫ್ಯಾನ್ಸಿ ಅಂಗಡಿಯಲ್ಲಿ ನಡೆದ ಇಬ್ಬರ ನಡುವೆ ಮೊದಲಿಗೆ ಜಗಳ ನಡೆದಿದೆ. ಆರೋಪಿ ಪದ್ಮರಾಜ್ ಯುವತಿಯನ್ನು ಹಿಡಿದು ಎಳೆಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಲಭ್ಯವಾಗಿದೆ.
ಗೌರಿಯ ಮೊಬೈಲ್ ಕಸಿದುಕೊಂಡು ಪದ್ಮರಾಜ್ ಹೋಗಿದ್ದು, ಬಳಿಕ ಮೊಬೈಲ್ ಕೊಡುವಂತೆ ಆರೋಪಿ ಪದ್ಮರಾಜ್ ಗೆ ಯುವತಿ ಕಾಲ್ ಮಾಡಿದ್ದಾಳೆ. ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಬಳಿ ಬರುವಂತೆ ಗೌರಿ ಕರೆದಿದ್ದಾಳೆ.
ಮೊಬೈಲ್ ಕಸಿದು ಮಾಣಿ ಬಳಿ ತೆರಳಿದ್ದ ಆರೋಪಿ ವಾಪಾಸು ಪುತ್ತೂರಿಗೆ ಬೈಕ್ ನಲ್ಲಿ ಬಂದಿದ್ದ. ನೇರವಾಗಿ ದೇವಸ್ಥಾನದ ಕೆರೆ ಸಮೀಪ ಬಂದಿದ್ದ ಪದ್ಮರಾಜ್ ಗೌರಿಯ ಜೊತೆ ಅಲ್ಲೂ ಜಗಳ ಮಾಡಿದ್ದಾನೆ. ಬಳಿಕ ತನ್ನ ಬಳಿ ಇದ್ದ ಚೂರಿಯಿಂದ ಗೌರಿಯ ಕತ್ತು ಸೀಳಿದ್ದು ಗಂಭೀರವಾಗಿ ಗಾಯಗೊಂಡಿದ್ದ ಗೌರಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವು ಕಂಡಿದ್ದಾಳೆ.