ಜಿಯೋ ಹೊಸ ವರ್ಷದ ಬಂಪರ್; 200 ರೂಪಾಯಿ ಒಳಗೆ 3 ಹೈಸ್ಪೀಡ್ 5ಜಿ ಪ್ಲಾನ್!

Jio New Year Bumper
Spread the love

ನ್ಯೂಸ್ ಆ್ಯರೋ: ಭಾರತದ ಖಾಸಗಿ ಟಿಲೆಕಾಂ ಕಂಪನಿಗಳು ತೀವ್ರ ಪೈಪೋಟಿ ಎದುರಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಬಿಎಸ್‌ಎನ್ಎಲ್ ಹೊಸ ಅವತಾರ. ಕಡಿಮೆ ರೀಚಾರ್ಜ್ ಪ್ಲಾನ್, 4ಜಿ ನೆಟ್‌ವರ್ಕ್ ಮೂಲಕ ಬಿಎಸ್‌ಎನ್ಎಲ್ ಗ್ರಾಹಕರ ಸೆಳೆಯುತ್ತಿದೆ. ಇದೀಗ ಜಿಯೋ ಗ್ರಾಹಕರಿಗೆ ಹೈಸ್ಪೀಡ್ 5ಜಿ ಡೇಟಾ, ಅನ್‌ಲಿಮಿಟೆಡ್ ಕಾಲ್, ಎಸ್ಎಂಎಸ್ , ಲೈವ್ ಸ್ಟ್ರೀಮ್, ಒಟಿಟಿ ಪ್ಲಾಟ್‌ಫಾರ್ಮ್ ಸೇರಿದಂತೆ ಹಲವು ಆಫರ್ ನೀಡಿದೆ. ಕೇವಲ 200 ರೂಪಾಯಿ ಒಳಗೆ ಮೂರು 5ಜಿ ಪ್ಲಾನ್ ನೀಡುತ್ತಿದೆ. ಈ ಮೂಲಕ ಗ್ರಾಹಕರು ಅಡೆತಡೆ ಇಲ್ಲದ ಇಂಟರ್ನೆಟ್, ಅನಿಯಮಿತ ಕರೆ ಸೌಲಭ್ಯಗಳನ್ನು ಪಡೆಯಬಹುದು.

ರಿಲಯನ್ಸ್ ಜಿಯೋ ಭಾರತದಲ್ಲಿ ಬರೋಬ್ಬರಿ 49 ಕೋಟಿ ಗ್ರಾಹಕರನ್ನು ಹೊಂದಿದೆ. ಇತ್ತೀಚೆಗೆ ಜಿಯೋ ಸೇರಿದಂತೆ ಖಾಸಗಿ ಟೆಲಿಕಾಂನ ಕೆಲ ಗ್ರಾಹಕರು ಬಿಎಸ್ಎನ್ಎಲ್‌ಗೆ ಪೋರ್ಟ್ ಆಗಿದ್ದರು. ಬಳಿಕ ಖಾಸಗಿ ಟೆಲಿಕಾಂ ಹೊಸ ಹೊಸ ಆಫರ್ ನೀಡುತ್ತಿದೆ. ಜಿಯೋ ತನ್ನ ಗ್ರಾಹಕರಿಗೆ ನೀಡುತ್ತಿರುವ ಕೈಗೆಟುಕುವ ದರದ ಟ್ರು 5ಜಿ ಮೂರು ಆಫರ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ರಿಲಯನ್ಸ್ ಜಿಯೋ ಟ್ರು 5 ಜಿ ಪ್ಲಾನ್ ಅಡಿಯಲ್ಲಿ ಕೇವಲ 189 ರೂಪಾಯಿ ಪ್ಲಾನ್ ನೀಡುತ್ತಿದೆ. ವಿಶೇಷ ಅಂದರೆ 28 ದಿನದ ವ್ಯಾಲಿಟಿಡಿ ಇದಕ್ಕಿದೆ. 2 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಇನ್ನು ಅನ್‌ಲಿಮಿಟೆಡ್ ಕರೆ ಹಾಗೂ ಪ್ರತಿ ದಿನ 100 ಎಸ್ಎಂಎಸ್ ಕೂಡ ಉಚಿತವಾಗಿ ಸಿಗಲಿದೆ. ಇದರ ಜೊತೆಗೆ 28 ದಿನ ಜಿಯೋ ಟಿವಿ,ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಉಚಿತ ಸಬ್‌ಸ್ಕ್ರಿಪ್ಶನ್ ಸಿಗಲಿದೆ. ಈ ಪ್ಲಾನ್‌ನಲ್ಲಿರುವ ಒಟ್ಟು ಡೇಟಾ 2 ಜಿಬಿ.

ಜಿಯೋ 198 ರೂಪಾಯಿ 5ಜಿ ಪ್ಲಾನ್:
ಹೈಸ್ಪೀಡ್ 5 ಜಿ ಪ್ಲಾನ್ ಪೈಕಿ 198 ರೂಪಾಯಿ ಆಫರ್‌ನಲ್ಲಿ ಗ್ರಾಹಕರು ಪ್ರತಿ ದಿನ 2 ಜಿಬಿ ಡೇಟಾ ಉಚಿತವಾಗಿ ಪಡೆಯಲಿದ್ದಾರೆ. ಪ್ರತಿ ದಿನದ ನಿಗದಿತ ಡೇಟಾ ಮುಗಿದ ಬಳಿಕ ನೆಟ್ ಸ್ಪೀಡ್ ಕಡಿಮೆಯಾಗಲಿದೆ. ಇದರ ವ್ಯಾಲಿಟಿಡಿ 14 ದಿನ. ಈ ಪ್ಲಾನ್ ರೀಚಾರ್ಜ್ ಮಾಡಿಕೊಂಡರೆ ಒಟ್ಟು 28 ಜಿಬಿ 5ಜಿ ಸ್ಪೀಡ್ ಡೇಟಾ ಲಭ್ಯವಾಗಲಿದೆ.

ಜಿಯೋ 199 ರೂಪಾಯಿ ಪ್ಲಾನ್:
ರಿಲಯನ್ಸ್ ಜಿಯೋ ಪ್ಲಾನ್ 199 ರೂಪಾಯಿ ಪ್ಲಾನ್ ಕೂಡ ಹಲವು ಸೌಲಭ್ಯ ನೀಡುತ್ತಿದೆ. ಪ್ರತಿ ದಿನ 1.5ಜಿಬಿ ಡೇಟಾ ಈ ಪ್ಲಾನ್ ಮೂಲಕ ಗ್ರಾಹಕರಿಗೆ ಸಿಗಲಿದೆ. ಇನ್ನು ಅನ್‌ಲಿಮಿಟೆಡ್ ಕಾಲ್ ಸೌಲಭ್ಯವೂ ಸಿಗಲಿದೆ. ಪ್ರತಿ ದಿನ 100 ಎಸ್ಎಂಸ್ ಕೂಡ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಉಚಿತ ಸಬ್‌ಸ್ಕ್ರಿಪ್ಶನ್ ಸಿಗಲಿದೆ. ಕೇವಲ 200 ರೂಪಾಯಿ ಒಳಗೆ ಜಿಯೋ ಈ ಮೂರು ಪ್ಲಾನ್ ನೀಡುತ್ತಿದೆ. ಗ್ರಾಹಕರು ತಮ್ಮ ಅವಶ್ಯಕತೆಗೆ ತಕ್ಕಂತೆ ಆಫರ್ ಬಳಸಿಕೊಳ್ಳಬಹುದು.

Leave a Comment

Leave a Reply

Your email address will not be published. Required fields are marked *

error: Content is protected !!