ಅಶ್ಲೀಲ ಪದ ಬಳಕೆ, ರಣರಂಗವಾದ ದೊಡ್ಮನೆ ; ಸಿಟ್ಟಲ್ಲಿ ಕೂಗಾಡಿದ ಬಿಗ್ ಬಾಸ್
ನ್ಯೂಸ್ ಆ್ಯರೋ: ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಕಿತ್ತಾಟ ಜೋರಾಗಿದೆ. ಇದರಿಂದ ಇಡೀ ಮನೆಯ ವಾತಾವರಣ ಹದಗೆಡುತ್ತಿದೆ. ಪ್ರತಿ ವಿಚಾರಕ್ಕೆ ಜಗದೀಶ್ ಅವರು ಮೂಗು ತೂರಿಸುತ್ತಿದ್ದಾರೆ. ಇದು ಮನೆಯವರಿಗೆ ಇಷ್ಟ ಆಗುತ್ತಿಲ್ಲ. ಜಗದೀಶ್ ಹಾಗೂ ಮಂಜು ಏಕವಚನದಲ್ಲಿ ಕೂಗಾಡಿಕೊಂಡಿದ್ದಾರೆ. ಬಿಗ್ ಬಾಸ್ನ ಆದೇಶಕ್ಕೂ ಯಾರೂ ಕಿಮ್ಮತ್ತು ಕೊಟ್ಟಿಲ್ಲ. ಆ ಬಳಿಕ ಬಿಗ್ ಬಾಸ್ ‘ಸದ್ದು’ ಎಂದು ಕೂಗಿದ್ದಾರೆ. ಆ ಬಳಿಕ ಎಲ್ಲರೂ ಶಾಂತರಾದರು.
ಶಿಶಿರ್ ಅವರು ತಮ್ಮ ಮೊದಲ ನಾಮಿನೇಷನ್ ಧರ್ಮ ಅವರು ಎಂದು ಹೇಳುತ್ತಾರೆ. ಇದಕ್ಕೆ ಲಾಯರ್ ಜಗದೀಶ್ ಅವರು ನೀವು ಅವರನ್ನು ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ನನಗನಿಸುತ್ತಿದೆ ಎಂದಿದ್ದಾರೆ. ಈ ವೇಳೆ ಮಾನಸ ಎಲ್ಲದಕ್ಕೂ ಬಾಯಿ ಹಾಕುತ್ತಿರಲ್ಲ ಎಂದು ಜಗದೀಶ್ ಅವರಿಗೆ ಆವಾಜ್ ಹಾಕಿದ್ದಾರೆ. ಆಗ ಮನೆ ಮಂದಿಯೆಲ್ಲ ಎದ್ದು ಜಗಳಕ್ಕೆ ನಿಂತಿದ್ದಾರೆ.
ನಾಮಿನೇಟ್ ಆದವರೇ ಸುಮ್ಮನೆ ಇದ್ದಾರೆ, ನಿಂದೇನು ಲೇ, ಹೋಗಲೇ, ನಿಮ್ಮನೇ ಮುಂದೆ ನಿಂತಿದ್ದೇನಾ? ಎಂದು ಜಗದೀಶ್ಗೆ ತ್ರಿವಿಕ್ರಮ್ ಏಕವಚನದಲ್ಲೇ ಹೇಳಿದ್ದಾರೆ. ಇದೇ ವೇಳೆ ಮಂಜು ಬಂದು ಥೂ ನಿನ್ನ ಯೋಗ್ಯತೆಗೆ, ಹೋಗಲೇ.. ಹೋಗಲೇ.. ಎಂದು ಜಗದೀಶ್ಗೆ ಹೇಳಿದ್ದಾರೆ. ಇನ್ನು ಈ ರೀತಿ ಹೇಳುವಾಗ ಜಗದೀಶ್ ಹಾಗೂ ಮಂಜು ಇಬ್ಬರು ಫೇಸ್ ಟು ಫೇಸ್ ಇದ್ದರು. ಇದೇ ವೇಳೆ ಬಿಗ್ ಬಾಸ್ ಎಂಟ್ರಿಯಾಗಿದ್ದು ಈ ಕೂಡಲೇ ಸೋಫಾದಲ್ಲಿ ಕುಳಿತುಕೊಳ್ಳಿ ಎಂದು ಹೇಳಿದ್ದಾರೆ. ಹೀಗೆ ಹೇಳುವಾಗಲೂ ಸ್ಪರ್ಧಿಗಳೆಲ್ಲ ಗುಂಪಾಗಿಯೇ ಇದ್ದರು.
ಇನ್ನು ಜಗದೀಶ್ ವರ್ತನೆಗೆ ಮನೆಯವರ ಜೊತೆಗೆ ಬಿಗ್‌ಬಾಸ್ ಕೂಡ ಬೇಸತ್ತಿದ್ದಂತೆ ಕಾಣುತ್ತಿದೆ. ಮೊದಲ ವಾರದಲ್ಲಿ ಜಗದೀಶ್ ಬಗ್ಗೆ ಹಗುರವಾಗಿ ಮಾತನಾಡಿದ್ದ ಜಗದೀಶ್ ಎರಡನೇ ವಾರ ಲವರ್ ಬಾಯ್ ತರ ಕಾಣಿಸಿಕೊಂಡಿದ್ದರು. ಇದೀಗ ಮೂರನೇ ವಾರ ಮತ್ತದೇ ಮೊದಲ ವಾರದ ವರ್ತನೆ ಕಾಣಿಸಿಕೊಂಡಿದೆ. ಮೂರನೇ ವಾರದ 15 ನೇ ದಿನದ ಎಪಿಸೋಡ್ ನಲ್ಲಿ ಕೆಲವು ಅಶ್ಲೀಲ ಪದಗಳನ್ನು ಬಿಗ್‌ಬಾಸ್ ವಿರುದ್ಧ ಬಳಸಿದ್ದು, ಕ್ಯಾಮೆರಾ ಮುಂದೆ ನಿಂತು ತನಗೆ ಮನಬಂದಂತೆ ಬೈದಿದ್ದಾರೆ. ಜೊತೆಗೆ ನಾನು ಇಂದೇ ಶೋ ನಿಂದ ಹೊರಹೋಗುತ್ತೇನೆ ಕಳುಹಿಸಿ ಎಂದು ಹೇಳಿದ್ದಾರೆ. ಜಗದೀಶ್ ಅವರ ಆಡಿರುವ ಕೆಲವು ಅಶ್ಲೀಲ ಪದಗಳಿಗೆ ಬಿಗ್‌ಬಾಸ್ ಬೀಪ್ ಪದ ಹಾಕಿದ್ದಾರೆ.
Leave a Comment