ಸೂರ್ಯ ಶಿಕಾರಿಯಲ್ಲಿ ಮತ್ತೊಂದು ಮೈಲಿಗಲ್ಲು; ಪ್ರೋಬಾ -3 ನೌಕೆಯನ್ನು ಕಕ್ಷೆಗೆ ಸೇರಿಸಿದ ಇಸ್ರೋ
ನ್ಯೂಸ್ ಆ್ಯರೋ: ಇಸ್ರೋ ಮತ್ತೊಂದು ಸಾಧನೆ ಮಾಡಿದೆ. ಜಾಗತಿಕ ಬಾಹ್ಯಾಕಾಶ ಆವಿಷ್ಕಾರ ಹಾಗೂ ಸಹಯೋಗಕ್ಕೆ ಕೈಜೋಡಿಸಿರುವ ಇಸ್ರೋ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಪ್ರೋಬಾ-3 ನೌಕೆಯನ್ನ ಯಶಸ್ವಿಯಾಗಿ ನಭಕ್ಕೆ ಹಾರಿಸಿದೆ. ಇದು ಇಸ್ರೋದ ವಾಣಿಜ್ಯ ಬಾಹ್ಯಾಕಾಶ ಮಿಷನ್ ಆಗಿದ್ದು ಯಶಸ್ವಿ ಉಡ್ಡಯನ ನಡೆದಿದೆ.
550 ಕೆಜಿ ತೂಕದ ಪ್ರೋಬಾ- 3 ಮಿಷನ್ ಅನ್ನ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ನಿಲ್ದಾಣದಿಂದ ಪಿಎಸ್‌ಎಲ್‌ವಿ ಸಿ-59 ರಾಕೆಟ್ ಮೂಲಕ ನಭಕ್ಕೆ ಹಾರಿಸಲಾಗಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಎರಡು ಉಪಗ್ರಹಗಳನ್ನ ಹೊತ್ತ ಇಸ್ರೋ ವಿಶ್ವಾಸಾರ್ಹ ಪಿಎಸ್‌ಎಲ್‌ವಿ ರಾಕೆಟ್ ಅನ್ನ ಡಿ.5ರಂದು ಸಂಜೆ 4 ಗಂಟೆ 4 ನಿಮಿಷಕ್ಕೆ ಇಲ್ಲಿನ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಿದೆ.
ಅಂದಾಜು 9.2 ಕೋಟಿ ರೂಪಾಯಿ ವೆಚ್ಚದಲ್ಲಿ ಈ ನೌಕೆಯನ್ನು ಯುರೋಪಿಯನ್ ಸ್ಪೇಸ್ ಏಜೆನ್ಸಿ ನಿರ್ಮಾಣ ಮಾಡಿದ್ದು 2 ವರ್ಷಗಳ ಕಾಲ ಸೂರ್ಯನ ಅಧ್ಯಯನ ಮಾಡಲಿದೆ. ಈ ಎರಡು ವರ್ಷದ ಅವಧಿಯಲ್ಲಿ ಸರಿಸುಮಾರು 6 ಗಂಟೆಗಳ ಕಾಲ ಕೃತಕ ಸೂರ್ಯಗ್ರಹಣವನ್ನು ಈ ನೌಕೆ ಉಂಟು ಮಾಡಲಿದೆ.
ಪ್ರೋಬಾ 3 ಕರೋನಾಗ್ರಾಫ್, ಅಕಲ್ಟರ್ ಉಪಗ್ರಹಗಳನ್ನ ಹೊಂದಿದೆ. ಸೂರ್ಯನಿಗಿಂತ ಬಿಸಿಯಾಗಿರುತ್ತೆ, ಹವಾಮಾನವನ್ನು ನಿರ್ಧರಿಸುತ್ತೆ. ಸೌರ ರಿಮ್ ಅನ್ನ ತಲುಪಲು ಆರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅಪೇಕ್ಷಿತ ಕಕ್ಷೆಯನ್ನು ತಲುಪಲು 18 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
Leave a Comment