ಇಸ್ಕಾನ್ ಬ್ಯಾನ್​ಗೆ ನಿರ್ಧಾರ, ಹೈಕೋರ್ಟ್​ನಲ್ಲಿ ಕೇಸ್; ಇತ್ತ ಸನ್ಯಾಸಿ ಚಿನ್ಮೋಯ್​ ಕೃಷ್ಣದಾಸ್ ಬ್ರಹ್ಮಚಾರಿ ಬಂಧನ

Bangla
Spread the love

ನ್ಯೂಸ್ ಆ್ಯರೋ: ಪ್ರಸ್ತುತ ಬಾಂಗ್ಲಾದೇಶ ದೊಡ್ಡ ಪ್ರಕ್ಷುಬ್ಧತೆ ಎದುರಿಸುತ್ತಿದೆ. ಹಿಂದೂಗಳ ಮೇಲಿನ ದಾಳಿ, ಧಾರ್ಮಿಕ ಮುಖಂಡ ಶ್ರೀ ಚಿನ್ಮೋಯ್ ಕೃಷ್ಣ ದಾಸ್ ಬಂಧನ ಬೆನ್ನಲ್ಲೇ ಇಸ್ಕಾನ್ ಬ್ಯಾನ್ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ.

ಇಸ್ಕಾನ್ ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗಾಗಿ ಹೋರಾಡುತ್ತಿರುವ ಸಂಘಟನೆ ಆಗಿದೆ. ಇಸ್ಕಾನ್ ಸಂಘಟನೆಯನ್ನು ಧಾರ್ಮಿಕ ಮೂಲಭೂತವಾದಿ ಸಂಘಟನೆ ಎಂದು ಬಾಂಗ್ಲಾ ಸರ್ಕಾರ ಕರೆದಿದೆ. ಅದನ್ನು ಬ್ಯಾನ್ ಮಾಡುವ ಪ್ರಕ್ರಿಯೆ ಶುರುವಾಗಿದೆ ಎಂದು ಘೋಷಣೆ ಮಾಡಿದೆ.

ಬಾಂಗ್ಲಾ ಸರ್ಕಾರದ ನಿರ್ಧಾರ ಪ್ರಶ್ನಿಸಿ ಅಲ್ಲಿನ ಹಿಂದೂಗಳು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಇಸ್ಕಾನ್ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನೆ ಮಾಡಲಾಗಿದೆ. ಅಂತೆಯೇ ಅಲ್ಲಿನ ಹೈಕೋರ್ಟ್ ಬಾಂಗ್ಲಾ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಅದಕ್ಕೆ ಬಾಂಗ್ಲಾದೇಶ ಸರ್ಕಾರದ ಅಟಾರ್ನಿ ಜನಲ್, ಇಸ್ಕಾನ್ ಧಾರ್ಮಿಕ ಮೂಲಭೂತವಾದಿ ಸಂಘಟನೆ ಎಂದು ವಾದಿಸಿದ್ದಾರೆ. ಇಸ್ಕಾನ್ ಕುರಿತ ನಿಲುವು ಮತ್ತು ದೇಶದ ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಿಸಲು ರೂಪುರೇಷಗಳ ಬಗ್ಗೆ ವಿವರಿಸುವಂತೆ ಸರ್ಕಾರಕ್ಕೆ ಕೋರ್ಟ್ ಕೇಳಿದೆ. ಹಿಂದೂಗಳ ಮೇಲೆ ದಾಳಿಯಾಗದಂತೆ, ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ.

ಬಾಂಗ್ಲಾದೇಶದ ರಂಗಾಪುರ, ಚಿತ್ತಗಾಂಗ್ ಸೇರಿದಂತೆ ವಿವಿಧೆಡೆ ಹಿಂದೂಗಳ ರಕ್ಷಣೆಗಾಗಿ ಪ್ರತಿಭಟನೆ, ಹೋರಾಟ ನಡೆಯುತ್ತಿವೆ. ಇಸ್ಕಾನ್ ವಿರುದ್ಧದ ಕ್ರಮಕ್ಕೆ ಭಾರತ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ನವೆಂಬರ್ 25 ರಂದು ಬಾಂಗ್ಲಾದೇಶ ದೇಶದ್ರೋಹದ ಆರೋಪದ ಮೇಲೆ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಬಂಧಿಸಿದೆ. ಕೋರ್ಟ್​ನಲ್ಲಿ ಜಾಮೀನು ನೀಡದೇ ನೇರವಾಗಿ ಜೈಲಿಗೆ ಕಳುಹಿಸಿದೆ. ಇದನ್ನು ಖಂಡಿಸಿ ಚಿನ್ಮೋಯ್ ಬ್ರಹ್ಮಚಾರಿ ಅವರ ಭಕ್ತರು, ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇಸ್ಕಾನ್ ಏಕೆ ಗುರಿಯಾಗುತ್ತಿದೆ?:

ಬಾಂಗ್ಲಾದೇಶದಲ್ಲಿ, ಇಸ್ಕಾನ್ ಹಿಂಸಾಚಾರವನ್ನು ಪ್ರಚೋದಿಸುತ್ತದೆ ಮತ್ತು ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿದೆ ಎಂದು ಆರೋಪಿಸಲಾಗಿದೆ. ರಾಜಕೀಯ ಪಕ್ಷವು ಬೇರೆ ಯಾವುದೂ ಅಲ್ಲ, ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್. ದೇಶದಲ್ಲಿ ಸಕ್ರಿಯವಾಗಿರುವ ಅನೇಕ ಮೂಲಭೂತವಾದಿ ಗುಂಪುಗಳು ಅವಾಮಿ ಲೀಗ್ ಅನ್ನು ವಿರೋಧಿಸುತ್ತವೆ. #BanISKCON ಮತ್ತು #ISKCONisTerrorist ನಂತಹ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಈ ಸಂಘಟನೆಯನ್ನು ಬೆದರಿಕೆ ಎಂದು ಬಿಂಬಿಸಲಾಗುತ್ತಿದ್ದು, ನಿಷೇಧಕ್ಕೆ ಆಗ್ರಹಿಸಲಾಗುತ್ತಿದೆ. ಧಾರ್ಮಿಕ ಕಿರುಕುಳದ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಇಸ್ಕಾನ್ ಸದಸ್ಯರ ವಿರುದ್ಧ ಹಿಂಸಾತ್ಮಕ ಘಟನೆಗಳು ನಡೆದಾಗ ಈ ಅಭಿಯಾನವು ಮತ್ತಷ್ಟು ವೇಗವನ್ನು ಪಡೆಯಿತು.

Leave a Comment

Leave a Reply

Your email address will not be published. Required fields are marked *

error: Content is protected !!