ಭರ್ಜರಿ ಡಿಸ್ಕೌಂಟ್ ನಲ್ಲಿ ಸಿಗ್ತಿದೆ iPhone 16 Pro; ಫ್ಲಿಪ್‌ಕಾರ್ಟ್‌ನಲ್ಲಿ ಸೂಪರ್ ಆಫರ್

ನ್ಯೂಸ್ ಆ್ಯರೋ: ಆ್ಯಪಲ್‌ನ ಐಫೋನ್ 16 ಪ್ರೊ ತಗೊಳ್ಳೋ ಪ್ಲಾನ್ ಇದ್ರೆ ಇದಕ್ಕಿಂತ ಸೂಪರ್ ಟೈಮ್ ಬೇರೆ ಇಲ್ಲ. ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 16 ಪ್ರೊ ಮೇಲೆ ₹7,000 ಡಿಸ್ಕೌಂಟ್ ಸಿಗ್ತಿದೆ. ಹೊಸ ಫೋನ್ ತಗೊಳ್ಳೋರಿಗೂ, ಹಳೆ ಫೋನ್ ಬದಲಿಸೋರಿಗೂ ಇದು ಸೂಪರ್ ಆಫರ್. ಎಕ್ಸ್‌ಚೇಂಜ್ ಆಫರ್‌ನಲ್ಲೂ ಭರ್ಜರಿ ಡಿಸ್ಕೌಂಟ್ ಸಿಗುತ್ತೆ.
ಐಫೋನ್ 16 ಪ್ರೊ ಭಾರತದಲ್ಲಿ ₹1,19,900ಕ್ಕೆ ಲಾಂಚ್ ಆಗಿತ್ತು. 128ಜಿಬಿ ಸ್ಟೋರೇಜ್ ಇರೋ ಡೆಸರ್ಟ್ ಟೈಟಾನಿಯಂ ಫಿನಿಶ್ ಫೋನ್ ಈಗ ಫ್ಲಿಪ್‌ಕಾರ್ಟ್‌ನಲ್ಲಿ 5% ಡಿಸ್ಕೌಂಟ್ ನಂತರ ₹1,12,900ಕ್ಕೆ ಸಿಗ್ತಿದೆ. ಫ್ಲಿಪ್‌ಕಾರ್ಟ್‌ನ ಎಕ್ಸ್‌ಚೇಂಜ್ ಆಫರ್‌ನಲ್ಲಿ ಇನ್ನೂ ಕಡಿಮೆ ಬೆಲೆಗೆ ಫೋನ್ ತಗೊಳ್ಬಹುದು. ಐಫೋನ್ 14 ಪ್ರೊ ಎಕ್ಸ್‌ಚೇಂಜ್ ಮಾಡಿದ್ರೆ ₹41,200 ಡಿಸ್ಕೌಂಟ್ ಸಿಗುತ್ತೆ. ಹೀಗಾಗಿ ಫೋನ್‌ನ ಬೆಲೆ ₹71,700 ಆಗುತ್ತೆ. ಇದರ ಜೊತೆಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಲ್ಲಿ ತಗೊಂಡ್ರೆ ₹3,000 ಡಿಸ್ಕೌಂಟ್ ಸಿಗುತ್ತೆ. ಹೀಗಾಗಿ ಫೋನ್‌ನ ಬೆಲೆ ಕೇವಲ ₹68,700 ಆಗುತ್ತೆ. ಹಳೆ ಫೋನ್ ಬದಲಿಸೋರಿಗೆ ಇದು ಸೂಪರ್ ಆಫರ್.
ಐಫೋನ್ 16 ಪ್ರೊ ಸೀರಿಸ್‌ನಲ್ಲಿ ಹೊಸ ಗೋಲ್ಡ್ ಕಲರ್ ಆಪ್ಶನ್ ಸಿಗುತ್ತೆ. ಐಫೋನ್ 16 ಪ್ರೊ 6.3 ಇಂಚ್ ಡಿಸ್‌ಪ್ಲೇ ಇದೆ. ಐಫೋನ್ 16 ಪ್ರೊ ಮ್ಯಾಕ್ಸ್ 6.9 ಇಂಚ್ ಡಿಸ್‌ಪ್ಲೇ ಇದೆ. ಇದು ಇದುವರೆಗಿನ ಎಲ್ಲಾ ಐಫೋನ್‌ಗಳಿಗಿಂತ ದೊಡ್ಡದು. ಎರಡೂ ಫೋನ್‌ಗಳಲ್ಲೂ ತೆಳುವಾದ ಬೆಜಲ್‌ಗಳು ಮತ್ತು 120Hz ಪ್ರೊಮೋಶನ್ ಡಿಸ್‌ಪ್ಲೇ ಇದೆ. ಬ್ಲ್ಯಾಕ್ ಟೈಟಾನಿಯಂ, ವೈಟ್ ಟೈಟಾನಿಯಂ, ನ್ಯಾಚುರಲ್ ಟೈಟಾನಿಯಂ ಮತ್ತು ಹೊಸ ಡೆಸರ್ಟ್ ಟೈಟಾನಿಯಂ ಫಿನಿಶ್‌ನಲ್ಲಿ ಫೋನ್ ಸಿಗುತ್ತೆ.
ಇನ್ನು ಐಫೋನ್ 16 ಪ್ರೊದಲ್ಲಿ ಆ್ಯಪಲ್‌ನ 3nm A18 ಪ್ರೊ ಚಿಪ್‌ಸೆಟ್ ಇದೆ. 3367 mAh ಬ್ಯಾಟರಿ ಇದೆ. ಇದು 24 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ನೀಡುತ್ತೆ. 48 MP ಮೇನ್ ಕ್ಯಾಮೆರಾ, 48 MP ಅಲ್ಟ್ರಾವೈಡ್ ಲೆನ್ಸ್ ಮತ್ತು 5x ಆಪ್ಟಿಕಲ್ ಜೂಮ್ ಇರೋ 12 MP ಟೆಲಿಫೋಟೋ ಸೆನ್ಸರ್ ಇದೆ. ಸೆಲ್ಫಿಗಾಗಿ 12 MP ಕ್ಯಾಮೆರಾ ಇದೆ.
Leave a Comment