ಸರಕು ಸಾಗಾಣಿಕೆ ಹಡಗುಗಳ ಮೈಲೇಜ್ ಎಷ್ಟಿರುತ್ತೆ? – ಲೆಕ್ಕಾಚಾರ ಹೇಗೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ..

ಸರಕು ಸಾಗಾಣಿಕೆ ಹಡಗುಗಳ ಮೈಲೇಜ್ ಎಷ್ಟಿರುತ್ತೆ? – ಲೆಕ್ಕಾಚಾರ ಹೇಗೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ..

ನ್ಯೂಸ್ ಆ್ಯರೋ‌ : ವಸ್ತು, ಉತ್ಪನ್ನಗಳನ್ನು ಬೃಹತ್ ಪ್ರಮಾಣದಲ್ಲಿ ಪ್ರಪಂಚದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವಲ್ಲಿ ಸರಕು ಸಾಗಾಣಿಕೆ ಹಡಗು (ಕಾರ್ಗೋ ಹಡಗು) ಗಳ ಪಾತ್ರ ಹಿರಿದು. ಆಹಾರ ಉತ್ಪನ್ನಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಇವು ಸಾಗಿಸುತ್ತವೆ. ಸಾಗರ, ಜಲ ಮಾರ್ಗಗಳಲ್ಲಿ ಸಾಗಲು ಈ ಹಡಗುಗಳಿಗೆ ಅಪಾರ ಪ್ರಮಾಣದಲ್ಲಿ ಇಂಧನಗಳ ಆವಶ್ಯಕತೆ ಇದೆ. ಆ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಮೈಲೇಜ್ ಮೇಲೆ ಪ್ರಭಾವ ಬೀರುವ ಅಂಶಗಳು

ಪ್ರತಿ ಮೈಲಿಗೆ ಸರಕು ಸಾಗಣೆ ಹಡಗಿಗೆ ಬಳಸಲ್ಪಡುವ ಇಂಧನ ಅದರ ನಿರ್ವಹಣಾ ವೆಚ್ಚ, ಪ್ರಕೃತಿಯ ಮೇಲಾಗುವ ಪರಿಣಾಮ, ನಿಗದಿತ ಸಮುದ್ರ ಯಾನಕ್ಕಾಗಿ ಎಷ್ಟರ ಮಟ್ಟಿಗೆ ಇಂಧನ ಸಾಗಿಸಬೇಕು ಎನ್ನುವ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ. ಇನ್ನು ಈ ಹಡಗುಗಳು ಸಾಗಲು ಪ್ರತಿ ಮೈಲಿಗೆ ಬೇಕಾಗುವ ಇಂಧನಗಳ ಮೇಲೆ ವಿವಿಧ ಅಂಶಗಳು ಪ್ರಭಾವ ಬೀರುತ್ತವೆ. ಅವುಗಳು ಯಾವುವು ಎಂದು ನೋಡೋಣ.

ಗಾತ್ರ ಮತ್ತು ರಚನೆ

ಮೈಲೇಜ್ ಮೇಲೆ ಅತೀ ಹೆಚ್ಚು ಪ್ರಭಾವ ಬೀರುವ ಘಟಕ ಎಂದರೆ ಹಡಗಿನ ಗಾತ್ರ ಮತ್ತು ರಚನೆ. ಬೃಹತ್ ಹಡಗುಗಳು ತಮ್ಮ ಭಾರವನ್ನು ಸಾಗಿಸಲು ಅಧಿಕ ಪ್ರಮಾಣದ ಇಂಧನ ಬೇಡುತ್ತವೆ. ಆದರೆ ಹೊಸ ರೀತಿಯ ರಚನೆ ಇಂಧನ ಬಳಕೆಯನ್ನು ಕಡಿಮೆ ಮಾಡಬಲ್ಲದು.

ಎಂಜಿನ್ ನ ಶಕ್ತಿ ಮತ್ತು ದಕ್ಷತೆ

ಹಡಗಿನ ಎಂಜಿನ್ ಅನ್ನು ಇಂಧನದ ಪ್ರಾಥಮಿಕ ಗ್ರಾಹಕ ಎಂದು ಕರೆಯಲಾಗುತ್ತದೆ. ಹೀಗಾಗಿ ಎಂಜಿನ್ ನ ಶಕ್ತಿ ಮತ್ತು ದಕ್ಷತೆ ಪ್ರತಿ ಮೈಲಿಗೆ ಬಳಸ್ಪಡುವ ಇಂಧನದ ಪ್ರಮಾಣದ ಮೇಲೆ ನೇರ ಪರಿಣಾಮ ಬೀರುತ್ತದೆ. ಆಧುನಿಕ ಎಂಜಿನ್ ತಂತ್ರಜ್ಞಾನಗಳು ಕಡಿಮೆ ಇಂಧನ ಬೇಡುತ್ತವೆ ಮತ್ತು ಅಲ್ಪ ಪ್ರಮಾಣದಲ್ಲಿ ಹೊಗೆ ಹೊರ ಸೂಸುತ್ತವೆ.

ವೇಗ

ಹಡಗಿನ ವೇಗ ಮತ್ತು ಅದನ್ನು ಚಲಾಯಿಸುವ ರೀತಿಯೂ ಇಂಧನ ಬಳಕೆ ಮೇಲೆ ಪ್ರಭಾವ ಬೀರುತ್ತದೆ. ಅತೀ ವೇಗದಲ್ಲಿ ಸಾಗಲು ಹೆಚ್ಚಿನ ಶಕ್ತಿಯ ಅಗತ್ಯವಿದೆ. ಇದಕ್ಕಾಗಿ ಹೆಚ್ಚಿನ ಇಂಧನ ಬೇಕಾಗುತ್ತದೆ. ಅಲ್ಲದೆ ಪ್ರವಾಹ, ಬಲವಾದ ಗಾಳಿಯ ಹೊಡೆತದಂತಹ ಹವಾಮಾನ ವೈಪರೀತ್ಯಗಳು ಇಂಧನ ಬಳಕೆಯನ್ನು ಹೆಚ್ಚಿಸಬಲ್ಲ ಅಂಶಗಳು. ನಿಧಾನವಾಗಿ ಚಲಿಸುವುದರಿಂದ ಶೇ. 30ರಷ್ಟು ಇಂದನ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

ಸರಕುಗಳ ಭಾರ ಮತ್ತು ವಿತರಣೆ

ಅತಿಯಾದ ಭಾರ ಹೊಂದಿರುವ ಸರಕುಗಳನ್ನು ಸಾಗಿಸಲು ಹಡಗುಗಳಿಗೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಜೊತೆಗೆ ಅಲ್ಲಲ್ಲಿ ವಿತರಣೆ ಇದ್ದಾಗಲೂ ಇಂಧನ ಹೆಚ್ಚಿನ ಪ್ರಮಾಣದಲ್ಲಿ ಖರ್ಚಾಗುತ್ತದೆ.

ಪ್ರಯಾಣದ ದೂರ

ಹಡಗು ಪ್ರಯಾಣಿಸುವ ದೂರ ಮತ್ತು ಸಂಚಾರದ ಮಾರ್ಗದ ಮೇಲೆಯೂ ಇಂಧನ ಕಾರ್ಯಕ್ಷಮತೆ ನಿರ್ಧಾರವಾಗುತ್ತದೆ. ದೀರ್ಘ ದೂರದ ಮಾರ್ಗಗಳಿಗೆ ಸಹಜವಾಗಿ ಹೆಚ್ಚಿನ ಇಂಧನದ ಅಗತ್ಯವಿದೆ. ಅನುಕೂಲಕರ ವಾತಾರಣದಲ್ಲಿ ಸಂಚರಿಸುವುದರಿಂದ ಇಂಧನ ಬಳಕೆಯನ್ನು ಕಡಿಮೆ ಮಾಡಬಹುದು.

ನಿರ್ವಹಣೆ

ಉತ್ತಮ ನಿರ್ವಹಣೆಯಿಂದ ಇಂಧನ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಸಿಬ್ಬಂದಿಗೆ ಹಡಗನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಮತ್ತು ನಿಯಮಿತವಾಗಿ ಪರೀಕ್ಷಿಸುವಂತೆ ತರಬೇತಿ ನೀಡುವುದರ ಮೂಲಕ ಇಂಧನದ ಮೇಲಿನ ಅನಗತ್ಯ ಖರ್ಚನ್ನು ಉಳಿಸಬಹುದು.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *