Arun Kumar Putthila : ಆಡಿಯೋ ವೈರಲ್ ಬಳಿಕ ಮಹಿಳೆಗೆ ಕೊಲೆ ಬೆದರಿಕೆ, ಪೋಲಿಸ್ ದೂರು – ವೈರುಧ್ಯ ವರದಿ ಪ್ರಕಟಿಸದಂತೆ ತಡೆಯಾಜ್ಞೆ ತಂದ ಪುತ್ತಿಲ
ನ್ಯೂಸ್ ಆ್ಯರೋ : ಕರಾವಳಿಯಲ್ಲಿ ಭಾರೀ ವೈರಲ್ ಆದ ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ಗೆಳತಿಯ ಆಡಿಯೋಗೆ ಸಂಬಂಧಿಸಿ ಇದೀಗ ಬೆದರಿಕೆ ಕರೆಗಳು ಬರುವ ಹಂತಕ್ಕೆ ತಲುಪಿದೆ. ಮೂಲತಃ ಶಿರಸಿ ಮೂಲದ ಮಹಿಳೆ ಪುತ್ತೂರಿನ ಸಾಮೆತ್ತಡ್ಕದಲ್ಲಿ ವಾಸ್ತವ್ಯವಿರುವ ಮಹಿಳೆ ಮತ್ತು ಪುತ್ತಿಲ ಅವರು ಮಾತನಾಡಿದ ಆಡಿಯೋ ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಆ ಆಡಿಯೋದಲ್ಲಿ ಮಾತನಾಡಿರುವ ಮಹಿಳೆಗೆ ಬೆದರಿಕೆ ಕರೆಗಳು ಬರುತ್ತಿದ್ದು, ಈ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೆದರಿಕೆಗೆ ಸಂಬಂಧಿಸಿ ಆರೋಪ ಮಾಡಿರುವ ಮಹಿಳೆ ಕಳೆದ ರಾತ್ರಿ ಪುತ್ತಿಲ ಪರಿವಾರದ ಮಾಜಿ ಸದಸ್ಯ ಕಲ್ಮಡ್ಕದ ರಾಜಾರಾಂ ಭಟ್ ಅವರೊಂದಿಗೆ ಪುತ್ತೂರು ನಗರ ಠಾಣೆಗೆ ಆಗಮಿಸಿದ್ದರು. ಆಡಿಯೋ ಸಂಬಂಧ ಹಲವಾರು ಬೆದರಿಕೆ ಕರೆಗಳು ಬರುತ್ತಿದೆ ಎಂದು ಮಹಿಳೆ ದೂರು ನೀಡಿದ್ದಾರೆ. ಇನ್ನು ಮಹಿಳೆ ಪೊಲೀಸ್ ಠಾಣೆಯಿಂದ ಮನೆಗೆ ಹಿಂತಿರುಗಿದಾಗ ಪೊಲೀಸರು ಭದ್ರತೆ ನೀಡಿದ್ದಾರೆ.
ಸದ್ಯ ಈ ಆಡಿಯೋ ಬೆದರಿಕೆಗೆ ಸಂಬಂಧಿಸಿ ಸಂತ್ರಸ್ತೆ ಮಹಿಳೆಗೆ ಸೂಕ್ತ ಭದ್ರತೆ ಒದಗಿಸುವಂತೆ ಗೃಹ ಇಲಾಖೆ ಪುತ್ತೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾಧ್ಯಮಗಳಲ್ಲಿ ಮಾನಹಾನಿಕರ ವರದಿ ಪ್ರಕಟಿಸದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದ ಪುತ್ತಿಲ..!
ಅರುಣ್ ಕುಮಾರ್ ಪುತ್ತಿಲ ಅವರ ಆಡಿಯೋ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆ ತನ್ನ ವಿರುದ್ಧ ಮಾನಹಾನಿಕರ ವರದಿ ಪ್ರಕಟಿಸದಂತೆ ಕೋರ್ಟ್ ನಿಂದ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಅಸ್ತು ಎಂದಿದೆ.
ಈ ಬಗ್ಗೆ ಅರುಣ್ ಕುಮಾರ್ ಪುತ್ತಿಲ ಅವರು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಗೆ ಮನವಿ ಸಲ್ಲಿಸಿದ್ದು, ತಮ್ಮನ್ನು ರಾಜಕೀಯವಾಗಿ ಮುಗಿಸಲು ಸಂಚು ಮಾಡಲಾಗುತ್ತಿದೆ ಎಂದು ಆರೋಪಿಸಿ ಅರುಣ್ ಪುತ್ತಿಲ ನ್ಯಾಯಾಲಯದ ಮುಂದೆ ವಿವರಿಸಿದ್ದರು.
ಇದು ಹಣದ ಸ್ವೀಕೃತಿಗೆ ಸಂಬಂಧಿಸಿದಂತೆ ದೂರುದಾರ ಮತ್ತು ಮಹಿಳೆಯ ನಡುವಿನ ದೂರವಾಣಿ ಸಂಭಾಷಣೆಗೆ ಸಂಬಂಧಿಸಿದೆ. ಫಿರ್ಯಾದಿಯು ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಮತ್ತು ಸಮಾಜ ಸೇವಕ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಫಿರ್ಯಾದಿಯ ಪ್ರತಿಷ್ಠೆಗೆ ಧಕ್ಕೆ ತರಲು ಈ ಸುದ್ದಿಯನ್ನು ಪ್ರಕಟಿಸಲಾಗುತ್ತಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಫಿರ್ಯಾದಿಯ ಪ್ರತಿಷ್ಠೆಗೆ ಹಾನಿಯಾಗುವಂತೆ ಯಾವುದೇ ಮಾನಹಾನಿಕರ ಲೇಖನಗಳನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ಅಥವಾ ಪ್ರಸಾರ ಮಾಡದಂತೆ ಪ್ರತಿವಾದಿಗಳನ್ನು ನಿರ್ಬಂಧಿಸುವ ಅರ್ಜಿಗೆ ಅವಕಾಶ ನೀಡಬೇಕೆಂದು ಪ್ರಾರ್ಥಿಸಲಾಗಿದೆ.
ಮೇಲ್ಕಂಡ ದಾಖಲೆಗಳನ್ನು ಪರಿಗಣಿಸಿದ ನಂತರ, ಫಿರ್ಯಾದಿಯು ಎಕ್ಸ್‌ಪಾರ್ಟ್ ಟೆಂಪರರಿ ಇಂಜಕ್ಷನ್ ಮಂಜೂರು ಮಾಡಲು ಪ್ರಾಥಮಿಕ ಮೊಕದ್ದಮೆಯನ್ನು ಮಾಡಿದ್ದಾರೆ.
ಪ್ರತಿವಾದಿಗಳು ಅಥವಾ ಪ್ರತಿವಾದಿಗಳ ಪರವಾಗಿ ಯಾರಾದರೂ ಯಾವುದೇ ಮಾನಹಾನಿಕರ ವಿಷಯ/ ಸುದ್ದಿ/ಲೇಖನ/ಪ್ರಕಟಣೆಗಳು/ಸಂಭಾಷಣೆಯನ್ನು ಒಳಗೊಂಡಿರುವ, ಹಾನಿಯುಂಟುಮಾಡುವ ಅಥವಾ ಹಾನಿಮಾಡುವ ಪ್ರವೃತ್ತಿಯನ್ನು ನೀಡುವುದು/ ಪ್ರಕಟಿಸುವುದು/ಪ್ರಸಾರಿಸುವುದನ್ನು ಈ ಮೂಲಕ ನಿರ್ಬಂಧಿಸಲಾಗಿದೆ.
ತಾತ್ಕಾಲಿಕ ತಡೆಯಾಜ್ಞೆಯ ಜಾಹೀರಾತು-ಮಧ್ಯಂತರ ಆದೇಶವನ್ನು ನೀಡಲು ಕಚೇರಿಗೆ ನಿರ್ದೇಶಿಸಲಾಗಿದೆ, ತುರ್ತು ಸೂಚನೆ ಮತ್ತು ನಂತರ ಪ್ರತಿವಾದಿಗಳಿಗೆ ಸೂಟ್ ಸಮನ್ಸ್ CPC ಯ U/o 39 ನಿಯಮ 3 ರ ನಿಬಂಧನೆಯ ಅನುಸರಣೆಯಂತೆ ಮುಂದಿನ ವಿಚಾರಣೆಯನ್ನು 24.09.2024 ಕ್ಕೆ ಮುಂದೂಡಲಾಗಿದೆ.
Leave a Comment