ವಿಶ್ವದ ಸರ್ವಶ್ರೇಷ್ಠ 100 ರೆಸ್ಟೋರೆಂಟ್ಗಳ ಪಟ್ಟಿ ಬಿಡುಗಡೆ; ಭಾರತದ ಎಷ್ಟು ಉಪಹಾರಗೃಹಗಳಿಗೆ ಸ್ಥಾನ?
ನ್ಯೂಸ್ ಆ್ಯರೋ: ಆಹಾರ, ಬಟ್ಟೆ ಜೀವನ ಕ್ರಮದ ವಿಚಾರದಲ್ಲಿ ಭಾರತ ಯಾವಾಗಲೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ರಾಜ್ಯದಿಂದ ರಾಜ್ಯಕ್ಕೆ ಆಹಾರ ಹಾಗೂ ಜೀವನ ಕ್ರಮಗಳು ಬೇರೆಯಿದ್ದರೂ ಈ ವಿವಿಧತೆಯಲ್ಲಿಯೇ ಏಕತೆಯೆನ್ನುವ ಒಂದು ನಂಟು ಈ ದೇಶವನ್ನು ಬೆಸೆದಿದೆ. ಇನ್ನು ಆಹಾರ ಕ್ರಮದಲ್ಲಿ ಈ ದೇಶ ಸದಾ ಬೇರೆಯ ದೇಶಗಳಿಗೆ ಮಾದರಿಯಾಗುತ್ತಲೇ, ಪ್ರೇರಣೆಯಾಗುತ್ತಲೇ ಬಂದಿದೆ.ಈಗ ಇದೇ ಆಹಾರ ವಿಚಾರವಾಗ ಭಾರತ ಮತ್ತೊಮ್ಮೆ ಸುದ್ದಿಯಾಗಿದೆ. ವಿಶ್ವದ ಸರ್ವಶ್ರೇಷ್ಠ 100 ರೆಸ್ಟೋರೆಂಟ್ಗಳ ಪಟ್ಟಿಯಲ್ಲಿ ಭಾರತದ 7 ಉಪಹಾರಗೃಹಗಳು ಸ್ಥಾನ ಪಡೆದುಕೊಂಡಿದ್ದು ವಿಶೇಷ.
ಇತ್ತೀಚೆಗೆ ಟೇಸ್ಟ್ ಅಟ್ಲಾಸ್ ಎಂಬ ಆಹಾರ ಮಾರ್ಗದರ್ಶನ ನೀಡುವ ಸಂಸ್ಥೆ ವಿಶ್ವದ ಅತ್ಯಂತ ಶ್ರೇಷ್ಠವಾದ ಒಟ್ಟು ನೂರು ಉಪಹಾರಗೃಹಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಇದರಲ್ಲಿ ಭಾರತದ ಒಟ್ಟು 7 ರೆಸ್ಟೋರೆಂಟ್ಗಳು ಸ್ಥಾನ ಪಡೆದಿವೆ. ಈ ಒಂದು ಸ್ಪರ್ಧೆಯಲ್ಲಿ ಒಟ್ಟು 23, 952 ಸಾಂಪ್ರದಾಯಿಕ ಆಹಾರವನ್ನು ಗಣನೆಗೆ ತೆಗೆದುಕೊಂಡು ಅವುಗಳ ಮೇಲೆ ರೆಸ್ಟೋರೆಂಟ್ಗಳಿಗೆ ಸ್ಥಾನವನ್ನು ನೀಡಲಾಗಿದೆ. ಮೊದಲ ಸ್ಥಾನದಲ್ಲಿ ವಿಯೆನ್ನಾದ ಫಿಲ್ಗಮುಲ್ಲೆರ್ ರೆಸ್ಟೋರೆಂಟ್ ಇದೆ.
ಇನ್ನು ಭಾರತದ ಒಟ್ಟು 7 ರೆಸ್ಟೋರೆಂಟ್ಗಳು 5,7,13,59, 69,77 ಮತ್ತು 78ನೇ ಸ್ಥಾನವನ್ನು ಪಡೆದಿವೆ. ಇವುಗಳಲ್ಲಿ ದೊಡ್ಡ ಱಂಕ್ ಪಡೆದ ರೆಸ್ಟೋರೆಂಟ್ ಅಂದ್ರೆ ತನ್ನ ಕಟ್ ಬಿರಿಯಾನಿಗೆ ಫೇಮಸ್ ಆಗಿರುವ ಕೇರಳದ ಕೊಝಿಕೋಡ್ನ ಪಾರಾಗಾನ್ ರೆಸ್ಟೋರೆಂಟ್, ಇದು 1939ರಿಂದ ತನ್ನ ಸೇವೆಯನ್ನು ಆರಂಭಿಸಿದ್ದು, ಇಂದಿಗೂ ಕೂಡ ಅದೇ ಘನತೆ ಹಾಗೂ ರುಚಿಯನ್ನು ಕಾಯ್ದುಕೊಂಡು ಬಂದಿದೆ. ಇನ್ನೂ ಟೇಸ್ಟ್ ಅಟ್ಲಾಸ್ ಬಿಡುಗಡೆ ಮಾಡಿರುವ ಲಿಸ್ಟ್ನಲ್ಲಿ ಕೊಲ್ಕತ್ತಾದ ಪೀಟರ್ ಕ್ಯಾಟ್ 7ನೇ ಸ್ಥಾನ ಪಡೆದುಕೊಂಡಿದೆ. ಇಲ್ಲಿಯ ಚೆಲೊವ್ ಕಬಾಬ್ನ ರುಚಿ ಈ ರೆಸ್ಟೋರೆಂಟ್ನ್ನು ವಿಶ್ವದ ಸರ್ವಶ್ರೇಷ್ಠ ರೆಸ್ಟೊರೆಂಟ್ಗಳಲ್ಲಿ 7 ನೇ ಸ್ಥಾನವನ್ನು ನೀಡುವಂತೆ ಮಾಡಿದೆ.ಈ ಒಂದು ರೆಸ್ಟೋರೆಂಟ್ 1975ರಿಂದ ಕಾರ್ಯನಿರ್ವಹಿಸುತ್ತಿದೆ.
ಇನ್ನು 1956ರಲ್ಲಿ ಸ್ಥಾಪನೆಗೊಂಡ ಹರಿಯಾಣದ ಮುರ್ತಾಲದಲ್ಲಿರುವ ಅಮ್ರಿಕ್ ಸುಖದೇವ್ ರೆಸ್ಟೋರೆಂಟ್ ಈ ಪಟ್ಟಿಯಲ್ಲಿ 13ನೇ ಸ್ಥಾನವನ್ನು ಪಡೆದುಕೊಮಡಿದೆ. ಇಲ್ಲಿಯ ಆಲೂ ಪರೋಟಾ ಜಾಗತಿಕವಾಗಿ ತನ್ನದೇ ಒಂದು ಜನಪ್ರಿಯತೆಯನ್ನು ಕಾಯ್ದುಕೊಂಡಿದೆ. ಟೇಸ್ಟ್ ಅಟ್ಲಾಸ್ ಬಿಡುಗಡೆಯ ಪಟ್ಟಿಯಲ್ಲಿ ಈ ಖಾದ್ಯ ಹಾಗೂ ಹೋಟೆಲ್ 13ನೇ ಸ್ಥಾನ ಪಡೆದಕೊಂಡಿವೆ. ಇನ್ನು ಪಟ್ಟಿಯಲ್ಲಿ ದೆಹಲಿಯ ಕರೀಮ್ಸ್ 59ನೇ ಸ್ಥಾನ ಪಡೆದುಕೊಂಡಿದೆ 1913ರಲ್ಲಿ ಶುರುವಾದ ಈ ರೆಸ್ಟೋರೆಂಟ್ ಮುಘಲಾಯಿ ಶೈಲಿಯ ಆಹಾರವನ್ನು ಸಿದ್ಧಗೊಳಿಸುತ್ತದೆ. ಇದರ ಕೂರ್ಮಾ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದು. ಈ ರೆಸ್ಟೋರೆಂಟ್ಗೆ 5ನೇ ಸ್ಥಾನವನ್ನು ತಂದುಕೊಟ್ಟಿದೆ.
ಇನ್ನು ನಮ್ಮ ಬೆಂಗಳೂರಿನ ರೆಸ್ಟೋರೆಂಟ್ ಒಂದು ಕೂಡ ಈ ಪಟ್ಟಿಯಲ್ಲಿ ಜಾಗ ಪಡೆದಿದೆ. ಮಸಾಲಾ ದೋಸೆಗೆ ಫೇಮಸ್ ಆಗಿರುವ ಸೆಂಟ್ರಲ್ ಟಿಫಿನ್ ರೂಮ್ ಟೇಸ್ಟ್ ಅಟ್ಲಾಸ್ ಬಿಡುಗಡೆ ಮಾಡಿರುವ ಬೆಸ್ಟ್ ರೆಸ್ಟೋರೆಂಟ್ ಲಿಸ್ಟ್ನಲ್ಲಿ 69ನೇ ಸ್ಥಾನವನ್ನು ಪಡೆದುಕೊಂಡಿದೆ. 1920ರಲ್ಲಿ ಪ್ರಾರಂಭವಾಗಿರುವ ಈ ರೆಸ್ಟೋರೆಂಟ್ ಮಸಾಲಾ ದೋಸೆಗೆನೇ ಫೇಮಸ್.ಈ ಒಂದು ರೆಸ್ಟೋರೆಂಟ್ ಈ ಹಿಂದೆ ಅನೇಕ ಪ್ರಶಸ್ತಿಗಳನ್ನು ಪಡೆದಿದೆ.
ಇನ್ನು ಲಿಸ್ಟ್ನಲ್ಲಿ ಸ್ಥಾನ ಪಡೆದಿರುವ ಭಾರತದ 6 ಮತ್ತು 7ನೇ ರೆಸ್ಟೋರೆಂಟ್ಗಳೆಂದರೆ ಹೊಸ ದೆಹಲಿಯ ಗುಲಾಟಿ ತನ್ನ ಬಟರ್ ಚಿಕನ್ಗೆ ಫೇಮಸ್ ಇದು 77ನೇ ಸ್ಥಾನ ಪಡೆದಿದ್ದರೆ. ಮುಂಬೈನ ಪ್ರಸಿದ್ಧ ದಕ್ಷಿಣ ಭಾರತದ ಆಹಾರ ತಯಾರಿಸುವ ರಾಮ ಆಶ್ರಯ 78 ಸ್ಥಾನವನ್ನು ಪಡೆದಿದೆ. ಈ ರೆಸ್ಟೋರೆಂಟ್ನಲ್ಲಿ ಸಿದ್ಧಗೊಳ್ಳುವ ಉಪ್ಪಿಟ್ಟು (ಉಪ್ಮಾ) ಟೇಸ್ಟ್ ಅಟ್ಲಾಸ್ನ ಗಮನ ಸೆಳೆದಿದೆ.
Leave a Comment