IND vs ZIM 3rd T20 : ಟೀಂ ಇಂಡಿಯಾ ಲೈನ್ ಅಪ್ ನಲ್ಲಿ ಬದಲಾವಣೆ – ಯಶಸ್ವಿ, ದುಬೆ, ಸ್ಯಾಮ್ಸನ್ ಗಾಗಿ ತಂಡ ಬಿಡೋದು ಯಾರು?

20240710 085807
Spread the love

ನ್ಯೂಸ್ ಆ್ಯರೋ : ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ಭಾರತ ಮತ್ತು ಜಿಂಬಾಬ್ವೆ ನಡುವೆ ಇಂದು ನಡೆಯಲಿದೆ. ಈ ಪಂದ್ಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಆರಂಭವಾಗಲಿದೆ.

ಇಂದಿನ ಪಂದ್ಯಕ್ಕೂ ಮುನ್ನ ಟೀಮ್‌ ಇಂಡಿಯಾದಲ್ಲಿ ಆರಂಭಿಕ ಸ್ಥಾನಕ್ಕಾಗಿ ಕಠಿಣ ಹೋರಾಟ ನಡೆಯಲಿದ್ದು, ಎಡಗೈ ಬಿರುಸಿನ ಬ್ಯಾಟರ್‌ ಯಶಸ್ವಿ ಜೈಸ್ವಾಲ್ ಶುಭಮನ್ ಗಿಲ್ ಜೊತೆ ಆರಂಭಿಕನಾಗಿ ಆಡುವ ಸಾಧ್ಯತೆ ಇದ್ದು, ಕಳೆದ ಪಂದ್ಯದ ಹೀರೋ ಅಭಿಷೇಕ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಜೊತೆಗೆ ಸಂಜು ಸ್ಯಾಮ್ಸನ್‌ ಮತ್ತು ಶಿವಂ ದುಬೆ ಅವರು ತಂಡಕ್ಕೆ ಮರಳಿದ್ದು ಟೀಂ ಇಂಡಿಯಾ ಪರ ಆಡುವ ನಿರೀಕ್ಷೆ ಇದೆ.

ಯಶಸ್ವಿ ಜೈಸ್ವಾಲ್ ಅವರು ನಾಯಕ ಶುಭಮನ್ ಗಿಲ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದರೆ, ಅಭಿಷೇಕ್ ಶರ್ಮಾ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ಐಪಿಎಲ್‌ನಲ್ಲಿ ಹಲವಾರು ಸಂದರ್ಭಗಳಲ್ಲಿ ಅಭಿಷೇಕ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇದರೊಂದಿಗೆ ಅವರು ಪಂಜಾಬ್ ಪರ ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಯಶಸ್ವಿ ಓಪನ್ ಮಾಡಿದರೆ, ಅಭಿಷೇಕ್ 3ನೇ ಸ್ಥಾನದಲ್ಲಿ ಮತ್ತು ಋತುರಾಜ್ ಗಾಯಕ್ವಾಡ್ 4ನೇ ಸ್ಥಾನಕ್ಕೆ ಹೋಗಬಹುದು. ಹಾಗಾಗಿ ಮೂರನೇ ಟಿ20 ಪಂದ್ಯಕ್ಕೆ ಟೀಮ್‌ ಇಂಡಿಯಾದ ಪ್ಲೇಯಿಂಗ್-11 ರಲ್ಲಿ ಬದಲಾವಣೆಗಳಾಗುವ ನಿರೀಕ್ಷೆ ಇದ್ದು, ವಿಕೆಟ್ ಕೀಪರ್ ಮತ್ತು ಬ್ಯಾಟರ್‌ ಧ್ರುವ ಜುರೆಲ್ ಬದಲಿಗೆ ಅನುಭವಿ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಸಿಗಬಹುದು.

ಮತ್ತೊಂದೆಡೆ ವಾಷಿಂಗ್ಟನ್ ಸುಂದರ್ ಬದಲಿಗೆ ಶಿವಂ ದುಬೆ ಆಡಬಹುದು. ಏಕೆಂದರೆ ಅಭಿಷೇಕ್ ಶರ್ಮಾ ಮತ್ತು ರಿಯಾನ್ ಪರಾಗ್ ಬ್ಯಾಟಿಂಗ್‌ನೊಂದಿಗೆ ಬೌಲಿಂಗ್ ಕೂಡ ಮಾಡುವುದು ಅವರಿಗೆ ಪ್ಲಸ್ ಆಗಲಿದೆ.

ಇನ್ನುಳಿದಂತೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ ತೀರಾ ಕಡಿಮೆ ಇದೆ.‌ ರವಿ ಬಿಷ್ಣೋಯ್ ಸ್ಪಿನ್ ವಿಭಾಗ ಮುನ್ನಡೆಸಿದರೆ, ವೇಗದ ಬೌಲಿಂಗ್ ಹೊಣೆಯನ್ನು ಆವೇಶ್ ಖಾನ್, ಮುಕೇಶ್ ಕುಮಾರ್ ಹೊರಲಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!