ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನಿರ್ಬಂಧ ವಿಚಾರ; ಮೌನ ಮುರಿದ ಇಳಯರಾಜ ಹೇಳಿದ್ದೇನು?
ನ್ಯೂಸ್ ಆ್ಯರೋ: ತಮಿಳುನಾಡಿನ ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ಸಂಗೀತ ನಿರ್ದೇಶಕ ಇಳಯರಾಜ ಅವರನ್ನು ಗರ್ಭಗುಡಿ ಪ್ರವೇಶಿಸದಂತೆ ಅರ್ಚಕರು ತಡೆದು ನಿಲ್ಲಿಸಿದ್ರು ಎನ್ನುವ ಸುದ್ದಿ ನಿನ್ನೆಯಿಂದ ಹರಿದಾಡ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ವೈರಲ್ ಆಗ್ತಿದ್ದು. ಇಂತಹ ಸುದ್ದಿಗಳನ್ನು ಹರಡಬೇಡಿ ಎಂದು ಇಳಯರಾಜ ಹೇಳಿದ್ದಾರೆ.
ಇಳಯರಾಜ ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿರುವ ಅರ್ಥ ಮಂಟಪಕ್ಕೆ ಹೋಗಲು ಮುಂದಾದ್ರು. ಆ ಮಂಟಪದ ಮೂಲಕ ಕೆಲವರಿಗೆ ಮಾತ್ರ ಹೋಗಲು ಅನುಮತಿ ಇದೆ ಎಂದು ಹೇಳಿ ಇಳಯರಾಜ ಅವರು ಒಳಗೆ ಪ್ರವೇಶಿಸದಂತೆ ಅರ್ಚಕರು ತಡೆದ್ರು ಎನ್ನಲಾಗ್ತಿದೆ. ಅಲ್ಲಿದ್ದ ಸಿಬ್ಬಂದಿ ಇಳಯರಾಜ ಅವರಿಗೆ ದೇವಸ್ಥಾನದ ನಿಯಮಗಳನ್ನು ವಿಸ್ತಾರವಾಗಿ ತಿಳಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾದ ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಇಳಯರಾಜ, ನನ್ನ ಬಗ್ಗೆ ಕೆಲವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ಸಮಯದಲ್ಲಿ. ಯಾವುದೇ ಸ್ಥಳದಲ್ಲಿ ನನ್ನ ಸ್ವಾಭಿಮಾನದ ವಿಚಾರಕ್ಕೆ ರಾಜಿ ಮಾಡಿಕೊಳ್ಳುವ ವ್ಯಕ್ತಿ ಅಲ್ಲ. ಇಂತಹ ಘಟನೆ ನಡೆದಿವೆ ಎಂಬಂತೆ ಪ್ರಚಾರ ಮಾಡಲಾಗುತ್ತಿದೆ. ಅಭಿಮಾನಿಗಳು ಮತ್ತು ಜನರು ಈ ವದಂತಿಗಳನ್ನು ನಂಬಬಾರದು ಎಂದು ಇಳಯರಾಜ ಸೋಶಿಯಲ್ ಮೀಡಿಯಾದ ಮೂಲಕವೇ ಸ್ಪಷ್ಟನೆ ನೀಡಿದ್ದಾರೆ.
ತಮಿಳುನಾಡಿನ ಶ್ರೀವಲ್ಲಿಪುತೂರಿನ ಆಂಡಾಳ್ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಆದಿ ತಿರುಪುರ್ ಪಂಥಲ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಟ್ಯಾಂಜಲಿ ಕಾರ್ಯಕ್ರಮ ಮತ್ತು ಇಳಯರಾಜಾ ಸಂಯೋಜಿಸಿದ ದಿವ್ಯ ಪಾಶುರಂ ಹಾಡು ಬಿಡುಗಡೆ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ರು.
Leave a Comment