ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ಯಾ? ಹುಷಾರ್ ಕಣ್ರೀ; ನಿಮಗೆ ದಂಡ ಬೀಳಬಹುದು
ನ್ಯೂಸ್ ಆ್ಯರೋ: ಪ್ರಸ್ತುತ ಎಲ್ಲರೂ ಸರ್ವೆ ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚುನ ಬ್ಯಾಂಕ್ ಖಾತೆಗಳನ್ನು ಹೊಂದುತ್ತಾರೆ. ಆದರಲ್ಲೂ ಸರ್ಕಾರಿ ಅಥಾವ ಖಾಸಗಿ ನೌಕರಿದಾರರು, ಉದ್ಯಮಿಗಳು, ವ್ಯಾಪಾರಸ್ಥರು ಈ ಪದ್ದತಿಯನ್ನು ಹೆಚ್ಚಾಗಿ ಅನುಸರಿಸುತ್ತಾರೆ. ಆದರಲ್ಲೂ ನೌಕರಿದಾರರು ಒಂದು ಸಂಬಳ ಖಾತೆ ಹೊಂದಿದರೆ ಇನ್ನೊಂದು ಉಳಿತಾಯ ಖಾತೆ ಹೊಂದಿರುತ್ತಾರೆ. ಆದರೆ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಅಂಶವನ್ನು ಮರೆಯಬೇಡಿ.
ಹೌದು. . ಬ್ಯಾಂಕ್ ನಿಯಮಗಳ ಪ್ರಕಾರ, ಗ್ರಾಹಕ ತನ್ನ ಖಾತೆಯಲ್ಲಿ ಕನಿಷ್ಠ ಹಣವನ್ನು ಇಟ್ಟು, ನಿಯಮಿತವಾಗಿ ಹಣ ವ್ಯವಹಾರ ನಡೆಸಬೇಕು. ಇಲ್ಲವಾದರೆ ಬ್ಯಾಂಕ್ ಗ್ರಾಹಕನಿಗೆ ಹೆಚ್ಚಿನ ದಂಡ ವಿಧಿಸುತ್ತದೆ. ಹೀಗಾಗಿ, ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯೆಗೊಳಿಸಿ ಎಂದು ಪರಿಣಿತರು ಸಲಹೆ ನೀಡಿತ್ತಾರೆ. ಆದ್ದರಿಂದ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಜೊತೆ ಕೂಡಲೇ ಬ್ಯಾಂಕ್ಗೆ ತೆರಳಿ ನಿಮ್ಮ ಖಾತೆಯನ್ನು ಕ್ಲೋಸ್ ಮಾಡಿಸುವುದು ಒಳಿತು.
ಯಾಕೆಂದರೆ, ನಿಮ್ಮ ಎಲ್ಲಾ ಹೂಡಿಕೆಗಳು, ಸಾಲ, ವ್ಯಾಪಾರ, ಕ್ರೆಡಿಟ್ ಕಾರ್ಡ್ ಪೇಮೆಂಟ್ ಮತ್ತು ವಿಮೆ (ಇನ್ಷೂರೆನ್ಸ್) ಯೊಂದಿಗೆ ಸಂಪರ್ಕ ಹೊಂದಿರುವ ಪೇಮೆಂಟ್ಗಳನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಲಾಗಿರುತ್ತದೆ.
ಇಂದಿನ ದಿನಮಾನದಲ್ಲಿ ಬಹುತೇಕ ಎಲ್ಲ ಬ್ಯಾಂಕುಗಳು ಸಂಬಳ ಖಾತೆ ಅಲ್ಲದ ಉಳಿತಾಯ ಖಾತೆಗಳಿಗೂ ರೂ 10,000 ಸಾವಿರದವರೆಗೂ ಮಿನಿಮಮ್ ಬ್ಯಾಲನ್ಸ್ ಮೊತ್ತ ಇರಿಸಬೇಕು ಎಂದು ನಿಯಮಗಳನ್ನು ಹಾಕಿಕೊಂಡಿವೆ. ಅಂದರೆ, ಒಂದು ತಿಂಗಳಲ್ಲಿ ಬ್ಯಾಂಕ್ ಖಾತೆಯಲ್ಲಿ ಒಮ್ಮೆಯಾದರೂ ರೂ 10,000 ನಿಮ್ಮ ಖಾತೆಯಲ್ಲಿ ಇರಬೇಕು. ಅಕಸ್ಮಾತ್ ಅಷ್ಟು ಹಣ ನಿಮ್ಮ ಖಾತೆಯಲ್ಲಿ ಇರದೇ ಹೋದರೆ ಆಗ ಬ್ಯಾಂಕ್ ಪೆನಾಲ್ಟಿ ಎಂದು ದಂಡ ಹಾಕುತ್ತದೆ.
ಕೆಲವು ಬ್ಯಾಂಕ್ಗಳು ಸತತ 3 ಆಥಾವ 6 ತಿಂಗಳು (ಇದು ಬ್ಯಾಂಕ್ ಮೇಲೆ ನಿಶ್ಚಯವಾಗುತ್ತವೆ) ಯಾವುದೇ ವಹಿವಾಟು ನಡೆಸದೇ ಹೋದರೆ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಯತ್ತವೆ. ಅದನ್ನು ಸಕ್ರಿಯಗೊಳಿಸಬಹುದಾದರೂ ಹೆಚ್ಚುವರಿ ಶುಲ್ಕ ಇತ್ಯಾದಿ ರಗಳೆಗಳು ಎದುರಾಗಬಹುದು. ಮೂರ್ನಾಲ್ಕು ಬ್ಯಾಂಕ್ ಖಾತೆಗಳಿದ್ದರೆ ಹೇಗೋ ನಿಭಾಯಿಸಬಹುದು. ಇನ್ನೂ ಹೆಚ್ಚಿನ ಬ್ಯಾಂಕ್ ಅಕೌಂಟ್ಗಳಿದ್ದರೆ ಕೆಲ ಖಾತೆಗಳು ಕಣ್ತಪ್ಪಿಸಿಬಿಡಬಹುದು.
Leave a Comment