ಹಾಸನಾಂಬೆ ದೇವಿ ಉತ್ಸವಕ್ಕೆ‌ ವಿಧ್ಯುಕ್ತ ತೆರೆ; ಆದಾಯ ಸಂಗ್ರಹದಲ್ಲಿ ದಾಖಲೆ ಬರೆದ ಹಾಸನಾಂಬೆ

Hasanamba
Spread the love

ನ್ಯೂಸ್ ಆ್ಯರೋ: ಹಾಸನದ ಹಾಸನಾಂಬೆ ದೇವಿ ಉತ್ಸವಕ್ಕೆ‌ ಇಂದು ವಿಧ್ಯುಕ್ತ ತೆರೆ ಎಳೆಯಲಾಗಿದೆ. ದೇವಿಯ ಅಲಂಕಾರ ಆಭರಣ ತೆರವು ಮಾಡಿ ಪೂಜೆ ಮಾಡಲಾಗಿದೆ. ವಿಶ್ವರೂಪ ದರ್ಶನದ ಬಳಿಕ ಅರ್ಚಕರು ಹೊರಬಂದರು. ಬಳಿಕ ಮಧ್ಯಾಹ್ನ 12.33ಕ್ಕೆ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಬಂದ್​ ಮಾಡಲಾಗಿದೆ. ಆ ಮೂಲಕ ಈ ವರ್ಷದ 11 ದಿನಗಳ ಉತ್ಸವ ಸಂಪನ್ನವಾಗಿದೆ. 9 ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ದಾಖಲೆಯ 18 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ ಮಾಡಲಾಗಿದೆ.

ಇನ್ನು ಅದಾಯ ಸಂಗ್ರಹದಲ್ಲಿಯೂ ಈ ಬಾರಿ ಹಾಸನಾಂಬ ದೇವಾಲಯ ದಾಖಲೆ ಬರೆದಿದೆ. ಎಂಟು ದಿನದಲ್ಲಿ 8 ಕೋಟಿ ರೂ. ಸಂಗ್ರಹವಾಗಿದೆ. ವಿಶೇಷ ಪಾಸ್, ಲಡ್ಡು ಪ್ರಸಾದ ಮಾರಾಟದಿಂದ 8 ಕೋಟಿ ರೂಪಾಯಿ ಸಂಗ್ರಹವಾಗಿದೆ. ದೇವಿಯ ದರ್ಶನಕ್ಕೆ ಇಂದೇ ಕೊನೆ ದಿನವಾಗಿದ್ದು, ನಾಳೆ ಪೂಜಾ ವಿಧಿ ವಿಧಾನಗಳೊಂದಿಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗುವುದು. ಇಂದು ಬೆಳಗ್ಗೆ 9 ಗಂಟೆಯವರೆಗೆ ಸುಮಾರು 8 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ 14 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದು, ಈ ವರ್ಷ ಎಂಟು ದಿನದಲ್ಲಿ ಬರೋಬ್ಬರಿ 18 ಲಕ್ಷ ಭಕ್ತರು ದೇವಿಯ ದರ್ಶನ ಪಡೆದುಕೊಂಡಿದ್ದಾರೆ.

ಭಕ್ತರ ಶೀಘ್ರ ದರ್ಶನಕ್ಕೆ ಅನುಕೂಲವಾಗುವಂತೆ 1000ರೂ, 300ರೂ ಟಿಕೆಟ್ ಇಡಲಾಗಿತ್ತು. ಟಿಕೆಟ್ ಮೂಲಕ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಭಕ್ತರ ಮನವಿ ಹಿನ್ನಲೆ ಟಿಕೆಟ್ ಮಾರಾಟಕ್ಕೆ ಮರು ಚಾಲನೆ ನೀಡಲಾಗಿತ್ತು. ವಿವಿಐಪಿ, ವಿಐಪಿ ಪಾಸುಗಳಿಗೆ ಮಾತ್ರ ನಿರ್ಬಂಧ ಹೇರಲಾಗಿತ್ತು. ಇನ್ನು ಗಣ್ಯರ ಪಾಸುಗಳ ದರ್ಶನ ಹೆಚ್ಚಾದ ಹಿನ್ನಲೆ ಪಾಸುಗಳ ವ್ಯವಸ್ಥೆಯನ್ನು ರದ್ದು ಮಾಡಲಾಗಿತ್ತು.

ಹಾಸನಾಂಬೆ ದೇವಾಲಯ ಆಡಳಿತ ಮಂಡಳಿಯ ಅವೈಜ್ಞಾನಿಕ ನಡೆಯಿಂದಾಗಿ ಹಾಸನಾಂಬೆ ಭಕ್ತರಿಗೆ ಸಂಕಷ್ಟ ಎದುರಾಗಿತ್ತು. ವಿವಿಐಪಿ ಪಾಸ್ ಪಡೆದು ಹಾಸನಾಂಬ ದರ್ಶನಕ್ಕೆ ಬಂದಿದ್ದಲ್ಲದೇ, ಪೊಲೀಸರ ಜೊತೆಯೂ ಜನ ವಾಗ್ವಾದ ಆರಂಭಿಸಿದ್ದರು. ರೊಚ್ಚಿಗೆದ್ದ ಜನರನ್ನು ನಿಯಂತ್ರಣ ಮಾಡಲಾಗದೆ ಪೊಲೀಸರು, ಸಿಬ್ಬಂದಿಗಳು ಪರದಾಡುವಂತಾಗಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!