ಹರಿಯಾಣ ವಿಧಾನಸಭಾ ಚುನಾವಣೆ: ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌ಗೆ ಗೆಲುವು
ನ್ಯೂಸ್ ಆ್ಯರೋ: ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾರೆ.
ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಾವಿತ್ರಿ ಅವರು ಬಿಜೆಪಿಯ ಕಮಲ್ ಗುಪ್ತಾ ವಿರುದ್ಧ 18,941 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್‌ನಿಂದ ರಾಮ್ ನಿವಾಸ್ ರಾರಾ ಸ್ಪರ್ಧಿಸಿದ್ದರು.
ಹಿಸಾರ್‌ನ ಜನರಿಗೆ ಕೃತಜ್ಞತೆ ವ್ಯಕ್ತಪಡಿಸಿರುವ ಸಾವಿತ್ರಿ ಜಿಂದಾಲ್ ಅವರು, ಹಿಸಾರ್ ಕುಟುಂಬಕ್ಕೆ ಕೃತಜ್ಞತೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜಿಂದಾಲ್ ಕುಟುಂಬದ 74 ವರ್ಷದ ಸಾವಿತ್ರಿ ಅವರು ಈಗ ಮೂರನೇ ಬಾರಿಗೆ ಹಿಸಾರ್‌ನಲ್ಲಿ ಗೆದ್ದಿದ್ದಾರೆ. ಈ ಹಿಂದೆ 2005 ಮತ್ತು 2009 ರಲ್ಲಿ ಕಾಂಗ್ರೆಸ್ ಶಾಸಕರಾಗಿ ಗೆದ್ದಿದ್ದರು.
ಸಾವಿತ್ರಿ ಜಿಂದಾಲ್ ಅವರು 2005 ರಲ್ಲಿ ತಮ್ಮ ಪತಿ ಒ.ಪಿ.ಜಿಂದಾಲ್ ಅವರ ಮರಣದ ನಂತರ ವ್ಯಾಪಾರ ಮತ್ತು ರಾಜಕೀಯ ಜಗತ್ತಿಗೆ ಕಾಲಿಟ್ಟರು. ಜಿಂದಾಲ್ ಗ್ರೂಪ್‌ನ ಮುಖ್ಯಸ್ಥರಾಗಿ ಅವರು ಉಕ್ಕು, ವಿದ್ಯುತ್, ಗಣಿಗಾರಿಕೆ ಮತ್ತು ಮೂಲಸೌಕರ್ಯದಲ್ಲಿ ತೊಡಗಿರುವ ಸಂಘಟಿತ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ನಾಯಕತ್ವವು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಸೇರಿದಂತೆ ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿದೆ.
Leave a Comment