ಗುರುಪ್ರಸಾದ್ ಸಾವಿನ ಬಗ್ಗೆ ಕಾಮೆಂಟ್; ಟೀಕಿಸುವವರನ್ನು ನಾಯಿಗಳು ಎಂದ ನಟ ಜಗ್ಗೇಶ್

criticize are dogs
Spread the love

ನ್ಯೂಸ್ ಆ್ಯರೋ: ಗುರುಪ್ರಸಾದ್ ಸಾವಿನ ಬಳಿಕ ನವರಸನಾಯಕ ಜಗ್ಗೇಶ್ ಅವರ ಬಗ್ಗೆ ಮಾಡಿರುವ ಕಾಮೆಂಟ್ ಗಳು ಭಾರೀ ವಿವಾದಕ್ಕೆ ಕಾರಣವಾಗಿದ್ದವು. ಬಿಗ್ ಬಾಸ್ ಖ್ಯಾತಿಯ ಜಗದೀಶ್, ಹುಚ್ಚ ವೆಂಕಟ್ ಸೇರಿದಂತೆ ಅನೇಕರು ಜಗ್ಗೇಶ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಿದ್ದರು.

ಗುರುಪ್ರಸಾದ್ ಜೊತೆಗೆ ಜಗ್ಗೇಶ್ ಮಠದಂತಹ ಸೂಪರ್ ಹಿಟ್ ಸಿನಿಮಾ ಮಾಡಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ವೈಮನಸ್ಯಗಳಿತ್ತು. ಇದೀಗ ಗುರುಪ್ರಸಾದ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಳಿಕ ಜಗ್ಗೇಶ್ ಅವರ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದರು.

ಗುರುಪ್ರಸಾದ್ ದೇವರನ್ನು ಬಯ್ಯುತ್ತಿದ್ದರು, ಅಹಂಕಾರಿ, ಕೆಟ್ಟ ಚಟಕ್ಕೆ ಬಿದ್ದಿದ್ದ ಎಂದೆಲ್ಲಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಇದಕ್ಕೆ ಹಲವರು ಒಬ್ಬ ವ್ಯಕ್ತಿ ಸತ್ತ ಮೇಲೆ ಆತನ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುವುದು ಎಷ್ಟು ಸರಿ ಎಂದು ಜಗ್ಗೇಶ್ ರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಆನೆ ನಡೆದಾಡುವಾಗ ಸುತ್ತಲೂ ಶ್ವಾನಗಳು ಬೊಗಳುವ ಚಿತ್ರವೊಂದನ್ನು ಪ್ರಕಟಿಸಿರುವ ಜಗ್ಗೇಶ್ ‘ಆನೆ ನಡೆಯುವಾಗ ಶ್ವಾನಗಳು ಉಸಿರು ಹೋಗುವಂತೆ ಅರಚುತ್ತದೆ, ಅದಕ್ಕೆ ಸೈಂಟಿಫಿಕ್ ಕಾರಣ ಭಯ. ಎರಡನೆಯದು ಏನು ನಾವು ನೆಲದಷ್ಟೇ ಹೀಗಿದ್ದೇವೆ ಆನೆ ಮಾತ್ರ ಮುಗಿಲೆತ್ತರಕ್ಕೆ ಬೆಳೆದಿದೆ ಎಂಬ ಸಂಕಟ. ತಾತ್ಪರ್ಯ: ನಿನ್ನ ಕೆಲಸ ನೀನು ಗಾಂಭೀರ್ಯದಿಂದ ಮಾಡುತ್ತಿರು. ಶ್ವಾನಗಳು ಅವುಗಳ ಕೆಲಸ ಮಾಡದೇ ಬೇರೆ ವಿಧಿಯಿಲ್ಲ ಬೊಗಳುತ್ತದೆ. ಆನೆಯಾಗಲು ಯೋಗ ಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!