Mangalore : ವಿಚಾರಣಾಧೀನ ಇಬ್ಬರು ಕೈದಿಗಳ ಮೇಲೆ ಕಾರಾಗೃಹದಲ್ಲಿ ಗ್ಯಾಂಗ್ ದಾಳಿ – ಗಾಯಾಳುಗಳು ವೆನ್ಲಾಕ್ ಆಸ್ಪತ್ರೆಗೆ ದಾಖಲು, ಪೋಲಿಸರಿಂದ ಪರಿಶೀಲನೆ
ನ್ಯೂಸ್ ಆ್ಯರೋ : ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಕೈದಿಗಳಿಗೆ ಗಾಯಗಳಾಗಿರುವ ಘಟನೆ ಮಂಗಳೂರಿನ ಕಾರಾಗೃಹದಲ್ಲಿ ಇಂದು ಸಂಜೆ ನಡೆದಿದೆ.
ಗಾಯಾಳುಗಳನ್ನು ಮುಹಮ್ಮದ್ ಸಮೀರ್ ಅಲಿಯಾಸ್ ಕಡಪರ ಸಮೀರ್, 33 ವರ್ಷ, ಉಳ್ಳಾಲ ನಿವಾಸಿ ಮತ್ತು ಮುಹಮ್ಮದ್ ಮನ್ಸೂರ್ ಅಲಿಯಾಸ್ ಬೋಳಿಯಾರ್ ಮನ್ಸೂರ್, 30 ವರ್ಷ, ಬೋಳಿಯಾರ್ ನಿವಾಸಿ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಉಳ್ಳಾಲ ಠಾಣೆಯಲ್ಲಿ 20 ದಿನಗಳ ಹಿಂದೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದರು.
ಇಂದು ಸಂಜೆ ಮಂಗಳೂರು ಕಾರಾಗೃಹದ ಎ ಬ್ಯಾರಕ್ ನಲ್ಲಿ 6:30-6:45ರ ಸುಮಾರಿಗೆ ಹಳೆ ಸೇಡೊಂದರ ಹಿನ್ನೆಲೆಯಲ್ಲಿ ಟೋಪಿ ನೌಫಲ್ ಹಾಗೂ ಮತ್ತಾತನ ಸಹಚರರು ಸೇರಿ ಈ ಇಬ್ಬರಿಗೂ ಅಡುಗೆ ಮನೆಯ ವಸ್ತುಗಳಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ತಲೆ ಭುಜ ಹಾಗೂ ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಶೀಘ್ರವಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜೈಲು ಅಧಿಕಾರಿ ನೀಡಿದ ದೂರಿನ ಮೇರೆಗೆ ಬರ್ಕೆ ಪೋಲಿಸ್ ಠಾಣೆಯಲ್ಲಿ 56/2024ರಂತೆ ಪ್ರಕರಣ ದಾಖಲಾಗಿದೆ.
ಹಲ್ಲೆ ನಡೆಸಿದ ಮುಫದ್ ರಿಫಾತ್, 28 ವರ್ಷ, ಮುಹಮ್ಮದ್ ರಿಜ್ವಾನ್, 34 ವರ್ಷ, ಇಬ್ರಾಹಿಂ ಕಲ್ಲೆಲ್, 30 ವರ್ಷ, ಉಮರ್ ಫಾರೂಕ್ ಇರ್ಫಾನ್, ಅಲ್ತಾಫ್, ನೌಫಲ್, ಜೈನುದ್ದೀನ್ ಮತ್ತು ಇತರ ಹಲವರ ವಿರುದ್ಧ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಗಳ ಸೆಲ್ ನಲ್ಲಿ ತನಿಖೆ ಕೈಗೊಂಡಿದ್ದಾರೆ.
Leave a Comment