Crime : 20 ವರ್ಷದ ಮಗನ ಮುಂದೆಯೇ 40 ವರ್ಷದ ತಾಯಿಯ ಮೇಲೆ ಗ್ಯಾಂಗ್ ರೇಪ್ – ಅಮಾನವೀಯ ಕೃತ್ಯಕ್ಕೆ ಮಹಿಳೆಯರಿಬ್ಬರು ಸಾಥ್, ಆರೋಪಿಗಳ ಬಂಧನ

IMG 20240819 WA0039
Spread the love

ನ್ಯೂಸ್ ಆ್ಯರೋ : ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಮಗನ ಕಣ್ಣೆದುರೇ ತಾಯಿಯ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ರೌಡಿಶೀಟರ್ ಗ್ಯಾಂಗ್ ನಿಂದ ಈ ಪೈಶಾಚಿಕ ಕೃತ್ಯ ನಡೆದಿದ್ದು, ಒಬ್ಬರಾದ ಮೇಲೆ ಒಬ್ಬರಂತೆ ಮಹಿಳೆ ಮೇಲೆ ಕಾಮುಕರು ಎರಗಿ ಚಿತ್ರಹಿಂಸೆ ನೀಡಿ ಅಟ್ಟಹಾಸ ಮೆರೆದಿದ್ದಾರೆ.

40 ವರ್ಷದ ತಾಯಿ ಮೇಲೆ ತನ್ನ ಕಣ್ಣ‌ ಮುಂದೆಯೇ ತಾಯಿ‌ ಮೇಲೆ ಅತ್ಯಾಚಾರವಾದ್ರೂ ಸಹ 20 ವರ್ಷದ ಮಗ ನಿಸ್ಸಹಾಯಕನಾಗಿದ್ದಾನೆ. ಇನ್ನೂ ಮಹಿಳೆ ಮೇಲಿನ ಅತ್ಯಾಚಾರಕ್ಕೆ ಇಬ್ಬರು ಮಹಿಳೆಯರು ಸಾಥ್ ಕೊಟ್ಟಿದ್ದು, ತಮ್ಮ ಕಣ್ಣಮುಂದೆ ಘಟನೆ ನಡೆಯುತ್ತಿದ್ದರು ಪಾಪಿಗಳು ಸುಮ್ಮನೆ ನಿಂತಿದ್ದರಂತೆ. ಘಟನೆಯಿಂದ ತೀವ್ರ ಅಸ್ವಸ್ಥಗೊಂಡಿರುವ ಸಂತ್ರಸ್ಥೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದೂರು ದಾಖಲಿಸಿಕೊಂಡ ಪೋಲಿಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ರೌಡಿ ಶೀಟರ್ ಗಳಾದ ಜೋಸೆಫ್, ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನಾ ಎಂಬುವವರ ಜೊತೆ ಸೌಮ್ಯಾ ಪ್ರತಾಪ್, ಜತಿನ್, ವಿಘ್ನೇಶ್ ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಎಂಬುವವರನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಯಾಕಾಯ್ತು?
ಸಂತ್ರಸ್ತೆ, ಮತ್ತಾಕೆಯ ಮಗ ಹಾಗೂ ಮತ್ತಿಬ್ಬರರು ಸ್ನೇಹಿತರು ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ಇದೇ ಏರಿಯಾದ ರೌಡಿಶೀಟರ್ ಗಳಾದ ಜೋಸೇಫ್ ಹಾಗೂ ಶ್ರೀನಿವಾಸ್ ಅಲಿಯಾಸ್ ಪಾಗಾಲ್ ಸೀನನಿಗೆ ಸಂತ್ರಸ್ಥೆ ಹಾಗೂ ಮತ್ತಾಕೆಯ ಮಗನ ಪರಿಚಯವಿತ್ತು. ಸಂತ್ರಸ್ಥೆಯ ಮಗನ ಸ್ನೇಹಿತರು ಸಹ ಆಕೆಯ ಮಗನ ಜೊತೆ ಆತ್ಮೀಯರಾಗಿದ್ದರು.

ಮೊಬೈಲ್‌ ಮತ್ತು ಚಿನ್ನದ ಸರ ಕಳ್ಳತನ ಪ್ರಕರಣವೊಂದರಲ್ಲಿ ಸಂತ್ರಸ್ತೆ ಹಾಗೂ ಆಕೆಯ ಮಗ ಭಾಗಿಯಾಗಿದ್ದಾಗಿ ಆರೋಪಿಗಳಿಗೆ ಗೊತ್ತಾಗಿತ್ತು. ಇದನ್ನು ಗಮನಿಸಿದ್ದ ಜೋಸೇಫ್ ಹಾಗೂ ಸೀನಾ ಇವರನ್ನು ಅಪಹರಿಸಿ ಬೆದರಿಸಿದರೆ ಹಣ ಬಂಗಾರ ಸಿಗಬಹುದು ಎಂದು ಭಾವಿಸಿದ್ದರು. ಹೀಗಾಗಿ ಕಳೆದ 13 ತಾರೀಖು ಸಂಚು ರೂಪಿಸಿ ನಾಲ್ವರನ್ನು ಕಿಡ್ನಾಪ್ ಮಾಡಿದ್ದರು. ಜೊಸೇಫ್ ಹಾಗೂ ಸೀನನಿಗೆ ಇನ್ನೂ 7 ಆರೋಪಿಗಳು ಸಾಥ್ ಕೊಟ್ಟಿದ್ದಾರೆ.

ನಾಲ್ವರನ್ನು ಬೆದರಿಸಲು ಪಕ್ಕಾ ಪ್ಲಾನ್ ಮಾಡಿದ್ದ ಆರೋಪಿಗಳು ನಕಲಿ ಪಿಎಸ್‌ಐ ರೆಡಿ ಮಾಡಿದ್ದರು. ಸೌಮ್ಯ ಎಂಬ ಆರೋಪಿತೆ ತಾನು ಪೊಲೀಸ್ ಹಣ ಕೊಡದಿದ್ದರೆ ನಿಮ್ಮ ಮೇಲೆ ಕೇಸ್ ಹಾಕುತ್ತೇನೆ ಎಂದು ಬೆದರಿಸಿದ್ದಳು. ಪರಿಚಯಸ್ಥ ಪ್ರತಾಪ್ ಎಂಬಾತ ಮನೆಯಲ್ಲಿ ಅಕ್ರಮವಾಗಿ ಇರಿಸಿ ಹಿಂಸಿಸಿದ್ದರು. ಯಾವಾಗ ಹಣ, ಬಂಗಾರ ಕೊಡಲಿಲ್ಲವೋ ಮಹಿಳೆ ಮೇಲೆ ಮೃಗದಂತೆ ಎರಗಿ ಆಕೆಯ ಮಗನ‌ ಮುಂದೆಯೇ ಅತ್ಯಾಚಾರವೆಸಗಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎನ್ನಲಾಗಿದೆ.

Leave a Comment

Leave a Reply

Your email address will not be published. Required fields are marked *