ಗಣರಾಜ್ಯೋತ್ಸವ ಹಿನ್ನೆಲೆ 95 ಯೋಧರಿಗೆ ಶೌರ್ಯ ಪದಕ; 942 ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ಪ್ರಕಟ
ನ್ಯೂಸ್ ಆ್ಯರೋ: 6ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶಕ್ಕಾಗಿ ಅಪ್ರತಿಮ ಸೇವೆ ಸಲ್ಲಿಸಿದ ವಿವಿಧ ಸಾಧಕರಿಗೆ ಶೌರ್ಯ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಗಣರಾಜ್ಯೋತ್ಸವ 2025 ರ ಸಂದರ್ಭದಲ್ಲಿ, ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಮತ್ತು ನಾಗರಿಕ ರಕ್ಷಣಾ ಮತ್ತು ಸುಧಾರಣಾ ಸೇವೆಗಳ 942 ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿಯನ್ನು ನೀಡಲಾಗಿದ್ದು, ಇದರಲ್ಲಿ 95 ಯೋಧರಿಗೆ ಶೌರ್ಯ ಪದಕ, 101 ಮಂದಿಗೆ ವಿಶಿಷ್ಠ ಸೇವೆಗಾಗಿ ರಾಷ್ಟ್ರಪತಿ ಪದಕ, 746 ಮಂದಿಗೆ ಪ್ರತಿಭಾನ್ವಿತ ಸೇವೆಗಾಗಿ ಪದಕಗಳನ್ನು ಪ್ರಕಟಿಸಲಾಗಿದೆ.
95 ಶೌರ್ಯ ಪ್ರಶಸ್ತಿಗಳಲ್ಲಿ ಹೆಚ್ಚಿನವು ನಕ್ಸಲೀಯ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ ಸೈನಿಕರಿಗೆ ಘೋಷಣೆ ಮಾಡಲಾಗಿದೆ. ಇದರಲ್ಲಿ ನಕ್ಸಲೀಯ ವಲಯದ 28, ಜಮ್ಮು ಮತ್ತು ಕಾಶ್ಮೀರ ಪ್ರದೇಶದ 28, ಈಶಾನ್ಯದಿಂದ 03 ಸೈನಿಕರು ಮತ್ತು ಇತರ ಪ್ರದೇಶಗಳ 36 ಸೈನಿಕರನ್ನು ಅವರ ಶೌರ್ಯಕ್ಕಾಗಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತಿದೆ. ಜೊತೆಗೆ ಈ ಪಟ್ಟಿಯಲ್ಲಿ 78 ಪೊಲೀಸರು ಮತ್ತು 17 ಅಗ್ನಿಶಾಮಕ ಸಿಬ್ಬಂದಿ ಇದ್ದಾರೆ.
ಇನ್ನು, ವಿಶೇಷ ಸೇವೆಗಾಗಿ (PSM) 101 ರಾಷ್ಟ್ರಪತಿಗಳ ಪದಕಗಳಲ್ಲಿ 85 ಪೊಲೀಸ್ ಸೇವೆಗೆ, 05 ಅಗ್ನಿಶಾಮಕ ಸೇವೆಗೆ, 07 ನಾಗರಿಕ ರಕ್ಷಣಾ-ಗೃಹರಕ್ಷಕ ದಳಕ್ಕೆ ಮತ್ತು 04 ಸುಧಾರಣಾ ಇಲಾಖೆಗೆ ನೀಡಲಾಗಿದೆ. ಮೆರಿಟೋರಿಯಸ್ ಸೇವೆಗಾಗಿ (MSM) 746 ಪದಕಗಳಲ್ಲಿ, 634 ಪೊಲೀಸ್ ಸೇವೆಗೆ, 37 ಅಗ್ನಿಶಾಮಕ ಸೇವೆಗೆ, 39 ಸಿವಿಲ್ ಡಿಫೆನ್ಸ್-ಗೃಹರಕ್ಷಕರಿಗೆ ಮತ್ತು 36 ತಿದ್ದುಪಡಿ ಸೇವೆಗೆ ನೀಡಲಾಗಿದೆ.
Leave a Comment