ಇಲ್ಲಿ ಗಂಡ-ಹೆಂಡತಿ ಮೈ ಮುಟ್ಟಲ್ಲ; ಭಾರತಕ್ಕೂ ಕಾಲಿಟ್ಟಿದೆ ‘ಫ್ರೆಂಡ್‌ಶಿಪ್ ಮ್ಯಾರೇಜ್’
ನ್ಯೂಸ್ ಆ್ಯರೋ: ಜಪಾನ್‌ನಲ್ಲಿ ಒಂದು ವಿಚಿತ್ರ ರೀತಿಯ ರಿಲೇಶನ್‌ಶಿಪ್‌ನ ಜೀವನ ಪದ್ಧತಿ ಇದೆ. ಯುವ ಜನರಲ್ಲಿ ಇದು ಬಹಳ ಜನಪ್ರಿಯಗೊಳ್ಳುತ್ತಿದೆ. ಇದನ್ನು ಸ್ನೇಹ ಮದುವೆ ಅಥವಾ ಪ್ರೆಂಡ್‌ಶಿಪ್ ಮ್ಯಾರೇಜ್ ಎಂದು ಕರೆಯಲಾಗುತ್ತೆ. ಇನ್ನು ಮದುವೆಯ ಸಾಂಪ್ರದಾಯಿಕ ವ್ಯವಸ್ಥೆಯನ್ನು ಒಪ್ಪದವರು ‘ಲಿವ್ ಇನ್ ರಿಲೇಷನ್‌ಶಿಪ್’ ಪರಿಕಲ್ಪನೆಯ ಮೊರೆ ಹೋಗುತ್ತಿರುವುದು ಈಗ ಸಾಮಾನ್ಯವಾಗುತ್ತಿದೆ. ಅದರ ನಡುವೆ ಈ ಹೊಸ ರೀತಿಯ ಮದುವೆ ಈಗ ಬಹಳ ಸದ್ದು ಮಾಡುತ್ತಿದೆ.
ಇದೊಂದು ರೀತಿಯ ಪ್ರೀತಿಯಿಲ್ಲದ ವಿವಾಹ ಆಗಿದೆ. ಇಲ್ಲಿ ಪರಸ್ಪರ ಸ್ನೇಹಿತರು ಮದುವೆಯಾಗುವುದಲ್ಲ. ಬದಲಿಗೆ ಒಂದೇ ರೀತಿಯ ಆಲೋಚನೆಗಳನ್ನು ಹೊಂದಿರು ಇಬ್ಬರು ವ್ಯಕ್ತಿಗಳು ಕಾನೂನುಬದ್ಧವಾಗಿ ಮದುವೆಯಾಗುವುದಾಗಿದೆ. ಜಪಾನ್‌ನಲ್ಲಿ ಮದುವೆಗಳು ಕಡಿಮೆಯಾಗುತ್ತಿರುವ ನಡುವೆ ಸ್ನೇಹ ವಿವಾಹ ಎಂದು ಕರೆಯಲ್ಪಡುವ ಸಂಬಂಧವೊಂದು ನಿಧಾನವಾಗಿ ಬೇರೂರುತ್ತಿದೆ. ವಿಶೇಷವಾಗಿ ಕ್ಷೀಣಿಸುತ್ತಿರುವ ಜನಸಂಖ್ಯೆಯ ಸವಾಲುಗಳನ್ನು ಎದುರಿಸುತ್ತಿರುವ ಜಪಾನ್ ಈ ಪ್ರವೃತ್ತಿಯು ವಿಶಿಷ್ಟವಾದ ಅನುಭವ ನೀಡುತ್ತಿದೆ. ಆಶ್ಚರ್ಯವೇನೆಂದರೆ ಈ ವಿವಾಹ ಪದ್ಧತಿ ಭಾರತಕ್ಕೆ ಬರಲಿದ್ಯಾ ಎನ್ನುವುದು ಈಗ ಯಕ್ಷ ಪ್ರಶ್ನೆ?.
ಭಾರತದಲ್ಲಿಯೂ ಈ ರೀತಿಯ ವಿವಾಹ ಪದ್ಧತಿ ಬರುವ ಸಾಧ್ಯತೆಯಿದೆ ಎಂದು ತಜ್ಞರು ಸೂಚಿಸುತ್ತಾರೆ. ಜಪಾನಿನ ಜನರಂತೆ ಭಾರತದಲ್ಲಿ ಅನೇಕ ಜನರು ಇನ್ನು ಮುಂದೆ ಮಕ್ಕಳನ್ನು ಬಯಸುವುದಿಲ್ಲ. ಅಂತಹವರಿಗೆ ಈ ಸ್ನೇಹ ಮದುವೆ ಸಹಾಯ ಮಾಡುತ್ತದೆ. ಈ ಪ್ರವೃತ್ತಿಯು ಸಾಂಪ್ರದಾಯಿಕ ಸಂಬಂಧಗಳಿಗೆ ಪರ್ಯಾಯವಾಗಿ ಪರಿಣಮಿಸುತ್ತದೆ. ಆದಾಗ್ಯೂ, ಈ ಮದುವೆಯಿಂದ ಸಿಗುವ ಶಾಂತಿ ಮತ್ತು ಮಾನಸಿಕ ಆನಂದವು ಭಾರತದ ಜನರನ್ನು ಸಹ ಸ್ನೇಹ ವಿವಾಹವನ್ನು ಅನುಸರಿಸುವಂತೆ ಮಾಡುತ್ತದೆ.
ಸ್ನೇಹ ವಿವಾಹ ಇದರಲ್ಲಿ ಗಂಡ ಮತ್ತು ಹೆಂಡತಿಯಾಗಿ ಪರಸ್ಪರ ಕಾನೂನುಬದ್ಧ ಬದ್ಧತೆಯನ್ನು ಹೊಂದಿರುತ್ತಾರೆ. ಹಾಗೆಯೇ ಸ್ನೇಹ ವಿವಾಹದಲ್ಲಿ ತಮ್ಮ ಸ್ವಂತ ನಿಯಮಗಳ ಮೇಲೆ ಒಟ್ಟಿಗೆ ವಾಸಿಸಲು ಮತ್ತು ಪರಸ್ಪರ ಸಂಬಂಧಗಳನ್ನು ಹೊಂದಲು ಮುಕ್ತವಾಗಿರುತ್ತಾರೆ. ದಂಪತಿಗಳು ಬೇಕಾದರೆ ಕೃತಕ ಗರ್ಭಧಾರಣೆ ಸೇರಿದಂತೆ ವಿವಿಧ ವಿಧಾನಗಳ ಮೂಲಕ ಪೋಷಕರಾಗಲು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಜಪಾನ್ ಹಲವು ಪತ್ರಿಕಾ ವರದಿಗಳು ಹೇಳಿವೆ.
ಸ್ನೇಹ ವಿವಾಹ ಆದವರ ನಡುವೆ ರೊಮ್ಯಾಂಟಿಕ್ ಪ್ರೇಮ ಅಥವಾ ಇನ್ನಿತರ ರೀತಿಯ ಸಂಬಂಧ ಇರುವುದಿಲ್ಲ. ಅವರು ಜತೆಯಾಗಿ ವಾಸಿಸಬಹುದು ಅಥವಾ ಪ್ರತ್ಯೇಕವಾಗಿಯೂ ಇರಬಹುದು. ಸ್ನೇಹ ವಿವಾಹಗಳಲ್ಲಿ ಭಾಗವಹಿಸುವವರು ಸಾಂಪ್ರದಾಯಿಕ ಪ್ರಣಯ ತೊಡಕುಗಳ ಮೇಲೆ ಒಡನಾಟದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾರೆ.
ಸ್ನೇಹ ವಿವಾಹವನ್ನು ಪ್ರಾರಂಭಿಸುವ ಪ್ರಕ್ರಿಯೆಯು ಪರಸ್ಪರ ಆಳವಾದ ತಿಳಿವಳಿಕೆಯನ್ನು ರೂಪಿಸಲು ಒಟ್ಟಿಗೆ ಸಮಯ ಕಳೆಯುವುದನ್ನು ಒಳಗೊಂಡಿರುತ್ತದೆ. ಇದಲ್ಲದೇ, ದಂಪತಿಗಳು ಹಣಕಾಸಿನ ಜವಾಬ್ದಾರಿಗಳು, ಮನೆ ಕೆಲಸಗಳು ಮತ್ತು ವ್ಯವಸ್ಥಾಪನಾ ವ್ಯವಸ್ಥೆಗಳು ಸೇರಿದಂತೆ ಮನೆಯ ನಿರ್ವಹಣೆಯ ವಿವಿಧ ಅಂಶಗಳ ಬಗ್ಗೆ ಚರ್ಚೆಯಲ್ಲಿ ತೊಡಗುತ್ತಾರೆ. ಈ ಸಂಬಂಧದಲ್ಲಿ ‘ಗಂಡ- ಹೆಂಡತಿ’ ಇಬ್ಬರೂ ತಮ್ಮ ನಡುವಿನ ಪರಸ್ಪರ ಒಪ್ಪಂದ ಜಾರಿಯಲ್ಲಿ ಇರುವವರೆಗೂ ತಮ್ಮ ಮದುವೆಯಾಚೆ ಅನ್ಯ ವ್ಯಕ್ತಿಗಳ ಜತೆ ದೈಹಿಕ ಸಂಪರ್ಕ ಹೊಂದಲು ಕೂಡ ಮುಕ್ತರಾಗಿರುತ್ತಾರೆ.
ಈ ವಿನೂತನ ಮಾದರಿಯ ವೈವಾಹಿಕ ಸಂಬಂಧದಲ್ಲಿ ಜನರು ನಿಷ್ಕಾಮ ಸಂಗಾತಿಗಳಾಗುತ್ತಾರೆ. ಅಂದರೆ ಅವರು ಪರಸ್ಪರ ಪ್ರೀತಿಯಲ್ಲಿ ಬೀಳುವುದಿಲ್ಲ. ಅಷ್ಟೇ ಅಲ್ಲ, ಅವರ ನಡುವೆ ಲೈಂಗಿಕ ಸಂಬಂಧವೂ ಇರುವುದಿಲ್ಲ. ಜಪಾನ್‌ನ ಜನಸಂಖ್ಯೆಯಲ್ಲಿ ಸುಮಾರು ಶೇ 1ರಂದು ಅಥವಾ ಸಾವಿರಾರು ಜನರು ಈ ರೀತಿಯ ಸಂಬಂಧವನ್ನು ಅಪ್ಪಿಕೊಳ್ಳುತ್ತಿದ್ದಾರೆ.
Leave a Comment