ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ; iPhone 16 ಮೇಲೆ ಬಂಪರ್ ಆಫರ್

iPhone 16
Spread the love

ನ್ಯೂಸ್ ಆ್ಯರೋ: iPhone ಕ್ರೇಜ್ ಇನ್ನೂ ಮುಗಿದಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ‘ಐಫೋನ್ 16’ ದರ್ಬಾರ್ ಮಾಡ್ತಿದೆ. ಫೋನ್ ಮೇಲೆ ಭಾರೀ ರಿಯಾಯಿತಿ ಲಭ್ಯವಿದೆ. ಆಪಲ್ ಫೋನ್ ಖರೀದಿಸಲು ಬಯಸುವವರಿಗೆ ಇದೊಂದು ಒಳ್ಳೆಯ ಅವಕಾಶ.

ಹೌದು. . ಐಫೋನ್ ಖರೀದಿ ಮಾಡೋರಿಗೆ ಫ್ಲಿಪ್‌ಕಾರ್ಟ್‌ ವಿಶೇಷ ಆಫರ್ ನೀಡಿದೆ. ಬರೋಬ್ಬರಿ 9,000 ವರೆಗೆ ರಿಯಾಯಿತಿ ನೀಡುತ್ತಿದೆ. ಹಳೆಯ ಫೋನ್ ಅಪ್‌ಗ್ರೇಡ್ ಮಾಡೋರಿಗೆ, ಹೊಸ ಫೋನ್ ಖರೀದಿಸುವ ಚಿಂತೆಯಲ್ಲಿರೋರಿಗೆ ಇದೇ ಬೆಸ್ಟ್​ ಟೈಂ.

ಭಾರತದಲ್ಲಿ ಐಫೋನ್-16 79,900 ರೂಪಾಯಿಗೆ ಬಿಡುಗಡೆಯಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಪ್ರಸ್ತುತ 74,900 ರೂಪಾಯಿಗಳಿಗೆ ಲಭ್ಯವಿದೆ. 5,000 ರೂಪಾಯಿಗಳ ನೇರ ರಿಯಾಯಿತಿ ಇದೆ. ಜೊತೆಗೆ ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್ ಅಥವಾ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಹೆಚ್ಚುವರಿಯಾಗಿ 4,000 ರೂಪಾಯಿ ಆಫರ್ ಪಡೆಯಬಹುದು.

ನೀವು ಇನ್ನೂ ಹೆಚ್ಚಿನ ಹಣ ಉಳಿಸಲು ಬಯಸಿದ್ರೆ, ಹಳೆಯ ಸ್ಮಾರ್ಟ್‌ಫೋನ್ ಜೊತೆ ಎಕ್ಸ್​ಚೇಂಜ್ ಮಾಡಿಕೊಳ್ಳಬಹುದು. ಇದರಿಂದ ಮತ್ತಷ್ಟು ಕಡಿಮೆ ಬೆಲೆಗೆ ಹೊಸ ಫೋನ್ ಸಿಗಲಿದೆ.

6.1-ಇಂಚಿನ OLED ಡಿಸ್​​ಪ್ಲೇ: HDR, ಟ್ರೂ ಟೋನ್ ಸಪೋರ್ಟ್​ನೊಂದಿಗೆ 60Hz ರಿಫ್ರೆಶ್ ರೇಟ್, 2000 ನಿಟ್ಸ್ ಬ್ರೈಟ್​ನೆಸ್​, A18 ಬಯೋನಿಕ್ ಚಿಪ್‌ಸೆಟ್: 3nm ಟೆಕ್ನಿಕ್ ಆಧರಿಸಿದ ಈ ಪ್ರೊಸೆಸರ್ ಐಫೋನ್ 16 ಅನ್ನು ಅತ್ಯಂತ ಸ್ಪೀಡಾಗಿ ಮಾಡಿದೆ.

ಬ್ಯಾಟರಿ ಬ್ಯಾಕಪ್: ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್​, 22 ಗಂಟೆಗಳವರೆಗೆ ಪ್ಲೇಬ್ಯಾಕ್ ಟೈಮ್, ವಾಟರ್​​ಪ್ರೂಫ್, 48MP ಕ್ಯಾಮೆರಾ: 2x ಆಪ್ಟಿಕಲ್ ಜೂಮ್‌ನೊಂದಿಗೆ ಅದ್ಭುತ ಛಾಯಾಗ್ರಹಣ, 12MP ಸೆಲ್ಫಿ ಕ್ಯಾಮೆರಾ: AI ಇಮೇಜ್ ಪ್ರೊಸೆಸಿಂಗ್‌
ಶಕ್ತಿಶಾಲಿ ಪ್ರೊಸೆಸರ್, ಉತ್ತಮ ಡಿಸ್ಪ್ಲೇ ಮತ್ತು ಅತ್ಯುತ್ತಮ ಕ್ಯಾಮೆರಾ ಗುಣಮಟ್ಟವನ್ನು ಹೊಂದಿರುವ ಐಫೋನ್ ಬಯಸಿದರೆ ಈ ಕೊಡುಗೆ ನಿಮಗೆ ಸರಿಯಾಗಿರಬಹುದು.

Leave a Comment

Leave a Reply

Your email address will not be published. Required fields are marked *