ಪುತ್ತೂರು : ತಾರ್ಕಿಕ ಅಂತ್ಯಕ್ಕೆ ಬಂದು ನಿಂತ ಮುಸ್ಲಿಂ ವಿದ್ಯಾರ್ಥಿನಿಯ ಮೇಲಿನ ಇರಿತ ಪ್ರಕರಣ – ಪೊಕ್ಸೊ ಸಹಿತ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲು
ನ್ಯೂಸ್ ಆ್ಯರೋ : ಇಡೀ ದಿನ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಚರ್ಚೆಯ ವಿಷಯವಾಗಿದ್ದ ಮುಸ್ಲಿಂ ವಿದ್ಯಾರ್ಥಿನಿ ಮೇಲೆ ಹಿಂದೂ ಯುವಕನಿಂದ ಬ್ಲೇಡ್ ಇರಿತ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ದಕ್ಷಿಣ ಕನ್ನಡ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಬಾಲಕಿಯ ದೂರಿನಂತೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಕ್ಸೊ ಸಹಿತ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ವಿವರ ಹೀಗಿದೆ.
ದಿನಾಂಕ 20.08.2024 ರಂದು ಬೆಳಿಗ್ಗೆ ಸಂತ್ರಸ್ತ ಬಾಲಕಿಯು ತಾನು ವ್ಯಾಸಂಗ ಮಾಡುತ್ತಿರುವ ಪುತ್ತೂರಿನ ಕಾಲೇಜಿಗೆ ತೆರಳುತ್ತಿದ್ದಾಗ, ಬಾಲಕಿಯ ಹಿಂದುಗಡೆಯಿಂದ ಆಕೆಯ ಪರಿಚಯದ ಆರೋಪಿತನಾದ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕನು ಹಿಂಬಾಲಿಸಿಕೊಂಡು ಬಂದು, ಬಾಲಕಿಯನ್ನು ಪ್ರೀತಿಸುತ್ತಿರುವ ವಿಚಾರದಲ್ಲಿ ಮಾತನಾಡಿದ್ದಾನೆ.
ಈ ವೇಳೆ ಬಾಲಕಿಯು ನಿರಾಕರಿಸಿದ್ದು, ಕೋಪಗೊಂಡ ಬಾಲಕನು ಆತನ ಬಳಿಯಿದ್ದ ಯಾವುದೋ ಹರಿತವಾದ ಆಯುಧದಿಂದ ಸಂತ್ರಸ್ಥೆಯ ಕೈಗೆ ತಿವಿದು ಪರಾರಿಯಾಗಿದ್ದು, ಗಾಯಗೊಂಡ ಬಾಲಕಿಯು ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ. 42/2024 ಕಲಂ: 78, 126(2), 118(1), 238 BNS 2023 ಮತ್ತು ಕಲಂ 12 ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Leave a Comment