ಹೊಸ ಕ್ರಮಕ್ಕೆ ಮುಂದಾದ ಸರ್ಕಾರ; ಜ.1 ರಿಂದ ಭಿಕ್ಷುಕರಿಗೆ ಭಿಕ್ಷೆ ಹಾಕಿದರೆ ನಿಮ್ಮ ಮೇಲೆ ಎಫ್ಐಆರ್ ಫಿಕ್ಸ್
ಕೇಂದ್ರ ಸರ್ಕಾರದ ಭಿಕ್ಷಾಟನೆ ಮುಕ್ತ ನಗರ ಯೋಜನೆಯ ಭಾಗವಾಗಿ ಮಧ್ಯಪ್ರದೇಶದ ಇಂದೋರ್ ನಗರವನ್ನು ಭಿಕ್ಷಾಟನೆ ಮುಕ್ತಗೊಳಿಸಲು ನಿರ್ಧರಿಸಲಾಗಿದೆ. ಈ ನಿಮಿತ್ತ 2025ರ ಜ.1ರಿಂದಲೇ ಭಿಕ್ಷೆ ನೀಡುವ ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಿಸಲು ನಿರ್ಧರಿಸಲಾಗಿದೆ.
‘ಇಂದೋರ್ನಲ್ಲಿ ಭಿಕ್ಷಾಟನೆ ನಿಷೇಧಿಸುವ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಭಿಕ್ಷಾಟನೆ ವಿರುದ್ಧ ನಗರದಲ್ಲಿ ಅಭಿಯಾನ ಪ್ರಾರಂಭಿಸಿದ್ದು ತಿಂಗಳಾಂತ್ಯದವರೆಗೆ ಮುಂದುವರಿಯಲಿದೆ.
ಭಿಕ್ಷೆ ನೀಡುವ ಪಾಪದಲ್ಲಿ ಜನರು ಭಾಗಿಯಾಗಬಾರದು’ ಎಂದು ಜಿಲ್ಲಾಧಿಕಾರಿ ಆಶಿಷ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ಇತ್ತೀಚಿನ ತಿಂಗಳುಗಳಲ್ಲಿ ಜನರನ್ನು ಭಿಕ್ಷೆಗೆ ಪ್ರೇರಿಸುವ ಹಲವು ಗುಂಪುಗಳನ್ನು ಜಿಲ್ಲಾಡಳಿತ ನಿರ್ಬಂಧಿಸಿದ್ದು, ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಿದೆ.ದೇಶದಲ್ಲಿ 10 ನಗರಗಳನ್ನು ಭಿಕ್ಷಾಟನೆ ಮುಕ್ತ ಮಾಡುವ ಪೈಲಟ್ ಯೋಜನೆಯನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಆರಂಭಿಸಿದೆ. ಈ ನಗರಗಳಲ್ಲಿ ಇಂದೋರ್ ಸಹ ಒಂದು.
Leave a Comment