ಯುವತಿಯ ತುಟಿಗೆ ಮುತ್ತಿಡಲು ಹೋದ ಮಹಿಳಾ ಪೊಲೀಸ್; ಅಸಲಿಗೆ ಅಲ್ಲಿ ಆಗಿದ್ದೇನು ಗೊತ್ತಾ?
ನ್ಯೂಸ್ ಆ್ಯರೋ: ಮಹಿಳೆಯರ ರಕ್ಷಣೆ ಬಗ್ಗೆ ಪದೇ ಪದೇ ನಮ್ಮ ದೇಶದಲ್ಲಿ ಕೂಗು ಕೇಳಿ ಬರುತ್ತಲೇ ಇರುತ್ತವೆ. ದೇಶದ ಮಹಿಳೆಯರಿಗೆ ಕೊಂಚ ಹೆಚ್ಚು ಕಡಿಮೆಯಾದರು ಅವರನ್ನು ಕಾಪಾಡಲು ಪೊಲೀಸರು ಓಡೋಡಿ ಬರುತ್ತಾರೆ. ಆದ್ರೆ ಪೊಲೀಸರೇ ಅದರಲ್ಲೂ ಮಹಿಳಾ ಪೊಲೀಸರೇ ಮಹಿಳೆಯರ ಘನತೆ ಧಕ್ಕೆ ತಂದರೆ ಹೇಗಿರುತ್ತೆ. ಅಂತಹದೊಂದು ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ.
ಸಿಲಿಗುರಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ತನಿಯಾ ರಾಯ್ ಎಂಬ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಯುವತಿಯೊಂದಿಗೆ ದುರ್ವರ್ತನೆ ತೋರಿರುವುದು ಬೆಳಕಿಗೆ ಬಂದಿದೆ. ಅಸಲಿಗೆ ಇದೇ ಸಬ್ ಇನ್ಸ್ಪೆಕ್ಟರ್ ಪಶ್ಚಿಮ ಬಂಗಾಳದಲ್ಲಿ ಮಹಿಳಾ ಸುರಕ್ಷತೆಗಾಗಿ ಪಿಂಕ್ ಮೊಬೈಲ್ ವ್ಯಾನ್ ಗುರಿಯನ್ನು ಇಟ್ಟುಕೊಂಡಿದ್ದರು.
ಡ್ಯೂಟಿ ಮೇಲೆ ಅದು ಸಮವಸ್ತ್ರದ ಮೇಲೆ ಇದ್ದ ತನಿಯಾ ರಾಯ್ ಒಂದು ಹುಡುಗಿಯ ಕುತ್ತಿಗೆಯನ್ನು ಹಿಡಿದು ಮುತ್ತಿಡಲು ಹೋಗಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ಮಹಿಳಾ ಪೊಲೀಸ್ ಹೀಗೆ ಯುವತಿಯನ್ನು ನಡೆಸಿಕೊಂಡಿದ್ದ ತುಂಬಾ ಅವಮಾನಕಾರಕ ಹಾಗೂ ನಾಚಿಕೆಗೇಡುತನ ಎಂದು ಜನರು ತನಿಯಾ ರಾಯ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ತನಿಯಾ ರಾಯ್ ಗಸ್ತು ತಿರುಗುತ್ತಿದ್ದ ವೇಳೆ ಒಂದು ಕಡೆ ಯುವಕ ಹಾಗೂ ಯುವತಿ ಸುಮ್ಮನೆ ಮಾತನಾಡುತ್ತಾ ನಿಂತಿದ್ದಾರೆ. ಈ ವೇಳೆ ಅವರನ್ನು ಕರೆದು ಮಾತನಾಡಿಸಿದ ತನಿಯಾ ರಾಯ್ ಹುಡುಗಿ ನಾನು ಮದ್ಯಪಾನ ಮಾಡಿಲ್ಲ ಅಂತ ಹೇಳಲು ಹೋಗುವಾಗ ಯುವತಿಯ ಬಾಯಿಗೆ ತನ್ನ ಬಾಯಿಯನ್ನು ಒಯ್ದು ಮುತ್ತಿಡಲು ಹೋಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.
Leave a Comment