ಬಿಗ್‌ಬಾಸ್ ಮೋಕ್ಷಿತಾ ಮಕ್ಕಳ ಕಳ್ಳಿನಾ?; 10 ವರ್ಷದ ಹಿಂದೆ ಪೊಲೀಸರು ಬಂಧಿಸಿದ್ದು ನಿಜವೇ? ಇನ್ಸ್ಟಾದಲ್ಲಿ ಖಡಕ್ ಪೋಸ್ಟ್ !
ನ್ಯೂಸ್ ಆ್ಯರೋ: ಕಿರುತೆರೆ ವೀಕ್ಷಕರಿಗೆ ಮೋಕ್ಷಿತಾ ಪೈ ಅವರನ್ನು ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ‘ಪಾರು’ ಧಾರಾವಾಹಿಯ ಮೂಲಕ ವೀಕ್ಷಕರ ಮನಗೆದ್ದಿದ್ದ ನಟಿ. ಈಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ಸೀನಸ್ 11 ಸ್ಪರ್ಧಿ. ರಿಯಾಲಿಟಿ ಶೋ ಮೂಲಕವೂ ಮೋಕ್ಷಿತಾ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ.
ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಮೋಕ್ಷಿತಾ ಪೈ ಸೈಲೆಂಟ್ ಆಗಿ ಇದ್ದರು. ಆದರೆ, 50 ದಿನಗಳನ್ನುಪೂರೈಸಿದ ಬಳಿಕ ಮೋಕ್ಷಿತಾ ಪೈ ಪೈಪೋಟಿಗೆ ನಿಂತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೋಕ್ಷಿತಾ ಪೈ ಬಗ್ಗೆ ಕೆಲವು ಪಾಸಿಟಿವ್ ಕಾಮೆಂಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ನೆಗೆಟಿವ್ ಆಗಿ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.
ಸದ್ಯ ಮೋಕ್ಷಿತಾರನ್ನು ಇಷ್ಟಪಡುವ ವರ್ಗ ಒಂದು ಕಡೆ, ವಿರೋಧಿಸುವ ವರ್ಗ ಮತ್ತೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಿದ್ದಿದ್ದಾರೆ. ಈ ಮಧ್ಯೆ ಮೋಕ್ಷಿತಾ ಪೈ 10 ವರ್ಷಗಳ ಹಿಂದೆ ಪೊಲೀಸರ ಅತಿಥಿಯಾಗಿದ್ದರು ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹಾಗೇ ಮೋಕ್ಷಿತಾ ಪೈ ಅಸಲಿ ಹೆಸರು ಇದಲ್ಲ ಬೇರೆನೇ ಅಂತ ಹೇಳಲಾಗುತ್ತಿದೆ.
ಹೌದು. . ‘ಪಾರು’ ಧಾರಾವಾಹಿಯ ನಟಿ ಮೋಕ್ಷಿತಾ ಪೈ ಬಿಗ್ ಬಾಸ್ ಮನೆಯ ಸುರಸುಂದರಿ. ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಮೋಕ್ಷಿತಾ ಪೈ ಹುಡುಗರ ಹೃದಯ ಗೆದ್ದಿದ್ದಾರೆ. ಇದೇ ಬೆನ್ನಲ್ಲೇ ಮೋಕ್ಷಿತಾ ಅವರ ಬಗ್ಗೆ ಸುದ್ದಿಯನ್ನು ಹಬ್ಬಿಸಿದ್ದಾರೆ. ಮೋಕ್ಷಿತಾ ಪೈ ಅವರನ್ನು 10 ವರ್ಷಗಳ ಹಿಂದೆ ಅರೆಸ್ಟ್ ಮಾಡಲಾಗಿತ್ತು ಅನ್ನೋ ಸುದ್ದಿ ಅವರ ಅಭಿಮಾನಿಗಳ ನಿದ್ದೆ ಕೆಡಿಸಿದೆ. ಈ ಸುಂದರಿಯ ಹಿಂದೆ ಇಂತಹದ್ದೊಂದು ಕಥೆ ಇದೆಯೇ ಎಂದು ಅಚ್ಚರಿ ಪಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮೋಕ್ಷಿತಾ ಬಾಲಕಿಯೊಬ್ಬಳನ್ನು ಕಿಡ್ನಾಪ್ ಮಾಡಿ ಪೋಲಿಸರ ಅತಿಥಿಯಾಗಿದ್ದರು ಅನ್ನೋ ಸುದ್ದಿ ಹರಿದಾಡುತ್ತಿದೆ.
ಮೋಕ್ಷಿತಾ ಪೈ ಹಾಗೂ ಆಕೆಯ ಬಾಯ್‌ಫ್ರೆಂಡ್ ಅನ್ನು 9 ವರ್ಷದ ಬಾಲಕಿಯನ್ನು ಅಪಹರಣ ಮಾಡಿದ್ದಕ್ಕೆ 10 ವರ್ಷಗಳ ಹಿಂದೆ ಬಂಧಿಸಲಾಗಿತ್ತು ಎನ್ನುವ ಸುದ್ದಿ ಹಬ್ಬಿದೆ. ಅಷ್ಟಕ್ಕೂ ಘಟನೆ ಏನು ಅಂದರೆ, ಕಿರುತೆರೆಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಮೋಕ್ಷಿತಾ ಪೈ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ಬಿಕಾಂ ಪದವೀಧರೆಯಾಗಿದ್ದ ಮೋಕ್ಷಿತಾ ಪೈಗೆ ಎಂಬಿಎ ಪದವಿ ಮಾಡಿದ್ದ ನಾಗಭೂಷಣ್ ಎಂಬ ಬಾಯ್‌ಫ್ರೆಂಡ್ ಇದ್ದು, ಇಬ್ಬರೂ ಸೇರಿ ಟ್ಯೂಷನ್‌ಗೆ ಬರುತ್ತಿದ್ದ ಹೆಣ್ಣು ಮಗಳನ್ನು ಕಿಡ್ನಾಪ್ ಮಾಡಿದ್ದಾರೆಂಬ ಸುದ್ದಿ ಹಬ್ಬಿದೆ. ಅಂದ್ಹಾಗೆ ಮೋಕ್ಷಿತಾ ಪೈ ಅಸಲಿ ಹೆಸರು ಐಶ್ವರ್ಯಾ ಎಂದೂ ಹೇಳಲಾಗುತ್ತಿದೆ.
2014ರಲ್ಲಿ ಐಶ್ವರ್ಯಾ ಆಗಿದ್ದ ಮೋಕ್ಷಿತಾ ಪೈ ಮಕ್ಕಳಿಗೆ ಟ್ಯೂಷನ್ ಅನ್ನು ಹೇಳಿಕೊಡುತ್ತಿದ್ದರು. ಬಾಯ್‌ಫ್ರೆಂಡ್ ಜೊತೆ ಸೇರಿಕೊಂಡು ಹೊಟೇಲ್ ಉದ್ಯಮಿಯ 9 ವರ್ಷದ ಮಗಳನ್ನು ಅಪಹರಣ ಮಾಡಿದ್ದರು. ಅದು ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಆಗ ಇವರಿಬ್ಬರನ್ನೂ ಅರೆಸ್ಟ್ ಮಾಡಿದ್ದರು ಎಂದು ವರದಿಯಾಗಿತ್ತು. ಅಸಲಿಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯ ಹಿನ್ನೆಲೆಯೇನು ಅನ್ನೋದನ್ನು ಮೋಕ್ಷಿತಾ ಪೈ ಅವರೇ ಹೇಳಬೇಕಿದೆ. 10 ವರ್ಷಗಳ ಹಿಂದೆ ಮೋಕ್ಷಿತಾ ಪೈ ಅವರನ್ನು ಬಂಧಿಸಿದ್ದು ನಿಜವೇ? ಮೋಕ್ಷಿತಾ ಪೈ ಅವರ ಅಸಲಿ ಹೆಸರು ಐಶ್ವರ್ಯಾನೇನಾ? ಈ ಎಲ್ಲಾ ಪ್ರಶ್ನೆಗಳಿಗೆ ಮೋಕ್ಷಿತಾ ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಉತ್ತರ ನೀಡಬೇಕಿದೆ. ಇನ್ನೂ ಈ ಘಟನೆ ನಡೆದಾಗ ಡೆಕ್ಕನ್ ಹೆರಾಲ್ಡ್ ಈ ಬಗ್ಗೆ ಸಂಕ್ಷಿಪ್ತ ವರದಿ ಮಾಡಿದೆ. ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಸುದ್ದಿ ಹರಿದಾಡುತ್ತಿದ್ದು, ಮೋಕ್ಷಿತಾ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
ಇತ್ತ ಮೋಕ್ಷಿತಾ ದಿ ಕ್ವೀನ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಿಂದ ಮೋಕ್ಷಿತಾ ಪೈ ಖಾತೆಗೆ ಈ ಸ್ಟೋರಿಯನ್ನು ಟ್ಯಾಗ್ ಮಾಡಲಾಗಿದೆ. ‘ಒಂದು ಕಾರ್ಯಕ್ರಮವನ್ನು ಕಾರ್ಯಕ್ರಮದಂತೆ ನೋಡಿ. ಸ್ಪರ್ಧಿಗಳ ಮಾನಹಾನಿಯನ್ನು ನಿಲ್ಲಿಸಿ. ಅವರು ಈಗಾಗಲೇ ಸಾಧಿಸಿದ್ದಾರೆ. ಅವರನ್ನು ಅವರು ಈಗಾಗಲೇ ಏನೆಂದು ಸಾಬೀತು ಪಡಿಸಿಕೊಂಡಿದ್ದಾರೆ. ಸಾಧ್ಯವಾದರೆ ನಿಮ್ಮ ಇಷ್ಟದ ಸ್ಪರ್ಧಿಯನ್ನು ಬೆಂಬಲಿಸಿ, ಇಲ್ಲವಾದರೆ ಕಾರ್ಯಕ್ರಮವನ್ನು ನೋಡಿ ಎಂಜಾಜ್ ಮಾಡಿ’. ‘ಚಿಲ್ಲರೆ ಕಾಸು ಆಸೆಗೆ ಅಪಪ್ರಚಾರ ನಿಲ್ಲಿಸಿ’ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದ್ದು, ‘ಸ್ಟೇ ಸ್ಟ್ರಾಂಗ್ ಮೋಕ್ಷಿತಾ’ ಎಂದು ಹಂಚಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಮೋಕ್ಷಿತಾ ವಿರುದ್ಧ ಕೇಳಿಬರುತ್ತಿರುವ ಆರೋಪ ಹಾಗೂ ಅಪಪ್ರಚಾರ ನಿಲ್ಲಿಸುವ ಕಾರಣದಿಂದ ಈ ಪೋಸ್ಟ್ ಹಾಕಲಾಗಿರಬಹುದು ಎಂದು ನೆಟ್ಟಿಗರು ಅಂದಾಜಿಸಿದ್ದಾರೆ.
Leave a Comment