60ರ ಅರ್ಚಕನಿಗೆ ಫೇಸ್‌ಬುಕ್‌ ನಲ್ಲಿ ಗಾಳ ಹಾಕಿದ 20ರ ಯುವತಿ- ಲಕ್ಷಾಂತರ ರೂಪಾಯಿ ಪೀಕಿದ ಬಳಿಕ ಫೇಸ್‌ಬುಕ್‌ ಬ್ಲಾಕ್ : ಪೋಲಿಸರ ಮೊರೆ ಹೋದ ಅರ್ಚಕ

Spread the love

ನ್ಯೂಸ್ ಆ್ಯರೋ‌ : ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದ 20 ವರ್ಷದ ಯುವತಿ ಮಂಡ್ಯದ ಪಾಂಡವಪುರ ಮೂಲದ 60 ವರ್ಷದ ಅರ್ಚಕನಿಗೆ ಲಕ್ಷ ಲಕ್ಷ ಹಣ ಪಂಗನಾಮ ಹಾಕಿದ್ದು, ಹಣ ಕಳೆದುಕೊಂಡ ಅರ್ಚಕ ಪೋಲಿಸರ ಮೊರೆ ಹೋಗಿದ್ದಾನೆ.

ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ‌ ವಿಜಯ್ ಕುಮಾರ್ ಹಣ ಕಳೆದುಕೊಂಡವನಾಗಿದ್ದು, ಹಣ ಪೀಕಿದ ಯುವತಿಯ ವಿರುದ್ಧ ನ್ಯಾಯದ ಮೊರೆ ಹೋಗಿದ್ದಾನೆ.

ಅರ್ಚಕ‌ ವಿಜಯ್ ಕುಮಾರ್ ಕುಟುಂಬದಿಂದ ದೂರವಾಗಿ ಒಬ್ಬನೇ ವಾಸಿಸುತ್ತಿದ್ದು, ಈತನಿಗೆ ಕೆಲ ದಿನಗಳ ಹಿಂದೆ ಫೇಸ್​ಬುಕ್​ನಲ್ಲಿ ಸಿರಿ ಶ್ರೇಷ ಸರಿತಾ ಎಂಬ ಸುಂದರಿ ಪರಿಚಯವಾಗಿದ್ದಾಳೆ. ಹೀಗಾಗಿ ಫೇಸ್​ಬುಕ್ ಸುಂದರಿ ಸಿರಿ ಜೊತೆ ಪ್ರತಿ ದಿನ ಚಾಟಿಂಗ್ ಮಾಡುತ್ತಿದ್ದರು.

ಅರ್ಚಕ ವಿಜಯ್ ಕುಮಾರ್ ಹಿನ್ನಲೆ ತಿಳಿದುಕೊಂಡ ಯುವತಿ ವಸತಿ, ಆರೋಗ್ಯ ಅಂತ ಹೇಳಿ ಹಂತ ಹಂತವಾಗಿ ಹಣ ಪೀಕಿದ್ದಾಳೆ. ಹೀಗೆ ಬರೋಬ್ಬರಿ 1 ಲಕ್ಷದ 40 ಸಾವಿರದಷ್ಟು ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾಳೆ.

ಬಣ್ಣ ಬಣ್ಣದ ಮಾತುಗಳಿಂದ ಅರ್ಚಕ ವಿಜಯ್ ಕುಮಾರ್ ನನ್ನು ಬಲೆ ಹಾಕಿದ ಸುಂದರಿಯ ಮಾತು ನಂಬಿ ಫೋನ್ ಪೇ ಮೂಲಕ ಹಣ ಕೊಟ್ಟ ಬಳಿಕ ಭೇಟಿ ಆಗುವಂತೆ ಸುಂದರಿಗೆ ವಿಜಯ್ ಒತ್ತಾಯ ಹೇರಲಾರಂಭಿಸಿದ್ದಾನೆ. ಆದರೆ ಇಂದು, ನಾಳೆ ಎಂದು ಕಾಲ ಕಳೆದ ಬಳಿಕ ಫೇಸ್ಬುಕ್ ಬ್ಲಾಕ್ ಮಾಡಿಬಿಟ್ಟಿದ್ದಾಳೆ.

ಸುಂದರಿ ಮಾಯವಾದ ಬಳಿಕ ಮೋಸ ಹೋಗಿರುವ ಬಗ್ಗೆ ವಿಜಯ್ ಕುಮಾರ್​ಗೆ ಮನವರಿಕೆಯಾಗಿದೆ. ಹಣ ವಾಪಸ್ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾನೆ. ಸದ್ಯ ಮಂಡ್ಯದ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *