ಇನ್ಮುಂದೆ ಎಟಿಎಂ ಮೂಲಕ ಪಿಎಫ್ ಹಣ ಡ್ರಾ; ಗ್ರಾಹಕರಿಗೆ ಭರ್ಜರಿ ಗುಡ್​ನ್ಯೂಸ್

Pf Atm
Spread the love

ನ್ಯೂಸ್ ಆ್ಯರೋ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಕೋಟಿಗಟ್ಟಲೆ ಗ್ರಾಹಕರಿಗೆ ದೊಡ್ಡ ಶುಭ ಸುದ್ದಿ ನೀಡಿದೆ. ಹೊಸ ಪಿಎಫ್ ನೀತಿಯು ಜೂನ್ 2025 ರೊಳಗೆ ಜಾರಿಗೆ ಬರಲಿದೆ. ಹೊಸ ಆ್ಯಪ್, ಎಟಿಎಂನಿಂದ ಪಿಎಫ್ ಹಣ ಡ್ರಾ ಮಾಡುವ ಸೌಲಭ್ಯ ಲಭ್ಯವಾಗಲಿದೆ ಎಂದು ತಿಳಿಸಿದೆ.

ಹೊಸ ಸಾಫ್ಟ್‌ವೇರ್ ಸಿಸ್ಟಮ್ ಇಪಿಎಫ್‌ಒ 3.0 ಅನ್ನು ಈ ವರ್ಷ ಪ್ರಾರಂಭಿಸಲಾಗುವುದು ಅಂತಾ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಘೋಷಣೆ ಮಾಡಿದ್ದಾರೆ. ಈ ಹೊಸ ವ್ಯವಸ್ಥೆಯು ಉದ್ಯೋಗಿಗಳಿಗೆ ಅನುಕೂಲಕರ, ಬಳಕೆದಾರ ಸ್ನೇಹಿ ಆಗಿರಲಿದೆ.

EPFO 3.0 ಅಡಿಯಲ್ಲಿ ಸದಸ್ಯರಿಗೆ ATM ಕಾರ್ಡ್​​​ಗಳನ್ನು ನೀಡಲಾಗುತ್ತದೆ. ಅದರ ಮೂಲಕ ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿ (ಪಿಎಫ್) ಖಾತೆಯ ಮೊತ್ತವನ್ನು ಸುಲಭವಾಗಿ ಹಿಂಪಡೆಯಬಹುದು. ಆರ್ಥಿಕ ತುರ್ತು ಸಂದರ್ಭಗಳಲ್ಲಿ ಈ ಸೇವೆ ಸಹಾಯಕ ಆಗಲಿದೆ. ವೆಬ್​​ಸೈಟ್​ನಲ್ಲಿರುವ ಕೆಲವು ತಾಂತ್ರಿಕ ದೋಷಗಳನ್ನು ಮೊದಲು ಸರಿಪಡಿಸುತ್ತೇವೆ. ನಂತರ ಇಪಿಎಫ್‌ಒ 3.0 ಅನ್ನು ಹಂತಹಂತವಾಗಿ ಜಾರಿಗೊಳಿಸಲಾಗುತ್ತದೆ ಎಂದು ಕೇಂದ್ರ ಸಚಿವರ ತಿಳಿಸಿದ್ದಾರೆ.

EPFO 3.0 ಅಡಿಯಲ್ಲಿ ಹೊಸ ಮೊಬೈಲ್ ಅಪ್ಲಿಕೇಶನ್ಸ್​, ಇತರೆ ಡಿಜಿಟಲ್ ಸೇವೆಗಳನ್ನ ಪ್ರಾರಂಭಿಸಲಾಗುತ್ತದೆ. 2025ರ ಜೂನ್ ವೇಳೆಗೆ ಹೊಸ ಆ್ಯಪ್, ಎಟಿಎಂ ಕಾರ್ಡ್ ಹಾಗೂ ಸುಧಾರಿತ ಸಾಫ್ಟ್ ವೇರ್ ರಿಲೀಸ್ ಆಗಲಿದೆ.

Leave a Comment

Leave a Reply

Your email address will not be published. Required fields are marked *