
ಗುಟ್ಟಾಗಿ ಎರಡನೇ ಮದುವೆಯಾದ್ರಾ ನಟಿ ಜ್ಯೋತಿ ರೈ? – ತೆಲುಗು ನಿರ್ದೇಶಕನೊಂದಿಗಿನ ಫೋಟೋ ಹಂಚಿ ‘ಗುಡ್ ನ್ಯೂಸ್ ಇದೆ’ ಎಂದಾ ದೇವಕಿ
- ಮನರಂಜನೆ
- August 29, 2023
- No Comment
- 81
ನ್ಯೂಸ್ ಆ್ಯರೋ : ಈಚೆಗೆ ತಮ್ಮ ಹಾಟ್ ಲುಕ್ ಹಾಗೂ ವೈಯಕ್ತಿಕ ಬದುಕಿನ ಸಂಬಂಧ ಸುದ್ದಿಯಾಗಿದ್ದ ಕಿರುತೆರೆ ನಟಿ ಜ್ಯೋತಿ ರೈ, ಇನ್‌ಸ್ಟಾಗ್ರಾಂನಲ್ಲಿ ತೆಲುಗು ನಿರ್ದೇಶಕರೊಂದಿಗೆ ಇರುವ ಫೋಟೋ ಜತೆಗೆ ‘ಗುಡ್ ನ್ಯೂಸ್ ಇದೆ’ ಎಂದಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ದಶಕಗಳ ಹಿಂದೆ ದೇವಕಿ ಪಾತ್ರದಲ್ಲಿ ಛಾಪು ಮೂಡಿಸಿದ ನಟಿ ಈಗ ಸಿನಿರಂಗದಲ್ಲಿ ಬ್ಯುಸಿ ಆಗಿದ್ದಾರೆ. ತೆಲುಗು ಕಿರುತೆರೆಯಲ್ಲೂ ಬೇಡಿಕೆಯ ಕಿರುತೆರೆ ನಟಿಯಾಗಿರುವ ಇವರು, ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ.
ಕನ್ನಡದ ಹಲವು ಹಿಟ್ ಸೀರಿಯಲ್‌ಗಳಲ್ಲಿ ನಟಿಸಿರುವ ಜ್ಯೋತಿ ರೈ ಕೂಡ ತಮ್ಮ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ. ಇವರಿಗೆ ಓರ್ವ ಪುತ್ರನಿದ್ದಾನೆ. ಸದ್ಯ ತಮಿಳು, ತೆಲುಗು ಭಾಷೆಯ ಸಿನಿಮಾ, ವೆಬ್ ಸೀರಿಸ್‌ಗಳಲ್ಲಿ ಬ್ಯುಸಿಯಾಗಿರುವ ಈ ನಟಿ, ಪರಭಾಷಾ ನಿರ್ದೇಶಕ ಸುಕುಮಾರ್ ಜೊತೆಗಿನ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಅಷ್ಟೇ ಅಲ್ಲದೇ ಅವರ ಇವರಿಬ್ಬರು ಡೇಟಿಂಗ್‌ನಲ್ಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಇದೀಗ ಜ್ಯೋತಿ ರೈ ಅವರು ಹಾಕಿಕೊಂಡಿರುವ ಫೋಸ್ಟ್ ಮತ್ತೆ ಇವರಿಬ್ಬರ ಸಂಬಂಧವನ್ನು ಗಟ್ಟಿಪಡಿಸಿದೆ.
ನಿರ್ದೇಶಕ ಪೂರ್ವಜ್ ಜತೆಗಿನ ಫೋಟೋ ಹಂಚಿ ಗುಡ್ ನ್ಯೂಸ್ ಇದೆ ಎಂದ ಜ್ಯೋತಿ ರೈ
ಜ್ಯೋತಿ- ಸುಕು ಪೂರ್ವಜ್ ಡೇಟಿಂಗ್ ನಡೆಸುತ್ತಿರುವುದು ನಿಜ ಎಂದು ಟಾಲಿವುಡ್‌ನಲ್ಲಿ ಗುಲ್ಲಾಗಿದೆ. ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ, ಈಗ ಜ್ಯೋತಿ ಹಾಗೂ ಸುಕು ಇಬ್ಬರೂ ಕೂಡ ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸರ್ಪ್ರೈಸ್ ಕೊಡಲು ಮುಂದಾಗಿದ್ದಾರೆ. ಆದಷ್ಟು ಬೇಗ ಸಿಹಿ ಸುದ್ದಿ ಹಂಚಿಕೊಳ್ಳಲು ಬಾಕಿ ಇದೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿ ಅಭಿಮಾನಿಗಳು ಏನೇನೋ ಗೆಸ್ ಮಾಡುತ್ತಿದ್ದಾರೆ.
ಮದುವೆ ಸುದ್ದಿ ಎಂದು ಕೆಲವರು ಗೆಸ್ ಮಾಡಿದ್ದರೆ, ಮತ್ತೆ ಕೆಲವರು ಬಿಗ್ ಬಾಸ್ ಕಂಟೆಸ್ಟೆಂಟ್ ಎಂದು ತಿಳಿದುಕೊಂಡಿದ್ದಾರೆ. ಇನ್ನು ಕೆಲವರು ಜ್ಯೋತಿ ರೈ ಪ್ರೆಗ್ನೆಂಟ್ ಎಂದು ಹೇಳುತ್ತಿದ್ದಾರೆ. ಗುಡ್ ನ್ಯೂಸ್ ಏನೇ ಇದ್ದರೂ ನಿಮ್ಮ ಜೋಡಿ ಸೂಪರ್ ಎನ್ನುತ್ತಿದ್ದಾರೆ ಕೆಲವರು.
ಹಾಟ್ ಲುಕ್‌ನಲ್ಲಿ ಜ್ಯೋತಿ ರೈ
ಸೀರೆಯಲ್ ಹಾಗೂ ರಿಯಲ್ ಲೈಫ್‌ನಲ್ಲೂ ಸಲ್ವಾರ್, ಸೀರೆಯಿಂದಲೇ ಜ್ಯೋತಿ ರೈ ಫೇಮಸ್ ಆಗಿದ್ದರು. ‘ದೇವಕಿ’, ‘ಜೋಗುಳ’, ‘ಗೆಜ್ಜೆ ಪೂಜೆ’ಯಂತಹ ಧಾರಾವಾಹಿಗಳಲ್ಲಿ ಅದ್ಭುತವಾಗಿ ನಟಿಸಿ ಕನ್ನಡಿಗರ ಮನ ಗೆದ್ದವರು ಜ್ಯೋತಿ. ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಾ ಒಂದೇ ತೆರನಾಗಿ ಕಾಣುತ್ತಿದ್ದರು. ಆದರೆ ಈಚೆಗೆ ಇವರ ಹಾಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಎಲ್ಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹೆಸರು ಬದಲಾಯಿಸಿದ ನಟಿ ಜ್ಯೋತಿ
ಜ್ಯೋತಿ ಅವರು ಸುಕು ಜತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗುಸುಗುಸು ಇರುವಾಗಲೇ ಜ್ಯೋತಿ ಪೂರ್ವಜ್ ಎಂದು ಹೆಸರನ್ನು ಬದಲಾಯಿಸಿದ್ದರು.