
ರಶ್ಮಿಕಾಗೆ ಕೈಕೊಟ್ಟು ಸಮಂತಾ ಜೊತೆ ಡ್ಯುಯೆಟ್ ಹಾಡ್ತಾರಾ ವಿಜಯ್ ದೇವರಕೊಂಡ? – ಸಮಂತಾ ಐ ಮಿಸ್ ಯೂ ಎಂದ ದೇವರಕೊಂಡ ವಿಡಿಯೋ ವೈರಲ್..!!
- ಮನರಂಜನೆ
- August 29, 2023
- No Comment
- 43
ನ್ಯೂಸ್ ಆ್ಯರೋ : ಇದೇ 1ರಂದು ತೆರೆಗೆ ಬರಲು ರೆಡಿಯಾಗಿರುವ ‘ಖುಷಿ’ ಸಿನಿಮಾದ ಜೋಡಿಯಾಗಿರುವ ವಿಜಯ್ ದೇವರಕೊಂಡ ಹಾಗೂ ಸಮಂತಾ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ವಿಜಯ್ ದೇವರಕೊಂಡ ಅವರು ಸಮಂತಾಗೆ ವಿಡಿಯೋ ಕರೆ ಮಾಡಿ ಮಿಸ್ ಯೂ ಎಂದಿದ್ದಾರೆ. ಅದಲ್ಲದೆ ಜೋಕ್ ಹೇಳುವುದಾಗಿ ಕೊನೆಗೆ ಹಾಡನ್ನು ಹೇಳಿ ಕರೆಯನ್ನು ಕಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ಕರೆಯನ್ನು ರೆಕಾರ್ಡ್ ಮಾಡಿದ ವಿಜಯ್ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರಿಬ್ಬರ ಸಂಭಾಷನೆ ಹೀಗಿತ್ತು.
ಕಾಲ್ ರಿಸೀವ್ ಮಾಡಿದ ಸಮಂತಾ ವಾಟ್ಸ್ ಅಪ್, ಎಲ್ಲವೂ ಓಕೆ ನಾ ಎಂದು ಕೇಳಿದ್ದಾರೆ. ಇದಕ್ಕೆ ವಿಜಯ್ ಐ ಮಿಸ್ ಯೂ ಎಂದಿದ್ದಾರೆ. ವಿಜಯ್ ಮಾತು ಕೇಳಿ ಸಮಂತಾ ನಾಚಿಕೊಂಡ್ರು. ವಿಡಿಯೋ ಕಾಲ್ ಮಾಡಿ ನನ್ನ ಬಳಿ ಒಂದು ‘ನಾಕ್ ನಾಕ್’ ಜೋಕ್ ಇದೆ ಎಂದಿದ್ದಾರೆ ವಿಜಯ್, ಅಮೆರಿಕದಲ್ಲಿ ಈಗ ಎಷ್ಟು ಸಮಯ ಗೊತ್ತೆ? ನಿನ್ನದು ಜೋಕ್ ಆ, ಬೇಗ ಹೇಳು ಎಂದಿದ್ದಾರೆ. ವಿಜಯ್ ದೇವರಕೊಂಡ ನಾಕ್ ನಾಕ್ ಎಂದಾಗ ನಿಯಮದಂತೆ ಸಮಂತಾ, ಯಾರದು? ಅಥವಾ ಹೂ? ಎನ್ನುತ್ತಾರೆ. ಆಗ ವಿಜಯ್ ದೇವರಕೊಂಡ ನಾ ರೋಜಾ ನುವ್ವೆ ಎಂದು ಹಾಡು ಹಾಡಿದ್ದಾರೆ.
ಸಮಂತಾ – ವಿಜಯ್ ದೇವರಕೊಂಡ ನಟನೆಯ ಖುಷಿ ಸಿನಿಮಾದ ಐದನೇ ಹಾಡು ರಿಲೀಸ್ ಆಗಿದೆ. ಸಮಂತಾಗೆ ಹೇ ಹೆಂಡತಿ ಎನ್ನುತ್ತಾ ವಿಜಯ್ ಹೆಜ್ಜೆ ಹಾಕಿದ್ದಾರೆ. ಕನ್ನಡದಲ್ಲಿಯೂ ರಿಲೀಸ್ ಆಗಿರುವ ಈ ಹಾಡಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ.
ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ. ಮೈತ್ರಿ ಮೂವಿ ಬ್ಯಾನರ್ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ಸಮಂತಾ- ನಾಗಚೈತನ್ಯ ನಟಿಸಿದ್ದ ‘ಮಜಿಲಿ’ ಸಿನಿಮಾದ ನಿರ್ದೇಶಕ ಶಿವ ಖುಷಿ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇದೇ 1ರಂದು ತೆರೆಗೆ ಬರಲು ರೆಡಿಯಾಗಿದೆ.
ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿರೋ ಸಮಂತಾ- ವಿಜಯ್ ದೇವರಕೊಂಡ ನಟನೆಯ ಈ ಸಿನಿಮಾ ಪ್ರೇಕ್ಷಕರಿಗೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತೆ ಎಂದು ಕಾದು ನೋಡಬೇಕಿದೆ.