
2.50 ಲಕ್ಷ ರೂ. ಬೆಲೆಬಾಳುವ ಟಗರು ಕಳವು – ದುಬಾರಿ ಬೆಲೆಯ ಟಗರು ಕದ್ದಿದ್ಯಾರು?
- ಕರ್ನಾಟಕ
- August 29, 2023
- No Comment
- 68
ನ್ಯೂಸ್ ಆ್ಯರೋ : ಇತ್ತೀಚೆಗೆ ದಾಖಲೆಯ ಮೊತ್ತಕ್ಕೆ ಟಗರು ಮಾರಾಟವಾದ ಸುದ್ದಿ ಕೇಳಿರುತ್ತೀರಿ. ಆದರೆ ಇದು ಅದಕ್ಕೆ ತದ್ವಿರುದ್ಧವಾದ ಸಂಗತಿ. ದುಬಾರಿ ಬೆಲೆ ಬಾಳುವ ಟಗರನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ಎಲ್ಲಿ?
ಬೆಳಗಾವಿ ಜಿಲ್ಲೆಯ ಗೋಕಾಕ್ ಭಾಗದಲ್ಲಿ ಫೈಟರ್ ರಾಕಿ ಎಂದೇ ಖ್ಯಾತಿ ಪಡೆದಿದ್ದ ಟಗರನ್ನು ಅಪಹರಿಸಲಾಗಿದೆ. ತಳಕಟನಾಳದಿಂದ ಈ ಟಗರನ್ನು ಕಳವು ಮಾಡಲಾಗಿದೆ. ಇದು ಟಗರು ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲುವ ಮೂಲಕ ಗಮನ ಸೆಳೆದಿತ್ತು.
2.50 ಲಕ್ಷ ರೂ. ಬೆಲೆ
ಸುಮಾರು 2.50 ಲಕ್ಷ ರೂ. ಬೆಲೆಬಾಳುವ ಫೈಟರ್ ರಾಕಿಯನ್ನು ಅಜ್ಜಪ್ಪ ಅವ್ವಣ್ಣ ಕಣಿಲ್ದಾರ ಸಾಕುತ್ತಿದ್ದರು. ಮನೆಯಲ್ಲಿ ಕಟ್ಟಿದ್ದ ಸಂದರ್ಭದಲ್ಲಿ ರಾತ್ರಿ ಕಳವು ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಈ ಟಗರಿಗೆ 2.50 ಲಕ್ಷ ರೂ. ಕೊಡುವುದಾಗಿ ಹಲವರು ಕೇಳಿದ್ದರು. ಆದರೆ ಅಜ್ಜಪ್ಪ ಈ ಟಗರನ್ನು ಮಾರಾಟ ಮಾಡಲು ಒಪ್ಪಿರಲಿಲ್ಲ. ಟಗರು ಕಳವಾಗಿರುವ ಬಗ್ಗೆ ಕೊಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.