
ಮಗು ಮಾಡಿಕೊಳ್ಳಲೆಂದೇ ಸೈಫ್ ಅಲಿ ಖಾನ್ ನನ್ನು ಮದುವೆಯಾದೆ – ಲಿವಿಂಗ್ ರಿಲೇಶನ್ ಶಿಪ್ ಕೊನೆಯಾದ ಬಗ್ಗೆ ಕರೀನಾ ಹೇಳಿದ್ದೇನು?
- ಮನರಂಜನೆ
- November 17, 2023
- No Comment
- 92
ನ್ಯೂಸ್ ಆ್ಯರೋ : ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರು ಬಾಲಿವುಡ್‌ನ ಸ್ಟಾರ್ ಜೋಡಿಗಳಲ್ಲಿ ಒಂದು. ಎಲ್ಲರಿಗೂ ತಿಳಿದಿರುವಂತೆ ಸೈಫ್‌ಗೆ ಕರೀನಾ ಜತೆಗೆ ಆಗಿರುವುದು ಎರಡನೇ ಮದುವೆ.
ಅಮೃತಾ ಸಿಂಗ್ ಜತೆಗೆ ವಿಚ್ಛೇದನ ಪಡೆದ ಬಳಿಕ ಸೈಫ್ ಅವರು ಕರೀನಾ ಕಪೂರ್ ಅವರನ್ನು 2012ರಲ್ಲಿ ವಿವಾಹವಾದರು. ಕರೀನಾ ಹಾಗೂ ಸೈಪ್‌ಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸೈಫ್ ಅಲಿ ಖಾನ್ ಕರೀನಾಗಿಂತ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು.
ಇದೀಗ ಕರೀನಾ ಕಪೂರ್ ತಾವು ಸೈಫ್ ಅಲಿ ಖಾನ್ ಅವ್ರನ್ನು ಮದ್ವೆಯಾಗಿರುವ ಕಾರಣವನ್ನು ಬಹಿರಂಗಗೊಳಿಸಿದ್ದಾರೆ. ಅದೇನೆಂದರೆ ಸೈಫ್ ಅಲಿ ಖಾನ್ ಅವರನ್ನು ಕರೀನಾ ಮದುವೆಯಾಗಿದ್ದು, ಮಕ್ಕಳನ್ನು ಪಡೆಯುವುದಕ್ಕಾಗಿ ಅಂತೆ. ಹೀಗೆಂದು ಖುದ್ದು ಕರೀನಾ ಡರ್ಟಿ ಎಂಬ ಮ್ಯಾಗಜೀನ್ಗೆ ಸಂದರ್ಶನ ಕೊಟ್ಟಿದ್ದಾರೆ.
ಮದುವೆಯಾಗುವ ಮೊದಲು ಸೈಫ್ ಮತ್ತು ಕರೀನಾ ಸುಮಾರು 5 ವರ್ಷ ಲಿವಿಂಗ್ ಟುಗೆದರ್ನಲ್ಲಿದ್ದರು. ಈ ಕುರಿತೂ ಈ ಹಿಂದೆ ಕರೀನಾ ಹೇಳಿಕೊಂಡಿದ್ದರು. ತಾವು ಮದುವೆಯಾಗುವ ಮೊದಲು ಐದು ವರ್ಷ ಸೈಫ್ ಜೊತೆ ಲಿವ್ ಇನ್ ರಿಲೇಷನ್ನಲ್ಲಿ ಇದ್ದೆ. ಆಗ ನನಗೆ ಮಕ್ಕಳನ್ನು ಮಾಡಿಕೊಳ್ಳುವ ಆಸೆಯಾಯಿತು. ಅದಕ್ಕಾಗಿ ಮದುವೆಯಾದೆವು.
ನಮಗಿಬ್ಬರಿಗೂ ಮಕ್ಕಳು ಬೇಕು ಎನಿಸಿದ ಕಾರಣ ಮದುವೆಯಾದೆವು. ಇಲ್ಲದಿದ್ದರೆ ಮದುವೆಯಾಗದೆಯೇ ಜೊತೆಗಿರುತ್ತಿದ್ದೆವು. ಮಕ್ಕಳನ್ನು ಹೆರುವ ಉದ್ದೇಶವಿಲ್ಲದಿದ್ದರೆ ಇಬ್ಬರೂ ಲಿವ್ ಇನ್ನಲ್ಲಿ ಖುಷಿಯಾಗಿದ್ದೆವು. ಅಷ್ಟಕ್ಕೂ ನಾವು ನಮ್ಮ ರಿಲೇಷನ್ಶಿಪ್ನಲ್ಲಿ ಮುಂದಿನ ಹಂತಕ್ಕೆ ಹೋಗಿದ್ದು ಮಕ್ಕಳನ್ನು ಮಾಡಿಕೊಳ್ಳಲು ಮಾತ್ರ ಎಂದು ಹೇಳಿಕೊಂಡಿದ್ದಾರೆ.