ಒನ್ ಟೈಂ ಚಾರ್ಜ್ ಮಾಡಿದ್ರೆ 738 ಕಿಮೀ ಮೈಲೇಜ್ – ವೊಲ್ವೊ ಕಂಪೆನಿಯ ಇಎಂ 90 ಎಲೆಕ್ಟ್ರಿಕ್ ಎಂಪಿವಿ ಕಾರಿನ ಫೀಚರ್ಸ್ ಹೀಗಿವೆ..

ಒನ್ ಟೈಂ ಚಾರ್ಜ್ ಮಾಡಿದ್ರೆ 738 ಕಿಮೀ ಮೈಲೇಜ್ – ವೊಲ್ವೊ ಕಂಪೆನಿಯ ಇಎಂ 90 ಎಲೆಕ್ಟ್ರಿಕ್ ಎಂಪಿವಿ ಕಾರಿನ ಫೀಚರ್ಸ್ ಹೀಗಿವೆ..

ನ್ಯೂಸ್‌ ಆ್ಯರೋ : ಹೆಸರಾಂತ ವೊಲ್ವೊ ತನ್ನ ಹೊಚ್ಚ ಹೊಸ ಇಎಂ 90 ಎಲೆಕ್ಟ್ರಿಕ್ ಎಂಪಿವಿ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಇವಿ ಕಾರು ಮಾದರಿಯು ಭರ್ಜರಿ ಮೈಲೇಜ್ ಜೊತೆಗೆ ಹಲವಾರು ಐಷಾರಾಮಿ ಫೀಚರ್ಸ್ ಅನ್ನು ಒಳಗೊಂಡಿದ್ದು, ಈ ಬಗ್ಗೆ ಇಲ್ಲಿದೆ ಮಾಹಿತಿ.

ಹೊಸ ಇಎಂ90 ಎಲೆಕ್ಟ್ರಿಕ್ ಕಾರನ್ನು ವೊಲ್ವೊ ಕಂಪನಿಯು ಸದ್ಯಕ್ಕೆ ಚೀನಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಚೀನಿ ಮೂಲದ ಗಿಲಿ ಜೊತೆಗೆ ಸಹಭಾಗಿತ್ವದಲ್ಲಿ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಗಿಲಿ ನಿರ್ಮಾಣದ ಜಿಕರ್ 009 ಮಾದರಿಯೊಂದಿಗೆ ಹೊಸ ಇಎಂ90 ಸಾಕಷ್ಟು ಸಾಮ್ಯತೆ ಹೊಂದಿದ್ದು, ಇದು 2025ರ ವೇಳೆಗೆ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಲಗ್ಗೆಯಿಡುವ ಸಾಧ್ಯತೆಗಳಿವೆ.

ಸ್ಪೀಡಿಷ್ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ವೊಲ್ವೊ ಮುಂಬರುವ 2025ರ ವೇಳೆ ಶೇ. 50 ರಷ್ಟು ಕಾರುಗಳನ್ನು ಇವಿ ಆವೃತ್ತಿಯಲ್ಲಿ ಮಾರಾಟ ಮಾಡುವ ಗುರಿಹೊಂದಿದೆ. ಗ್ರಾಹಕರ ಬೇಡಿಕೆಯಂತೆ ವಿವಿಧ ಎಲೆಕ್ಟ್ರಿಕ್ ಮಾದರಿಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ. ಇದೀಗ ವೊಲ್ವೊ ಕಂಪನಿಯು ತನ್ನ ಹೊಸ ಇಎಂ90 ಎಲೆಕ್ಟ್ರಿಕ್ ಎಂಪಿವಿ ಮಾದರಿಯನ್ನು ಅನಾವರಣಗೊಳಿಸಿದ್ದು, ಇದು 1953 ಡ್ಯುಯೆಟ್ ಎಸ್ಟೇಟ್ ಕಾರಿನಿಂದ ಪ್ರೇರಣೆ ಪಡೆದುಕೊಂಡಿದೆ ಎನ್ನಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ವೊಲ್ವೊ ಕಂಪನಿಯು ಎಕ್ಸ್ ಸಿ40 ರೀಚಾರ್ಜ್, ಸಿ40 ರೀಚಾರ್ಜ್ ಬಿಡುಗಡೆಯೊಂದಿಗೆ ಇಎಕ್ಸ್30 ಮತ್ತು ಇಎಕ್ಸ್90 ಕಾರು ಮಾದರಿಗಳನ್ನು ಅನಾವರಣಗೊಳಿಸಿ ಬಿಡುಗಡೆಗೆ ಸಿದ್ದವಾಗಿದೆ. ಇದೀಗ ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಇಎಂ90 ಎಲೆಕ್ಟ್ರಿಕ್ ಎಂಪಿವಿಯನ್ನು ಅನಾವರಣಗೊಳಿಸಿದ್ದು, ಮುಂದಿನ ಕೆಲವೇ ತಿಂಗಳಿನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ.

ಹೊಸ ಇಎಂ90 ಎಲೆಕ್ಟ್ರಿಕ್ ಕಾರಿನಲ್ಲಿ 116kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಇದು ರಿಯಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಮೂಲಕ 272 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 738 ಕಿಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಹೊಸ ಕಾರಿನಲ್ಲಿರುವ ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 30 ನಿಮಿಷಗಳಲ್ಲಿ ಶೇ. 80 ರಷ್ಟು ಚಾರ್ಜಿಂಗ್ ಮಾಡಬಹುದಾಗಿದ್ದು, ಗರಿಷ್ಠ 272 ಹಾರ್ಸ್ ಪವರ್ ಉತ್ಪಾದಿಸುತ್ತದೆ.

6 ಸೀಟಿನೊಂದಿಗೆ ಐಷಾರಾಮಿ ಸೌಲಭ್ಯ:

ಇನ್ನೂ ಹೊಸ ಇಎಂ90 ಇವಿ ಕಾರಿನಲ್ಲಿ ಹಲವಾರು ಸುಧಾರಿತ ಫೀಚರ್‌ಗಳಿವೆ. ಅದಲ್ಲದೆ 6 ಸೀಟಿನೊಂದಿಗೆ ಐಷಾರಾಮಿ ಸೌಲಭ್ಯಗಳನ್ನು ನೀಡಲಾಗಿದೆ. ಡ್ಯುಯಲ್ ಚೆಂಬರ್ ಸಸ್ಷೆಂಷನ್ ಮೇಲೆ ನಿರ್ಮಾಣವಾಗಿರುವ ಹೊಸ ಕಾರಿನಲ್ಲಿ ಸೈಲೆಂಟ್ ಟೈರ್ ಗಳು ಪ್ರಮುಖ ಆಕರ್ಷಣೆಯಾಗಿದ್ದು, ರೋಡ್ ನಾಯ್ಸ್ ಕ್ಯಾನ್ಸಲೇಷನ್ ಟೆಕ್ನಾಲಜಿ ಹೊಂದಿದೆ. ಜೊತೆಗೆ ಆರ್ಮ್ ಸ್ಟೈಲ್ ಲಾಂಜ್ ಸೀಟ್ ಗಳನ್ನು ಹೊಂದಿದ್ದು, ಡ್ರೈವರ್ ಕ್ಯಾಬಿನ್ ಮತ್ತು ಕ್ಯಾಪ್ಟನ್ ಕ್ಯಾಬಿನ್ ಪ್ರತ್ಯೇಕ ಮಾಡುವ ಮಾಡುವ ಮೂಲಕ ಆರಾಮವಾಗಿ ಸಭೆ ನಡೆಸುವ ಸೌಲಭ್ಯವಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ವೆಂಟಿಲೆಟೆಡ್ ಆಸನಗಳೊಂದಿಗೆ ರಿಕೈನ್ ಸೌಲಭ್ಯವನ್ನು ಸಹ ನೀಡಲಾಗಿದ್ದು, ಪ್ರತಿ ಆಸನದಲ್ಲೂ ಹ್ಯಾಪ್ಟಿಕ್ ಕಂಟ್ರೋಲ್ ಪ್ಯಾನೆಲ್, ಕ್ಲೈಮೆಟ್ ಕಂಟ್ರೋಲ್ ಗಾಗಿ 15.6 ಇಂಚಿನ ಸ್ಕ್ರೀನ್ ಹಾಗೂ 15.4 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ಸುಧಾರಿತ ಫೀಚರ್ಸ್ ಹೊಂದಿರುವ ಸೆಂಟರ್ ಕನ್ಸೊಲ್ ಜೋಡಣೆ ಮಾಡಲಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *