ಏಕಾಏಕಿ ಪ್ರೆಗ್ನೆಂಟ್ ಆದ್ರಂತೆ ಬಿಗ್ ಬಾಸ್ ಸ್ಪರ್ಧಿ – ಮನೆಗೆ ಕಳಿಸಲು ನಡೆಯುತ್ತಿದೆ ತುರ್ತು ತಯಾರಿ!

ಏಕಾಏಕಿ ಪ್ರೆಗ್ನೆಂಟ್ ಆದ್ರಂತೆ ಬಿಗ್ ಬಾಸ್ ಸ್ಪರ್ಧಿ – ಮನೆಗೆ ಕಳಿಸಲು ನಡೆಯುತ್ತಿದೆ ತುರ್ತು ತಯಾರಿ!

ನ್ಯೂಸ್ ಆ್ಯರೋ : ಒಂದು ದೊಡ್ಡ ಮನೆ ಅಲ್ಲಿ ಸಿನಿಮಾ, ಸೀರಿಯಲ್, ಸೋಶಿಯಲ್ ಮೀಡಿಯಾದಲ್ಲಿ ಹೆಸರು ಮಾಡಿದ ಸೆಲೆಬ್ರಿಟಿಗಳು ನೂರು ದಿನ ಒಟ್ಟಾಗಿ ಕಳೆಯಬೇಕು. ಈ ನಡುವೆ ಅಲ್ಲಿರುವ ಸೆಲೆಬ್ರಿಟಿಗಳ ಮಧ್ಯೆ ಗಲಾಟೆ, ಪ್ರೀತಿ-ಪ್ರೇಮ, ಹೊಡೆದಾಟ, ಟಾಸ್ಕ್ ಇನ್ನೂ ಏನೇನೋ ನಡೆಯುತ್ತದೆ. ಇದು ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮದ ಸಣ್ಣ ಝಲಕ್. ಸದ್ಯ, ಎಲ್ಲಾ ಭಾಷೆಗಳಲ್ಲೂ ಬಿಗ್ ಬಾಸ್ ಸೀಸನ್ ಮತ್ತೆ ಆರಂಭವಾಗಿದೆ. ಇದೀಗ ಈ ಕಾರ್ಯಕ್ರಮದ ಸ್ಪರ್ಧಿ ಒಬ್ಬರು ಪ್ರೆಗ್ನೆಂಟ್ ಆಗಿದ್ದು, ಅವರನ್ನು ಮನೆಗೆ ಕಳುಹಿಸಲು ತಯಾರಿ ನಡೆಸಲಾಗುತ್ತಿದೆ ಎನ್ನಲಾಗಿದೆ!

ನಾನು ಪ್ರೆಗ್ನೆಂಟ್ ಆಗಿದ್ದೇನೆ ಎಂದ ಸ್ಪರ್ಧಿ!

ಇಂತಹದ್ದೊಂದು ವಿಚಿತ್ರ ಘಟನೆ ನಡೆದಿರುವುದು ಬಾಲಿವುಡ್ ಕಿಂಗ್ ಸಲ್ಮಾನ್ ಖಾನ್ ನಡೆಸಿ ಕೊಡುತ್ತಿರುವ ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ. ಇತ್ತೀಚೆಗಷ್ಟೇ ಬಿಗ್ ಬಾಸ್ ಸ್ಪರ್ಧಿ ಅಂಕಿತಾ ಲೋಖಂಡೆ, ‘ನನಗೆ ಪಿರಿಯಡ್ಸ್ ಆಗಿಲ್ಲ, ಗರ್ಭಿಣಿಯೇ ಎಂದು ತಿಳಿದುಕೊಳ್ಳುವುದಕ್ಕಾಗಿ ರಕ್ತ ಪರೀಕ್ಷೆ ಮಾಡಿಸಿದ್ದೇನೆ. ನಾನು ಪ್ರಗ್ನೆಂಟ್ ಆಗಿದ್ದೇನೆ, ದಯವಿಟ್ಟು ಮನೆಯಿಂದ ನನ್ನ ಆಚೆ ಕಳುಹಿಸಿ’ ಎಂದಿದ್ದು ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಗಂಡ-ಹೆಂಡತಿ ಬಿಗ್ ಬಾಸ್ ಮನೆಯಲ್ಲಿ!

ಹಿಂದಿ ಬಿಗ್ ಬಾಸ್ ಶೋನಲ್ಲಿ ನಾನಾ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಈ ಬಾರಿ ಮದುವೆಯಾದ ಎರಡು ಜೋಡಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗಿತ್ತು. ಆ ಕಾರಣದಿಂದ ಅಂಕಿತಾ ಲೋಖಂಡೆ ಮತ್ತು ಪತಿ ವಿಕ್ಕಿ ಜೈನ್ ಇಬ್ಬರೂ ಬಿಗ್ ಬಾಸ್ ಮನೆಯೊಳಗೆ ಇದ್ದಾರೆ. ಅಂಕಿತಾ ಲೋಖಂಡೆ ಪ್ರೆಗ್ನೆಂಟ್ ಆಗಿರುವ ಬಗ್ಗೆ ಬಿಗ್ ಬಾಸ್ ಟೀಮ್ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಗಂಡ-ಹೆಂಡತಿ ಒಟ್ಟಿಗೇ ಇರುವ ಕಾರಣ ಈ ಪ್ರೆಗ್ನೆನ್ಸಿ ವಿಚಾರ ನಿಜವಾಗಿರಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿದೆ.

ಮನೆಗೆ ಕಳುಹಿಸಲು ತಯಾರಿ!

ಹೌದು, ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೊಸ ಹೊಸ ಪ್ರಯೋಗಳನ್ನು ನಡೆಸು ಕಾರಣ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇದೀಗ ಅಂಕಿತಾ ಲೋಖಂಡೆ ಪ್ರೆಗ್ನೆಂಟ್ ಎಂಬ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದ್ದು, ಬಿಗ್ ಬಾಸ್ ನಿಂದ ಮನೆಗೆ ಕಳುಹಿಸಲು ತಯಾರಿ‌ ನಡೆಸಲಾಗುತ್ತಿದೆ ಎನ್ನಲಾಗಿದೆ. ಒಂದು ವೇಳೆ ಈ ವಿಚಾರ ನಿಜವೇ ಆಗಿದ್ದರೆ ಅಂಕಿತಾ ಮನೆಗೆ ತೆರಳುವುದು ನಿಶ್ಚಿತ..!

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *