
ನಟಿ ಕಾಜೋಲ್ ಬಟ್ಟೆ ಬದಲಾಯಿಸುವ ವಿಡಿಯೋ ವೈರಲ್ – ಡೀಪ್ ಫೇಕ್ ಸುಳಿಯಲ್ಲಿ ಮತ್ತೊಬ್ಬ ನಟಿ..!!
- ವೈರಲ್ ನ್ಯೂಸ್
- November 17, 2023
- No Comment
- 53
ನ್ಯೂಸ್ ಆ್ಯರೋ : ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ಸೇರಿದಂತೆ ಡೀಪ್ ಫೇಕ್ ವಿಡಿಯೋದಿಂದ ಈಗಾಗಲೇ ಸಾಕಷ್ಟು ಚಿತ್ರ ನಟಿಯರು ತೊಂದರೆಗೆ ಒಳಗಾಗಿದ್ದಾರೆ. ಈಗ ನಟಿ ಕಾಜೋಲ್ ಸರದಿ.
ಇತ್ತೀಚಿಗೆ ನಟಿ ಕಾಜೋಲ್ ಅವರು ಬಟ್ಟೆ ಬದಲಿಸುವ ವಿಡಿಯೋ ಒಂದು ವೈರಲ್ ಆಗಿದೆ. ಬಟ್ಟೆ ಅಂಗಡಿಯೊಂದರ ಟ್ರಯಲ್ ರೂಮ್ ನಲ್ಲಿ ನಟಿ ಕಾಜೋಲ್ ಅವರು ಬಟ್ಟೆ ಬಿಚ್ಚಿ ಹೊಸ ಬಟ್ಟೆ ಹಾಕಿಕೊಳ್ಳುವಂತೆ ಕಾಣುತ್ತಿದೆ.
ಆದರೆ ಇದರ ಸತ್ಯವೇನೆಂದು ಹುಡುಕಿಕೊಂಡು ಹೊರಟಾಗ ಇದು ಡೀಪ್ಫೇಕ್ ಎಂದು ತಿಳಿದು ಬಂದಿದೆ. ಬೇರೆ ಮಹಿಳೆಯ ಮುಖಕ್ಕೆ ಕಾಜೋಲ್ ಅವರ ಮುಖವನ್ನು ಸೇರಿಸಿ ಈ ವಿಡಿಯೋ ಮಾಡಿ ವೈರಲ್ ಮಾಡಲಾಗಿದೆ.
ಗೆಟ್ ರೆಡಿ ವಿಥ್ ಮಿ ಎನ್ನುವ ಟ್ರೆಂಡ್ ಇತ್ತೀಚೆಗೆ ಪ್ರಾರಂಭವಾಗಿದ್ದು, ಇದರಲ್ಲಿ ಸೆಲೆಬ್ರಿಟಿಗಳು ಬಟ್ಟೆ ಮಳಿಗೆಯಲ್ಲಿ ವಿವಿಧ ರೀತಿಯ ಔಟ್ಫಿಟ್ಗಳನ್ನು ಧರಿಸಿ, ಪ್ರದರ್ಶಿಸುತ್ತಾರೆ.
ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವವರೊಬ್ಬರು ಬಟ್ಟೆ ಬದಲಾಯಿಸುತ್ತಿರುವ ವಿಡಿಯೋಗೆ ನಟಿ ಕಾಜೋಲ್ ಅವರ ಮುಖವನ್ನು ಮಾರ್ಫ್ ಮಾಡಲಾಗಿದೆ. ಒಂದು ರೀತಿಯಲ್ಲಿ ಇದು ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕ ಉಂಟು ಮಾಡಿದೆ.
ಡೀಪ್ ಫೇಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವವರ ವಿರುದ್ದ ಪೊಲೀಸರು ಈಗಾಗಲೇ ಕ್ರಮ ಕೈಗೊಳ್ಳುತ್ತಿದ್ದು, ಬಿಹಾರದ 19 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದೆ. ಈತ ಬ್ರಿಟಿಷ್ ಇಂಡಿಯನ್ ಮತ್ತು ಇನ್‌ಸ್ಟಾಗ್ರಾಮ್ ಪ್ರಭಾವಿ ಜಾರಾ ಪಟೇಲ್ ಎಂಬವರ ಮೂಲ ವೀಡಿಯೊವನ್ನು ರಶ್ಮಿಕಾ ಅವರ ಮುಖದೊಂದಿಗೆ ಮಾರ್ಫ್ ಮಾಡಿ ಹಂಚಿಕೊಂಡಿದ್ದ.