ಆರೋಗ್ಯಕರ ಜೀವನಕ್ಕೆ ‘ಒಳ್ಳೆ’ ಸಲಹೆ ನೀಡಿದ ನಟ ಪ್ರಥಮ್ – ಚೆನ್ನಾಗಿ ನಿದ್ದೆ ಮಾಡಿ, ಆರೋಗ್ಯಕರ ಸೆಕ್ಸ್ ಮಾಡಿ ಎಂದ ಒಳ್ಳೆ ಹುಡುಗ

ಆರೋಗ್ಯಕರ ಜೀವನಕ್ಕೆ ‘ಒಳ್ಳೆ’ ಸಲಹೆ ನೀಡಿದ ನಟ ಪ್ರಥಮ್ – ಚೆನ್ನಾಗಿ ನಿದ್ದೆ ಮಾಡಿ, ಆರೋಗ್ಯಕರ ಸೆಕ್ಸ್ ಮಾಡಿ ಎಂದ ಒಳ್ಳೆ ಹುಡುಗ

ನ್ಯೂಸ್ ಆ್ಯರೋ‌ : ಅತಿಯಾದ ಡಯಟ್, ವರ್ಕೌಟ್ ಮೊರೆ ಹೋಗಿದ್ದೇ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಸಾವಿಗೆ ಕಾರಣ ಎನ್ನುವ ಸಂಗತಿ ಚರ್ಚೆಯಾಗುತ್ತಿದೆ. ಈ ಮಧ್ಯೆ ಆರೋಗ್ಯದ ಕುರಿತು ಬಿಗ್ ಬಾಸ್ ವಿನ್ನರ್, ನಟ ‘ಒಳ್ಳೆ ಹುಡುಗ’ ಪ್ರಥಮ್ ನೀಡಿರುವ ಸಲಹೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಥಮ್ ಹೇಳಿದ್ದೇನು?

ವಿಜಯ್ ರಾಘವೇಂದ್ರ ದಂಪತಿಯ ಫೋಟೋ ಹಂಚಿಕೊಂಡ ಪ್ರಥಮ್, ನಮಗೆ ಇಷ್ಟು ದುಃಖ ಆಗಿದೆ. ಇನ್ನು ವಿಜಯಣ್ಣಂಗೆ ಹೇಗಾಗಿರಬೇಡ? ಇವತ್ತಿಗೂ ನನಗೆ ಸ್ಫೂರ್ತಿದಾಯಕ ದಂಪತಿಯಲ್ಲಿ ಇವರೂ ಕೂಡ ಒಬ್ಬರು. ಸ್ಪಂದನಾ ಆತ್ಮಕ್ಕೆ ಈಶ್ವರ ಮುಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ. ಬಳಿಕ ಆರೋಗ್ಯದ ಬಗ್ಗೆ ಎಚ್ಚರಿಕೆಯನ್ನೂ ಪೋಸ್ಟ್ ಮಾಡಿದ್ದಾರೆ.

ಬೇಗ ಸಪೂರ ಆಗಬೇಕು ಅಂತ ಅತಿಯಾಗಿ ಜಿಮ್ ಹೋದ್ರೆ ಹೃದಯ ಡಂ ಎನ್ನಬಹುದು. ಚೆನ್ನಾಗಿ ವಾಕ್ ಮಾಡಿ. ವ್ಯಾಯಾಮ ಮಾಡಿ. ನಿದ್ರೆ ಸರಿಯಾಗಿ ಮಾಡಿ. ಸಾಧ್ಯವಾದಷ್ಟು ಮನೆ ಊಟ ಸೇವಿಸಿ. ಮನಸಿನ ಆರೋಗ್ಯಕ್ಕೆ ಧ್ಯಾನ ಮಾಡಿ. ಸುಮ್ಮನೆ ಅತಿಯಾಡ ಡಯಟ್ ಬೇಡ. ಇದ್ಯಾವುದನ್ನೂ ಮಾಡದೆ ನಿಮ್ಮಪ್ಪ, ತಾತ ಚೆನ್ನಾಗಿದ್ರು ಎನ್ನುವುದನ್ನು ಮರೀಬೇಡಿ ಎಂದು ಪ್ರಥಮ್ ಸಲಹೆ ನೀಡಿದ್ದಾರೆ.

ಮತ್ತೂ ಮುಂದುವರಿದಿರುವ ಅವರು, ನಾನು ಜನರಿಗೆ ಒಳ್ಳೇದನ್ನೇ ಹೇಳೋದು. ಜಾಸ್ತಿ ನೀರು ಕುಡಿಯಿರಿ. ನಿದ್ರೆ ಮಾಡಿ. ಮದುವೆಯಾಗಿದ್ರೆ ಆರೋಗ್ಯಕರ ಸೆಕ್ಸ್ ಮಾಡಿ. ಎಣ್ಣೆ ಪದಾರ್ಥ ಹೆಚ್ಚಾಗಿ ತಿನ್ನಬೇಡಿ. ಫಿಟ್ ಆಗಿರಬೇಕೆಂದು ಎನರ್ಜಿ ಡ್ರಿಂಕ್ಸ್, ಪ್ರೊಟೀನ್ಸ್ ಎಂದು ಹೋದರೆ ದೇವ್ರಾಣೆ ಕಷ್ಟ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *