ಶಿಲ್ಪಾ ಶೆಟ್ಟಿ ಗಂಡನ ಮನೆ, ಆಫೀಸ್ ಮೇಲೆ ಇಡಿ ರೈಡ್; ರಾಜ್ ಕುಂದ್ರಾಗೆ ಬಿಗ್ ಶಾಕ್

Raj Kundra
Spread the love

ನ್ಯೂಸ್ ಆ್ಯರೋ: ಬಾಲಿವುಡ್​ನ ಖ್ಯಾತ ನಟಿ, ಯೋಗ ಪಟು, ಫಿಟ್ನೆಸ್ ಫ್ರೀಕ್ ಆಗಿರುವ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಮನೆ ಹಾಗೂ ಆಫೀಸ್ ಮೇಲೆ ಇಡಿ ರೈಡ್ ಆಗಿದೆ. ಖ್ಯಾತ ಉದ್ಯಮಿ ಆಗಿರುವ ರಾಜ್ ಕುಂದ್ರಾಗೆ ಇಡಿ ಶಾಕ್ ಕೊಟ್ಟಿದ್ದು, ರಾಜ್ ಕುಂದ್ರಾ ಮನೆ ಹಾಗೂ ಆಫೀಸ್ ಒಳಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಉದ್ಯಮಿಯಾಗಿ ಗುರುತಿಸಿಕೊಂಡಿರುವ ರಾಜ್ ಕುಂದ್ರಾ ಅವರು ಮುಂಬೈನಲ್ಲಿ ವಾಸಿಸುತ್ತಾರೆ. ನಟ ಹಣ ವಂಚನೆ ಕೇಸ್​​ಗೆ ಸಂಬಂಧಿಸಿದಂತೆ ಹಲವಾರು ಸಲ ಕಾನೂನು ಸಮಸ್ಯೆ ಎದುರಿಸಿದ್ದಾರೆ. ನೀಲಿ ಚಿತ್ರ ನಿರ್ಮಾಣ ವಿಚಾರವಾಗಿ ಈಗಾಗಲೇ ಒಂದು ಬಾರಿ ಅರೆಸ್ಟ್ ಆಗಿದ್ದ ಉದ್ಯಮಿ ರಾಜ್ ಕುಂದ್ರಾ ಅವರ ಮನೆಯಲ್ಲಿ ಈಗ ಮತ್ತೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಟನ ಆಫೀಸ್​ಗಳಲ್ಲಿಯೂ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ರಾಜ್ ಕುಂದ್ರಾ ಅವರು 2021ರಲ್ಲಿ ಜೂನ್​ನಲ್ಲಿ ಅರೆಸ್ಟ್ ಆಗಿದ್ದರು. ನೀಲಿ ಚಿತ್ರಗಳನ್ನು ನಿರ್ಮಿಸಿದ ಆರೋಪದಲ್ಲಿ ಶಿಲ್ಪಾ ಶೆಟ್ಟಿ ಗಂಡನನ್ನು ಅರೆಸ್ಟ್ ಮಾಡಲಾಗಿತ್ತು. ನಂತರ ನಟನಿಗೆ ಸೆಪ್ಟೆಂಬರ್ ತಿಂಗಳಲ್ಲಿ ಜಾಮೀನು ಸಿಕ್ಕಿತ್ತು. ಶಿಲ್ಪಾ ಶೆಟ್ಟಿ ಪತಿ 2 ತಿಂಗಳು ಜೈಲಿನಲ್ಲಿ ಕಳೆದಿದ್ದರು. ಈ ಇಡೀ ಕೇಸ್​ನಲ್ಲಿ ರಾಜ್ ಕುಂದ್ರಾ ಮುಖ್ಯ ಮಾಸ್ಟರ್ ಪ್ಲಾನರ್ ಎಂದು ಮುಂಬೈ ಪೊಲೀಸರು ಹೇಳಿಕೆ ಕೊಟ್ಟಿದ್ದರು.

2021 ಫೆಬ್ರವರಿಯಲ್ಲಿ ಮುಂಬೈ ಪೊಲೀಸರು ನೀಲಿ ಚಿತ್ರ ನೆಟ್​ವರ್ಕ್ ಬೇಧಿಸಿದ್ದರು. ಈ ಒಂದು ಪ್ರಕರಣದಲ್ಲಿ ಐದು ಜನರನ್ನು ಅರೆಸ್ಟ್ ಮಾಡಲಾಗಿತ್ತು. ನಂತರ ಹೆಚ್ಚಿನ ತನಿಖೆಯಾಗಿ ಮತ್ತೆ ನಾಲ್ವರನ್ನು ಅರೆಸ್ಟ್ ಮಾಡಲಾಗಿತ್ತು. ಆದರೆ ಆ ನಂತರ ಮುಂಬೈ ಪೊಲೀಸ್​​ನಲ್ಲಿ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ತಂಡದ ನೇತೃತ್ವ ಬದಲಾಗಿ ಈ ಕೇಸ್ ತಣ್ಣಗಾಯಿತು.

ಜೂನ್​ನಲ್ಲಿ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ತನಿಖೆಯಲ್ಲಿ ರಾಜ್ ಕುಂದ್ರಾ ಒಡೆತನದ ಹಾಟ್ ಶಾಟ್ಸ್ ಎಂಬ ಎಪ್ಲಿಕೇಷನ್ ಬಗ್ಗೆ ರಿವೀಲ್ ಆಗಿತ್ತು. ಈ ಎಪ್ಲಿಕೇಷನ್​​ಗೆ ರಾಜ್ ಕುಂದ್ರಾ ಕಂಪೆನಿಯ ಮಾಲೀಕತ್ವ ಇತ್ತು. ನಂತರದಲ್ಲಿ ಈ ಕುರಿತು ತನಿಖೆಯಾಗಿ ಇದರಲ್ಲಿ ಅಡಲ್ಟ್ ಕಂಟೆಂಟ್​ ಪತ್ತೆಯಾಗಿ ಸರ್ವರ್ ಸೀಜ್ ಮಾಡಲಾಗಿತ್ತು.

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿಗೆ ಸಂಕಷ್ಟುಗಳು ತಪ್ಪುತ್ತಿಲ್ಲ. ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ ಕೆಲವು ವರ್ಷಗಳ ಹಿಂದಷ್ಟೇ ನೀಲಿ ಚಿತ್ರ ನಿರ್ಮಾಣದ ಆರೋಪ ಕೇಳಿ ಬಂದಿತ್ತು. ಇದೀಗ ಮತ್ತೆ ಇದೇ ವಿಚಾರವಾಗಿ ಉದ್ಯಮಿ ರಾಜ್ ಕುಂದ್ರಾ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಬಾಂಗ್ಲಾದೇಶದ ಅಡಲ್ಟ್ ಫಿಲ್ಮ್ ಆ್ಯಕ್ಟರ್ ರಿಯಾ ಅರವಿಂದ ಬರ್ದೆ ಅವರು ಮಹಾರಾಷ್ಟ್ರದ ಉಲ್ಹಾಸನಗರದಲ್ಲಿ ಅರೆಸ್ಟ್ ಆಗಿದ್ದಾರೆ. ಅವರು ನಕಲಿ ದಾಖಲೆಗಳನ್ನು ಇಟ್ಟುಕೊಂಡು ಭಾರತದಲ್ಲಿ ಇದ್ದ ಆರೋಪದ ಮೇಲೆ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಅವರು ರಾಜ್​ ಕುಂದ್ರಾ ಮಾಡಿದ್ದ ಪ್ರಾಜೆಕ್ಟ್​ಗಳಲ್ಲಿಯೂ ಕೆಲಸ ಮಾಡಿದ್ದರು ಎನ್ನಲಾಗಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!