ಉಪಚುನಾವಣೆ ಮತದಾನದ ದಿನಾಂಕ ಬದಲಾವಣೆ; ಈ ಹೊಸ ದಿನಾಂಕದಂದು ನಡೆಯಲಿದೆ ಮತದಾನ
ನ್ಯೂಸ್ ಆ್ಯರೋ: ಕೇಂದ್ರ ಚುನಾವಣಾ ಆಯೋಗದಿಂದ ಕೇರಳ, ಪಂಜಾಬ್, ಉತ್ತರಪ್ರದೇಶದ ವಿಧಾನಸಭಾ ಉಪ ಚುನಾವಣೆ ಮತದಾನದ ದಿನಾಂಕ ಬದಲಾವಣೆ ಮಾಡಿ ಆದೇಶಿಸಿದೆ.
ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶದ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ವಿವಿಧ ಹಬ್ಬಗಳ ಕಾರಣ ನವೆಂಬರ್ 13ರ ಬದಲಾಗಿ ನವೆಂಬರ್ 20 ಕ್ಕೆ ಮರು ನಿಗದಿಪಡಿಸಲಾಗಿದೆ.
ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ, ಆರ್ಎಲ್ಡಿ ಮತ್ತು ಇತರರ ಮನವಿಯ ಮೇರೆಗೆ ಮತ್ತು ಕಡಿಮೆ ಮತದಾನದ ಸಾಧ್ಯತೆಯನ್ನು ತಳ್ಳಿಹಾಕಲು, ಚುನಾವಣಾ ಆಯೋಗವು ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶದ ಮೂರು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ನವೆಂಬರ್ 13ರ ಬದಲು ನವೆಂಬರ್ 20 ರವರೆಗೆ ಮರು ನಿಗದಿಪಡಿಸಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಇಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ದಿನಾಂಕ ಘೋಷಣೆ ಮಾಡಿದರು. ಎಚ್ ಡಿ ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ ಹಾಗೂ ಇ.ತುಕಾರಾಂ ಇವರು ಸಂಸದರಾದ ಮೇಲೆ ತೆರವಾಗಿರುವ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾಂವಿ, ರಾಮನಗರ ಜಿಲ್ಲೆಯ ಚನ್ನಪಟ್ಟಣ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆಯಲಿದೆ.
Leave a Comment