ಬೆಳಿಗ್ಗೆ ಎದ್ದು ಬ್ರೇಡ್‌ ತಿನ್ನುವುದನ್ನು ತಪ್ಪಿಸಿ; ಇದು ಆರೋಗ್ಯಕ್ಕೆ ಎಷ್ಟೆಲ್ಲಾ ಹಾನಿ ಮಾಡುತ್ತದೆ ಗೊತ್ತಾ ?

Bread
Spread the love

ನ್ಯೂಸ್ ಆ್ಯರೋ: ಹೆಚ್ಚಿನ ಜನರು ಬೆಳಿಗ್ಗೆ ಉಪಾಹಾರಕ್ಕಾಗಿ ಬ್ರೆಡ್, ಟೋಸ್ಟ್ ಅಥವಾ ಬ್ರೆಡ್ ಜಾಮ್ ಇತ್ಯಾದಿಗಳನ್ನು ತಿನ್ನುತ್ತಾರೆ. ಆದರೆ ಬಿಳಿ ಬ್ರೆಡ್ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಅದೆಷ್ಟೋ ಜನರಿಗೆ ತಿಳಿದಿರುವುದಿಲ್ಲ. ಬೆಳಿಗ್ಗೆ ಗಡಿಬಿಡಿಯಲ್ಲಿ ಕೆಲಸಕ್ಕೆ ತೆರಳುವಾಗ ಬ್ರೆಡ್​-ಜಾಮ್​ ಸೇವಿಸಿ ಲಘುಬಗೆಯಿಂದ ಹೊರಟು ಬಿಡುತ್ತಾರೆ. ಆದರೆ ಪೌಷ್ಟಿಕಾಂಶದ ವಿಷಯಕ್ಕೆ ಬಂದಾಗ ಬ್ರೆಡ್‌ಗಳು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ಅದರಲ್ಲಿಯೂ ಬೆಳಗ್ಗಿನ ಉಪಹಾರದಲ್ಲಿ ಬ್ರೆಡ್​ಗಳನ್ನು ಸೇವಿಸುವುದು ಒಳ್ಳೆಯದಲ್ಲ.

ಬಿಳಿ ಬ್ರೆಡ್ ತಯಾರಿಸಲು ಗೋಧಿ ಹಿಟ್ಟಿನಲ್ಲಿ ಅನೇಕ ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ಕಾರಣದಿಂದಾಗಿ ಹಿಟ್ಟು ಬಿಳಿಯಾಗಿ ಕಾಣುತ್ತದೆ. ಬೆಜಾಯ್ಲ್ ಪೆರಾಕ್ಸೈಡ್, ಕ್ಲೋರಿನ್ ಡೈಆಕ್ಸೈಡ್ ಮತ್ತು ಪೊಟ್ಯಾಸಿಯಮ್ ಬ್ರೋಮೇಟ್ ಸೇರಿಸಲಾಗುತ್ತದೆ. ಆರೋಗ್ಯಕ್ಕೆ ಹಾನಿಯಾಗದಂತೆ ಈ ವಸ್ತುಗಳನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಬೆರೆಸಲಾಗುತ್ತದೆ.

ಬಿಳಿ ಬ್ರೆಡ್ ಅತಿ ಹೆಚ್ಚು ಗ್ಲೈಸೆಮಿಕ್ ಅಂಶವನ್ನು ಹೊಂದಿದೆ. ಇದು ದೇಹದಲ್ಲಿ ಗ್ಲೂಕೋಸ್ ಅನ್ನು ಹೆಚ್ಚಿಸುತ್ತದೆ. ಬಿಳಿ ಬ್ರೆಡ್ ತಿನ್ನುವುದು ಮಧುಮೇಹ ರೋಗಿಗಳಿಗೆ ಹಾನಿಯುಂಟು ಮಾಡುತ್ತದೆ. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ನಿರಂತರವಾಗಿ ಹೆಚ್ಚಿನ ಮಟ್ಟದ ಗ್ಲೂಕೋಸ್ ಹೈಪರ್ ಗ್ಲೈಸೆಮಿಕ್​ಗೆ ಕಾರಣವಾಗಬಹುದು.

ಇದು ಹೃದ್ರೋಗಗಳು ಮತ್ತು ಮೂತ್ರಪಿಂಡದ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ. ನಿಮ್ಮ ದೇಹದ ತೂಕವು ಹೆಚ್ಚುತ್ತದೆ. ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಜತೆಗೆ ಕ್ಯಾಲೋರಿ ಹೆಚ್ಚುವ ಮೂಲಕ ದೇಹದಲ್ಲಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಬಿಳಿ ಬ್ರೆಡ್‌ನಿಂದ ತಯಾರಿಸಿದ ವಸ್ತುಗಳು ತಿನ್ನಲು ರುಚಿಕರವಾಗಿರಬಹುದು ಆದರೆ ಅದು ನಿಮ್ಮ ಮನಸ್ಥಿತಿಯನ್ನು ಹಾಳು ಮಾಡುತ್ತದೆ. ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್​ನಲ್ಲಿ ಪ್ರಕಟವಾದ ಅಧ್ಯಯದ ಪ್ರಕಾರ ಬಿಳಿ ಬ್ರೆಡ್ ತಿನ್ನುವುದರಿಂದ 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಖಿನ್ನತೆ ಉಂಟಾಗುತ್ತದೆ ಎಂಬುದು ತಿಳಿದು ಬಂದಿದೆ. ಆಯಾಸ ಮತ್ತು ಖಿನ್ನತೆಯ ಲಕ್ಷಣಗಳು ಕಾಡುತ್ತವೆ.

ಟೀ-ಕಾಫಿ ಮತ್ತು ಬ್ರೆಡ್ ಸೇವನೆಯು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ನಿರಂತರವಾಗಿ ಚಹಾ ಮತ್ತು ಬ್ರೆಡ್ ಸೇವಿಸಿದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ರೀತಿ ಹೃದಯ ವೈಫಲ್ಯದ ಸಾಧ್ಯತೆ ಹೆಚ್ಚಾಗುತ್ತವೆ.

Leave a Comment

Leave a Reply

Your email address will not be published. Required fields are marked *

error: Content is protected !!