ಭಾರೀ ಮಳೆಯ ಹಿನ್ನೆಲೆ, ಬೆಳ್ತಂಗಡಿ ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ – ಜುಲೈ 4ರಂದು ಎರಡೂ ತಾಲೂಕಿನ ಶಾಲೆಗಳಿಗೆ ರಜೆ

Images 3
Spread the love

ನ್ಯೂಸ್ ಆ್ಯರೋ : ಕರಾವಳಿಯಾದ್ಯಂತ ಮಳೆಯ ಅಬ್ಬರ‌ ಜೋರಾಗಿದ್ದು ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಶಾಲೆಗಳಿಗೆ ಜುಲೈ 4ರಂದು ರಜೆ ಘೋಷಿಸಲಾಗಿದೆ.

ಮಳೆಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಯವರು ಆಯಾ ತಾಲೂಕಿನ ತಹಶೀಲ್ದಾರರ ಇಲ್ಲವೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿವೇಚನೆಗೆ ಬಿಟ್ಟಿರುವ ಕಾರಣ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನಲ್ಲಿ ರಜೆ ಘೋಷಣೆ ಮಾಡಲಾಗಿದೆ.

ಆದರೆ ಇದುವರೆಗೆ ಮೂಡುಬಿದಿರೆ, ಕಡಬ, ಸುಳ್ಯ, ಪುತ್ತೂರು ಹಾಗೂ ಮಂಗಳೂರು ತಾಲೂಕುಗಳಿಗೆ ಯಾವುದೇ ರಜೆ ಘೋಷಣೆ ಆಗಿಲ್ಲ.

ಇನ್ನು ಕರಾವಳಿಯ ಬಹುಪಾಲು ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರೂ ಕೂಡ ತೊಂದರೆ ಅನುಭವಿಸುತ್ತಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!