ಅಮೆರಿಕಾದ 47ನೇ ಅಧ್ಯಕ್ಷರಾಗಿ ಇಂದು ಟ್ರಂಪ್ ಪ್ರಮಾಣ ವಚನ; ಅಂಬಾನಿ ದಂಪತಿ, ಜೈಶಂಕರ್ ಭಾಗಿ

donald trumps
Spread the love

ನ್ಯೂಸ್ ಆ್ಯರೋ: ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ಇಂದು ಜನವರಿ 20ರಂದು ಭಾರತೀಯ ಕಾಲಮಾನ ರಾತ್ರಿ 10.30ಕ್ಕೆ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅಮೆರಿಕಾದ ಅಧಕ್ಷರ ಭವನವಾದ ಕ್ಯಾಪಿಟಲ್​​ ಹೌಸ್‌ನಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೆ ಕ್ಷಣಗಣನೆ ಪ್ರಾರಂಭ ಆಗಿದೆ. ಈ ಕಾರ್ಯಕ್ರಮದಲ್ಲಿ ಅರ್ಜೆಂಟೈನಾ, ಇಟಲಿ, ಎಲ್ ಸಾಲ್ವಡಾರ್, ಹಂಗೇರಿ ಮತ್ತು ಚೀನಾ ಸೇರಿದಂತೆ ಹಲವು ರಾಷ್ಟ್ರಗಳ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳು ಭಾಗವಹಿಸುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಇದೆ.

ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಉದ್ಯಮಿ ಮುಕೇಶ್ ಅಂಬಾನಿ ದಂಪತಿ ಸೇರಿದಂತೆ ಕೆಲವು ಗಣ್ಯರು ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದು, ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಈಗಾಗಲೇ ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಜೊತೆಗೆ ತೆಗೆಸಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋಲನುಭವಿದಾಗ ಬೆಂಬಲಿಗರು ದಾಳಿ ಮಾಡಿದ್ದ ಸ್ಥಳದಲ್ಲಿಯೇ ಇಂದು ಪ್ರಮಾಣವಚನ ನಡೆಯುತ್ತಿರುವುದು ಗಮರ್ಹವಾಗಿದೆ. ಅಮರಿಕ ಚುನಾವಣಾ ಇತಿಹಾಸದಲ್ಲಿ ಈಗಾಗಲೇ ಡೊನಾಲ್ಡ್ ಟ್ರಂಪ್‌ ಅಬರು ಒಂದು ಬಾರಿ ಗೆದ್ದು, ಬಳಿಕ ಸೋತು ಮತ್ತೆ ಈಗ ಪುನಃ ಗೆದ್ದ ಇತಿಹಾಸ ಸೃಷ್ಟಿಸಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮವು ಯಾವಾಗಲೂ ಅಧ್ಯಕ್ಷಿಯ ಭವನದ ಹೊರಗಡೆಯೇ ನಡೆಯುತ್ತಿತ್ತು. ಆದರೆ ಈ ಭಾರೀ ಭೀಕರ ಚಳಿ ಹಿನ್ನಲೆ ಅಧ್ಯಕ್ಷೀಯ ಭವನದ ಹೊಳಗಡೆ ನಡೆಯಲಿದೆ. ಉಪಾಧ್ಯಕ್ಷರಾಗಿ ಚುನಾಯಿತರಾದ ಜೆಡಿ ವ್ಯಾನ್ಸ್ ಅವರು ಮೊದಲು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಬಳಿಕ ಡೊನಾಲ್ಡ್ ಟ್ರಂಪ್ ಅವರು ತಮ್ಮ ಉದ್ಘಾಟನಾ ಭಾಷಣವನ್ನು ಮಾಡುತ್ತಾರೆ.

Leave a Comment

Leave a Reply

Your email address will not be published. Required fields are marked *