ಬಾಹ್ಯಾಕಾಶದಿಂದ ಸುನಿತಾ ವಿಲಿಯಮ್ಸ್ ಕರೆತರಲು ತಯಾರಿ; ಎಲಾನ್ ಮಸ್ಕ್‌ಗೆ ಜವಾಬ್ದಾರಿ ನೀಡಿದ ಟ್ರಂಪ್!

astronauts
Spread the love

ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹವರ್ತಿ ಗಗನಯಾತ್ರಿ ಬುಚ್ ವಿಲ್ಮೋರ್ ಕಳೆದ 8 ತಿಂಗಳುಗಳಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಬಾಕಿ ಉಳಿದಿದ್ದಾರೆ. ಅವರ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ ಹಿನ್ನೆಲೆ ಈ ಸಂದಿಗ್ದ ಪರಿಸ್ಥಿತಿ ನಿರ್ಮಾಣವಾಗಿದೆ.

ಸುನಿತಾ ವಿಲಿಯಮ್ಸ್ ಅವರನ್ನು ವಾಪಸ್ ಭೂಮಿಗೆ ಕರೆ ತರಲು ವಿಜ್ಞಾನಿಗಳು ನಿರಂತರವಾಗಿ ಪ್ರಯತ್ನಪಟ್ಟರೂ ಸಫಲವಾಗಿಲ್ಲ. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖ್ಯಾತ ಉದ್ಯಮಿ ಮತ್ತು ಸ್ಪೇಸ್‌ಎಕ್ಸ್ ಮಾಲೀಕ ಎಲೋನ್ ಮಸ್ಕ್ ಅವರ ಬಳಿ ಗಗನಯಾತ್ರಿಗಳನ್ನು ಮರಳಿ ಕರೆತರಲು ಸಹಾಯ ಕೇಳಿದ್ದಾರೆ. ಎಲೋನ್ ಮಸ್ಕ್ ಅವರು ಗಗನಯಾತ್ರಿಗಳ ವಾಪಸಾತಿಗಾಗಿ ಈಗಾಗಲೇ ಕೆಲಸವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಲೋನ್ ಮಸ್ಕ್ ತನ್ನ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ಗಗನಯಾತ್ರಿಗಳನ್ನು ವಾಪಸ್ ಕರೆತರಲು ಕೆಲಸ ಮಾಡುವುದಾಗಿ ಹೇಳಿದ್ದಾರೆ. ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಸ್ಪೇಸ್‌ಎಕ್ಸ್ ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ರೂತ್‌ನಲ್ಲಿ ಹೇಳಿದ್ದಾರೆ.

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಕೇವಲ 10 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿತ್ತು, ಆದರೆ ಅವರ ಬಾಹ್ಯಾಕಾಶ ನೌಕೆಯ ತಾಂತ್ರಿಕ ಸಮಸ್ಯೆಗಳಿಂದಾಗಿ ಅವರು ಅಲ್ಲಿ ಸಿಲುಕಿಕೊಂಡರು. ಬೋಯಿಂಗ್ ಮತ್ತು ನಾಸಾ ಅವರನ್ನು ವಾಪಸ್ ಕರೆತರಲು ಹಲವಾರು ಪ್ರಯತ್ನಗಳನ್ನು ಮಾಡಿದರು, ಆದರೆ ಅಂತಿಮವಾಗಿ ಬಾಹ್ಯಾಕಾಶ ನೌಕೆಯಿಂದ ವಿಜ್ಞಾನಿಗಳನ್ನು ಮರಳಿ ಕರೆತರುವುದು ತುಂಬಾ ಅಪಾಯಕಾರಿ ಎಂದು ನಿರ್ಧರಿಸಿದರು.

8 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ವಾಸಿಸುತ್ತಿರುವ ಸುನೀತಾ ವಿಲಿಯಮ್ಸ್ ಅನೇಕ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸಿದ್ದಾರೆ. ಪೀಪಲ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ, ಅವರು ಈಗ ನಡೆಯಲು ಸಹ ಮರೆತಿದ್ದೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ನಾನು ಬಾಹ್ಯಾಕಾಶ ನಿಲ್ದಾಣದಲ್ಲಿ ಇಷ್ಟು ದಿನ ಇದ್ದೇನೆ, ಇನ್ನು ಮುಂದೆ ನಡೆಯುವುದು ಹೇಗೆ ಎಂದು ನನಗೆ ನೆನಪಿಲ್ಲ. ನಾನು ನಡೆದಿಲ್ಲ, ಕುಳಿತುಕೊಂಡಿಲ್ಲ ಅಥವಾ ಮಲಗಿಲ್ಲ. ನೀವು ಅದನ್ನು ಬಾಹ್ಯಾಕಾಶದಲ್ಲಿ ಮಾಡಬೇಕಾಗಿಲ್ಲ, ನೀವು ಇಲ್ಲಿ ತೇಲಾಡುತ್ತಿರಬಹುದು ಎಂದು ಹೇಳಿದ್ದಾರೆ.

ಈಗ, ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್ ಕಂಪನಿಯ ಸಹಾಯದಿಂದ, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಸುರಕ್ಷಿತವಾಗಿ ಮರಳುವ ಭರವಸೆ ಹೆಚ್ಚಾಗಿದೆ. ಆದರೆ, ಕಾರ್ಯಾಚರಣೆಯ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ, ಆದರೆ ಅಮೆರಿಕ ಮತ್ತು ಇಡೀ ಜಗತ್ತು ಈ ರಕ್ಷಣಾ ಕಾರ್ಯಾಚರಣೆಗಾಗಿ ಕಾಯುತ್ತಿದೆ.

Leave a Comment

Leave a Reply

Your email address will not be published. Required fields are marked *