ಈ ರೀತಿಯಾಗಿ ಟೀ ಕುಡಿದ್ರೆ ತೂಕ ಹೆಚ್ಚಾಗಲಿದೆ ; ಇಲ್ಲಿದೆ ಚಹಾ ಸೇವನೆಯ ಟಿಪ್ಸ್

Is your regular chai
Spread the love

ನ್ಯೂಸ್ ಆ್ಯರೋ: ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿಯೋದು ಬಹಳಷ್ಟು ಜನರಿಗೆ ಇಷ್ಟ. ಕೆಲವರಿಗೆ ಇದು ಎನರ್ಜಿ ಡ್ರಿಂಕ್, ಇನ್ನು ಕೆಲವರಿಗೆ ಒಂದು ಸಿಹಿ ಚಟ. ಸುಸ್ತು ಹೋಗಲಾಕಿಸಲು, ಮೂಡ್ ಚೆನ್ನಾಗಿರಲಿಕ್ಕೆ ಒಂದು ಕಪ್ ಚಹಾ ಸಾಕು.

ತಜ್ಞರ ಪ್ರಕಾರ, ಚಹಾದಲ್ಲಿ ತೂಕ ಹೆಚ್ಚಿಸುವಂತಹ ವಸ್ತು ಏನೂ ಇಲ್ಲ. ಆದ್ರೆ ನೀವು ಚಹಾವನ್ನು ಹೇಗೆ ಕುಡೀತೀರಿ ಅನ್ನೋದರ ಮೇಲೆ ಅವಲಂಬಿತವಾಗಿದೆ. ಚಹಾ ತೂಕ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಅಂತಾರೆ ತಜ್ಞರು.

ಚಹಾದಲ್ಲಿ ಕೊಬ್ಬಿನ ಕಣಗಳನ್ನು ಸುಡುವ ಮತ್ತು ಮೆಟಬಾಲಿಸಮ್ ಹೆಚ್ಚಿಸುವ ಗುಣಗಳಿವೆ. ಇದಲ್ಲದೆ, ಇದರಲ್ಲಿ ಕೆಫೀನ್ ಕೂಡ ಇದೆ. ಇದು ನಿಮಗೆ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಹಾದಲ್ಲಿರುವ ಸಂಯುಕ್ತಗಳು ಕರುಳಿನಿಂದ ಹೀರಿಕೊಳ್ಳುವ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ತೂಕ ಇಳಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ತಪ್ಪು ರೀತಿಯಲ್ಲಿ ಚಹಾ ಕುಡಿದರೆ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು.

ಹೇಗೆ ಚಹಾ ಕುಡಿದ್ರೆ ತೂಕ ಹೆಚ್ಚುತ್ತೆ?

  • ಚಹಾದಲ್ಲಿ ಸಕ್ಕರೆ ಹಾಕಿ ಜಾಸ್ತಿ ಕುಡಿದ್ರೆ ತೂಕ ಹೆಚ್ಚುತ್ತೆ.
  • ಬಿಸ್ಕತ್ತು, ಸ್ನ್ಯಾಕ್ಸ್ ಇಲ್ಲದೆ ಚಹಾ ಕುಡಿಯೋದ್ರಿಂದ ತೂಕ ಹೆಚ್ಚುತ್ತೆ.
  • ಊಟದ ನಂತರ ಚಹಾ ಕುಡಿದರೆ ಕ್ಯಾಲೊರಿಗಳ ಸೇವನೆ ಹೆಚ್ಚಾಗಿ ಪೋಷಕಾಂಶಗಳ ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ.

ನೀವು ಚಹಾ ಮಾಡುವಾಗ ಅದಕ್ಕೆ ಲವಂಗ, ಏಲಕ್ಕಿ, ತುಳಸಿ ಅಥವಾ ಯಾಲಕ್ಕಿ ಸೇರಿಸಬಹುದು. ಈ ಮಸಾಲೆಗಳೆಲ್ಲವೂ ಮೆಟಬಾಲಿಸಮ್ ಅನ್ನು ಹೆಚ್ಚಿಸುತ್ತವೆ. ಅಷ್ಟೇ ಅಲ್ಲ, ನೀವು ಕಡಿಮೆ ಕೊಬ್ಬಿನ ಹಾಲಿನಲ್ಲಿ ಚಹಾ ಕುಡಿದರೆ ತೂಕ ಹೆಚ್ಚಾಗುವುದಿಲ್ಲ. ನೀವು ಚಹಾ ಕುಡಿಯುವುದನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ, ಕಡಿಮೆ ಸಕ್ಕರೆ ಸೇರಿಸಿ ಕುಡಿಯಬಹುದು. ಮುಖ್ಯವಾಗಿ ನೀವು ಹಾಲಿನ ಚಹಾ ಕುಡಿಯಲು ಬಯಸಿದರೆ, ಅದನ್ನು ತಯಾರಿಸುವಾಗ ಹೆಚ್ಚು ಹೊತ್ತು ಕುದಿಸಬೇಡಿ. ಇಲ್ಲದಿದ್ದರೆ ಅದರಲ್ಲಿ ಕೊಬ್ಬು ಹೆಚ್ಚಾಗುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!