ಸರ್ಕಾರದಿಂದ ಬಸ್ ಟಿಕೆಟ್ ದರ 15% ಏರಿಕೆ; ಬೆಂಗಳೂರಿನಿಂದ ವಿವಿಧ ಜಿಲ್ಲೆ ಗಳಿಗೆ ಟಿಕೆಟ್ ಬೆಲೆ ಎಷ್ಟು ಗೊತ್ತಾ?
ನ್ಯೂಸ್ ಆ್ಯರೋ: ರಾಜ್ಯದ ಜನರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಬಿಎಂಟಿಸಿ , ಕೆಎಸ್‌ಆರ್‌ಟಿಸಿ ಸೇರಿ ಎಲ್ಲಾ ರೀತಿಯ ಸಾರಿಗೆ ಬಸ್‌ಗಳ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್ ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ನಡುವೆ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ದ ಜನಸಾಮಾನ್ಯರು ಸೇರಿದಂತೆ ವಿಪಕ್ಷಗಳು ಕೂಡ ಆಕ್ರೋಶ ಹೊರಹಾಕುತ್ತಿದ್ದಾರೆ.
ರಾಜ್ಯದಲ್ಲಿ ಗಾಯದ ಮೇಲೆ ಬರೆ ಎಂಬಂತೆ ಒಂದೆಡೆ ಮಹಿಳೆಯರಿಗೆ ಶಕ್ತಿ ಯೋಜನೆಯ ಹೆಸರನಿನಲ್ಲಿ ಉಚಿತ ಬಸ್ ಪ್ರಯಾಣ ಒದಗಿಸಲಾಗಿದೆ. ಇನ್ನೊಂದೆಡೆ ಪುರುಷರ ಜೇಬಿಗೆ ಕತ್ತರಿ ಹಾಕುವುದಕ್ಕೂ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಬಸ್‌ಗಳ ದರವನ್ನು ಶೇ 15 ರಷ್ಟು ಹೆಚ್ಚಳ ಮಾಡಲಾಗಿದೆ. ಸದ್ಯ ಸರ್ಕಾರದ ಆದೇಶದಂತೆ ಜನವರಿ 5 ರಿಂದ ಪರಿಷ್ಕೃತದ ದರ ಜಾರಿಯಾಗಲಿದೆ. ಹಾಗಿದ್ರೆ ದರ ಹೆಚ್ಚಳವಾದ ಬಳಿಕ ವಿವಿಧ ಜಿಲ್ಲೆಗಳಿಗೆ ದರ ಎಷ್ಟಾಗಲಿದೆ ತಿಳಿಯಿರಿ.
ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್ – ಜಯನಗರ ಹಿಂದಿನ ದರ 20 ರೂಪಾಯಿ 15% ಹೆಚ್ಚಳದ ಬಳಿಕ 23 ರೂಪಾಯಿ. ಮೆಜೆಸ್ಟಿಕ್-ಸರ್ಜಾಪುರ ಪ್ರಸ್ತುತ ದರ 25 ರೂಪಾಯಿ, ಹೆಚ್ಚಳವಾದ ಬಳಿಕ 28 ರೂಪಾಯಿ. ಮೆಜೆಸ್ಟಿಕ್-ಅತ್ತಿಬೆಲೆ ಪ್ರಸ್ತುತ ದರ 25 ರೂಪಾಯಿ, ಬೆಲೆ ಹೆಚ್ಚಳದ ಬಳಿಕ 28 ರೂಪಾಯಿ. ಮೆಜೆಸ್ಟಿಕ್-ಹಾರೊಹಳ್ಳಿ ಪ್ರಸ್ತುತ ದರ 25, ಪರಿಷ್ಕರಣದ ಬಳಿಕ 28.75 ರೂಪಾಯಿ ಆಗಲಿದೆ.
- ಇನ್ನು ಬೆಂಗಳೂರು ಟು ಹುಬ್ಬಳ್ಳಿ ಸದ್ಯದ ದರ 501 ರೂಪಾಯಿ ಹೆಚ್ಚಳದ ನಂತರ- 576 ರೂಪಾಯಿ.
- ಬೆಂಗಳೂರು ಟು ಬೆಳಗಾವಿ ಸದ್ಯದ ದರ 631 ರೂಪಾಯಿ, ನಂತರ- 725 ರೂಪಾಯಿ.
- ಬೆಂಗಳೂರು ಟು ಕಲಬುರಗಿ ಸದ್ಯದ ದರ 706 ರೂಪಾಯಿ, ನಂತರ 811 ರೂಪಾಯಿ.
- ಬೆಂಗಳೂರು ಟು ಮೈಸೂರು ಸದ್ಯದ ದರ 185 ರುಪಾಯಿ ಇದೆ ನಂತರ – 213 ರೂಪಾಯಿ ಆಗಲಿದೆ.
- ಬೆಂಗಳೂರು ಟು ಮಡಿಕೇರಿ ಸದ್ಯದ ದರ 358 ಹೆಚ್ಚಳದ ನಂತರ 411 ರೂಪಾಯಿ ಆಗಲಿದೆ.
- ಬೆಂಗಳೂರು ಟು ಚಿಕ್ಕಮಗಳೂರು ಸದ್ಯದ ದರ 285 ರೂಪಾಯಿ ನಂತರ 328 ರೂಪಾಯಿ ಆಗಲಿದೆ.
- ಬೆಂಗಳೂರು ಟು ಹಾಸನ ಸದ್ಯದ ದರ 246 ರೂಪಾಯಿ. ಹೆಚ್ಚಳದ ನಂತರ 282 ರೂಪಾಯಿ ಆಗಲಿದೆ.
- ಬೆಂಗಳೂರು ಟು ಮಂಗಳೂರು ಸದ್ಯದ ದರ 424 ಇದೆ, ಹೆಚ್ಚಳದ ನಂತರ 477 ರೂಪಾಯಿ ಆಗಲಿದೆ.
- ಬೆಂಗಳೂರು ಟು ರಾಯಚೂರು ಸದ್ಯದ ದರ 556 ರೂಪಾಯಿ ಇದೆ. ಹೆಚ್ಚಳದ ನಂತರ 639 ರೂಪಾಯಿ ಆಗಲಿದೆ.
- ಬೆಂಗಳೂರು ಟು ಬಳ್ಳಾರಿ ಸದ್ಯದ ದರ 376 ರೂಪಾಯಿ ಇದೆ. ಹೆಚ್ಚಳದ ನಂತರ 432 ರೂಪಾಯಿ ಆಗಲಿದೆ.
Leave a Comment