Adani Group : ಹಿಂಡೆನ್ ಬರ್ಗ್ ವರದಿಯಿಂದ ತಲ್ಲಣಿಸಿದ ಅದಾನಿ ಗ್ರೂಪ್ – ಸಾಲದ ಲೆಕ್ಕಾಚಾರ ಆರಂಭ, ಅದಾನಿ ಗ್ರೂಪ್ ಗೆ ಎಷ್ಟು ಸಾಲವಿದೆ ಗೊತ್ತಾ?
ನ್ಯೂಸ್ ಆ್ಯರೋ : ಒಂದು ವರ್ಷದ ಹಿಂದೆ ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಬಹಿರಂಗಪಡಿಸಿದ ಶ್ರೀಮಂತ ಪಟ್ಟಿಯಿಂದಾಗಿ ಅದಾನಿ ಗ್ರೂಪ್ ಸಹ ಸಾಕಷ್ಟು ಹಿನ್ನಡೆ ಅನುಭವಿಸಿದ್ದಲ್ಲದೇ. ಭಾರತೀಯ ಸಂಘಟಿತ ಸಂಸ್ಥೆಯು ಷೇರುಗಳು ಮೌಲ್ಯ ಕುಸತ ಕಂಡಿತ್ತು. ಸಣ್ಣ ಸಣ್ಣ ಷೇರು ಮಾರಾಟಗಾರರೂ ಕೂಡ ಭಾರತೀಯ ಮಾರುಕಟ್ಟೆಗಳಲ್ಲಿ ಹಿನ್ನಡೆ ಅನುಭವಿಸಿದ್ದರು.
ಇದೀಗ ಹುಂಡೇನಬರ್ಗ್ ವರದಿ ಪ್ರಕಟವಾದ ನಂತರ ಅದಾನಿ ಗ್ರೂಪ್ ಹೊರತುಪಡಿಸಿದರೆ ಉಳಿದೆಲ್ಲ ಷೇರುಗಳಿಗೆ ಯಾವುದೇ ಅಧಿಕ ಪ್ರಮಾಣದ ನಕಾರಾತ್ಮಕ ಪರಿಣಾಮ ಬೀರಿಲ್ಲ. ಸೋಮವಾರ ಅದಾನಿ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯ ಕುಸಿತ ಕಂಡಿತು. ಆದರೆ ಮೊದಲಿನ ನಷ್ಟಕ್ಕಿಂತಲೂ ಅದಾನಿ ಗ್ರೂಪ್ 13 ಮಿಲಿಯನ್ ಡಾಲರ್‌ನಷ್ಟು ಚೇತರಿಕೆ ಕಂಡಿತು.
ಇದರ ನಡುವೆ ಅದಾನಿ ಗ್ರೂಪ್ ನ ಸಾಲದ ಬಗ್ಗೆ ಚರ್ಚೆಯಾಗುತ್ತಿದ್ದು, 2023-24ರ ಹಣಕಾಸು ವರ್ಷದಲ್ಲಿ ಅದಾನಿ ಗ್ರೂಪ್ ಹೊಂದಿರುವ ಒಟ್ಟು ಸಾಲ 2.41 ಲಕ್ಷ ಕೋಟಿ ರೂ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಲ್ಪ ಸಾಲ ಏರಿಕೆ ಆಗಿದೆ. ಆದರೆ ನಿವ್ವಳ ಸಾಲ 1.87 ಲಕ್ಷ ಕೋಟಿ ರೂನಿಂದ 1.82 ಲಕ್ಷ ಕೋಟಿ ರೂಗೆ ಇಳಿದಿದೆ.
2019-20ರ ಹಣಕಾಸು ವರ್ಷದಲ್ಲಿ ಅದಾನಿ ಗ್ರೂಪ್ ಹೊಂದಿದ ಒಟ್ಟು ಸಾಲ 1.18 ಲಕ್ಷ ಕೋಟಿ ರೂ. ಈಗ ಅದು 2.41 ಲಕ್ಷ ಕೋಟಿ ರೂಗೆ ಹೆಚ್ಚಳವಾಗಿದೆ. ನಾಲ್ಕು ವರ್ಷದಲ್ಲಿ ಸಾಲದ ಪ್ರಮಾಣ ಎರಡು ಪಟ್ಟಾಗಿದೆ.
ಅದಾನಿ ಗ್ರೂಪ್ಗೆ ಎಲ್ಲೆಲ್ಲಿಂದ ಸಾಲ?
ಭಾರತದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ: ಶೇ. 36
ಭಾರತದ ಬಂಡವಾಳ ಮಾರುಕಟ್ಟೆಗಳಿಂದ: ಶೇ. 5
ಜಾಗತಿಕ ಬಂಡವಾಳ ಮಾರುಕಟ್ಟೆಗಳಿಂದ: ಶೇ. 29
ವಿದೇಶೀ ಬ್ಯಾಂಕುಗಳಿಂದ: ಶೇ. 26
ಇತರೆ ಮೂಲಗಳಿಂದ: ಶೇ. 4 ಸಾಲ
ಅದಾನಿ ಗ್ರೂಪ್ನ ವಿವಿಧ ಸಂಸ್ಥೆಗಳಿಗೆ ಸಾಲ ಕೊಟ್ಟಿರುವ ಭಾರತೀಯ ಬ್ಯಾಂಕುಗಳಲ್ಲಿ ಎಸ್ಬಿಐ, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಆರ್ಬಿಎಲ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್, ಆರ್ಇಸಿ, ಐಡಿಬಿಐ ಬ್ಯಾಂಕ್ಗಳು ಸೇರಿವೆ. ಈ ಬ್ಯಾಂಕುಗಳು ಅದಾನಿ ಗ್ರೂಪ್ಗೆ 75,000 ಕೋಟಿ ರೂ.ಗೂ ಹೆಚ್ಚು ಮೊತ್ತದ ಸಾಲ ನೀಡಿವೆ.
ಅದರಲ್ಲೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬರೋಬ್ಬರಿ 27,000 ಕೋಟಿ ರೂನಷ್ಟು ಸಾಲ ಒದಗಿಸಿದೆ. ಎಕ್ಸಿಸ್ ಬ್ಯಾಂಕ್ ಹತ್ತಿರ ಹತ್ತಿರ 10,000 ಕೋಟಿ ರೂನಷ್ಟು ಸಾಲ ಕೊಟ್ಟಿದೆ. ಎಲ್ಐಸಿ ಸಂಸ್ಥೆ ಅದಾನಿ ಗ್ರೂಪ್ಗೆ ಕೊಟ್ಟಿರುವ ಸಾಲ 5,790 ಕೋಟಿ ರೂ. ಇದಲ್ಲದೇ ಅದರ ವಿವಿಧ ಸಂಸ್ಥೆಗಳ ಷೇರುಗಳ ಮೇಲೆ ಎಲ್ಐಸಿ ಮಾಡಿರುವ ಹೂಡಿಕೆ 30,000 ಕೋಟಿ ರೂ.ಗೂ ಹೆಚ್ಚು.
Leave a Comment