ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕಲಿ ಶಾಲಾ ರಜೆ ಪತ್ರ ವೈರಲ್ ಹಿನ್ನೆಲೆ – ಎಡಿಟ್ ಮಾಡಿದವರ ಹಾಗೂ ಶೇರ್ ಮಾಡಿದವರ ವಿರುದ್ಧ FIR ದಾಖಲಿಸಲು ಡಿಸಿ ಆದೇಶ
ನ್ಯೂಸ್ ಆ್ಯರೋ : ದಕ್ಷಿಣ ಕನ್ನಡ ಜಿಲ್ಲಾಡಳಿತ ಇನ್ನೂ ಯಾವುದೇ ಅಧಿಕೃತ ಆದೇಶ ಹೊರಡಿಸದೇ ಇದ್ದರೂ ಜುಲೈ 18 ರಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ನಕಲಿ ಆದೇಶವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಎಫ್.ಐ.ಆರ್. ದಾಖಲಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಸದ್ಯ ನಕಲಿ ಪ್ರತಿಯೊಂದು ವೈರಲ್ ಆಗುತ್ತಿದ್ದು, ಕಳೆದ ಬಾರಿಯ ಆದೇಶವನ್ನೇ ಎಡಿಟ್ ಮಾಡಿ, ಜೂನ್ 18 ಎಂದು ತಿದ್ದಲಾಗಿದೆ. ಇದನ್ನು ಸೃಷ್ಟಿಸಿದವರ ವಿರುದ್ಧ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚುವವರ ವಿರುದ್ಧ ಎಫ್.ಐ.ಆರ್. ದಾಖಲಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಜಾರಿಯಾಗಿದ್ದರೂ ಜಿಲ್ಲಾಡಳಿತ ನಾಳೆ ಮುಂಜಾನೆವರೆಗೆ ಕಾದು ನೋಡುವ ಚಿಂತನೆ ನಡೆಸಿತ್ತು. ಅಲ್ಲದೇ ಶಾಲೆಗಳಿಗೆ ರಜೆ ನೀಡಲು ಆಯಾಯ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿವೇಚನೆಗೆ ಬಿಡಲಾಗಿತ್ತು. ಈ ನಡುವೆಯೇ ನಕಲಿ ಪತ್ರ ವೈರಲ್ ಆಗಿದ್ದರ ವಿರುದ್ಧ ಜಿಲ್ಲಾಧಿಕಾರಿ ಗರಂ ಆಗಿದ್ದು, ನಕಲಿ ಪತ್ರ ಶೇರ್ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
Leave a Comment