ಅಯೋಧ್ಯೆಯಲ್ಲಿ ದೀಪೋತ್ಸವ ವೈಭವ; ಏಕಕಾಲದಲ್ಲಿ ಹಣತೆ ಬೆಳಗಿ 2 ಗಿನ್ನೆಸ್ ವಿಶ್ವದಾಖಲೆ

Iyad
Spread the love

ನ್ಯೂಸ್ ಆ್ಯರೋ: ಉತ್ತರ ಪ್ರದೇಶದ ಅಯೋಧ್ಯಾ ನಗರಿ ಇಂದು ಸಂಜೆ ದೀಪಾವಳಿ ಬೆಳಕಿನಲ್ಲಿ ರಾರಾಜಿಸಿತು. ಕಣ್ಣು ಹಾಯಿಸಿದಲ್ಲೆಲ್ಲ ಹಬ್ಬದ ಸಡಗರ, ಸಂಭ್ರಮವೇ ಕಂಡುಬಂತು. ಸರಯೂ ನದಿ ತೀರದಲ್ಲಿ 8ನೇ ವರ್ಷದ ದೀಪಾವಳಿ ದೀಪೋತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯಿತು.

ಇದೇ ವೇಳೆ ಎರಡು ಗಿನ್ನೆಸ್ ವಿಶ್ವದಾಖಲೆಗಳು ನಿರ್ಮಾಣವಾದವು. ಒಂದೆಡೆ ಅತಿ ಹೆಚ್ಚು ಜನರು ಆರತಿ ಬೆಳಗಿದ ದಾಖಲೆಯಾದರೆ ಮತ್ತೊಂದೆಡೆ, ವಿಶ್ವದಲ್ಲೇ ಅತಿ ಹೆಚ್ಚು ಮಣ್ಣಿನ ಹಣತೆಗಳಲ್ಲಿ ಎಣ್ಣೆಯ ದೀಪಗಳನ್ನು ಹಚ್ಚಿದ ದಾಖಲೆ ರಚನೆಯಾಯಿತು.

Ayodhya 1

25 ಲಕ್ಷ ಮಣ್ಣಿನ ಹಣತೆಗಳಲ್ಲಿ ಎಣ್ಣೆಯ ದೀಪಗಳನ್ನು ಏಕಕಾಲದಲ್ಲಿ ಬೆಳಗಿಸಲಾಯಿತು. ಇದೇ ವೇಳೆ, 1,121 ಮಂದಿ ವೇದಾಚಾರ್ಯರು ಸರಯೂ ನದಿಗೆ ಆರತಿ ಎತ್ತಿದರು. ಈ ದೃಶ್ಯ ಕಣ್ಣಿಗೆ ಹಬ್ಬದಂತೆ ರಮಣೀಯವಾಗಿ ಗೋಚರಿಸಿತು.

ಅಯೋಧ್ಯೆ ಶ್ರೀರಾಮನ ಪವಿತ್ರ ಜನ್ಮಸ್ಥಳ. ಸರಯೂ ನದಿ ಈ ಪಟ್ಟಣದ ಮೂಲಕ ಹಾದು ಹೋಗುತ್ತದೆ. 2027ರಿಂದ ದೀಪಾವಳಿ ಮುನ್ನಾ ದಿನ ಇಲ್ಲಿ ವೈಭವದಿಂದ ದೀಪೋತ್ಸವವನ್ನು ಆಯೋಜಿಸಿಕೊಂಡು ಬರಲಾಗುತ್ತದೆ. ಲಕ್ಷಾಂತರ ಮಣ್ಣಿನ ಹಣತೆಗಳನ್ನು ಏಕಕಾಲದಲ್ಲಿ ಬೆಳಗಿಸಲಾಗುತ್ತದೆ. ನಂತರ ಆಕರ್ಷಕ ಲೇಸರ್ ಶೋ, ಪಟಾಕಿ ಪ್ರದರ್ಶನ ನಡೆಯುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!