ʼಈ ಭಾನುವಾರ ದೊಡ್ಮನೆಯಿಂದ ಹೋಗಿ ಬಿಡಬೇಕುʼ: ಧರ್ಮ ಈ ನಿರ್ಧಾರ ಮಾಡಲು ಕಾರಣ ಏನು?
ನ್ಯೂಸ್ ಆ್ಯರೋ: ಎಲಿಮಿನೇಟ್ ಆಗಬಾರದು ಎಂದೇ ಬಿಗ್ ಬಾಸ್ ಮನೆಯ ಎಲ್ಲರೂ ಬಯಸುತ್ತಾರೆ. ಆದರೆ ಧರ್ಮ ಕೀರ್ತಿರಾಜ್ ಅವರು ಈ ವಾರ ಎಲಿಮಿನೇಟ್ ಆಗಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅವರು ಇಷ್ಟು ಬೇಸರದಿಂದ ನಡೆದುಕೊಳ್ಳಲು ಕಾರಣ ಕೂಡ ಇದೆ. ಕಳೆದ ವಾರದ ಸಂಚಿಕೆಯಲ್ಲಿ ಅವರನ್ನು ಇನ್ನುಳಿದ ಸ್ಪರ್ಧಿಗಳು ತೆಗಳಿದ್ದರು. ಆ ಮಾತುಗಳಿಂದ ಧರ್ಮ ಕೀರ್ತಿರಾಜ್ ಅವರಿಗೆ ನೋವಾಗಿತ್ತು.
ಹೌದು. . ಕಳೆದ ವಾರ ‘ನಾಲಾಯಕ್ ಯಾರು’ ಎಂಬ ಪ್ರಶ್ನೆಗೆ ಅನೇಕರು ಧರ್ಮ ಕೀರ್ತಿರಾಜ್ ಅವರ ಹೆಸರನ್ನು ಹೇಳಿದ್ದರು. ಇದರಿಂದ ಧರ್ಮ ಅವರು ತುಂಬಾ ಬೇಸರ ಆಯಿತು. ಬಿಗ್ ಬಾಸ್ ಮನೆಗೆ ಬಂದು ಅಂಥ ಮಾತುಗಳನ್ನು ಕೇಳಿಸಿಕೊಂಡಿದ್ದು ಅವರಿಗೆ ನೋವು ತಂದಿದೆ. ಆ ಬಗ್ಗೆ ಅನುಷಾ ರೈ ಜೊತೆ ಅವರು ಧರ್ಮ ಕೀರ್ತಿರಾಜ್ ಅವರು ಮಾತನಾಡಿದ್ದಾರೆ.
ಧರ್ಮ ಕೀರ್ತಿರಾಜ್ ಕುಗ್ಗಿದ್ದನ್ನು ನೋಡಿ ಅನುಷಾ ರೈ ಅವರು ಸಮಾಧಾನ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಇರಬೇಕು ಎಂದು ಅವರು ತಿಳಿಹೇಳಿದ್ದಾರೆ. ಆಗ ಧರ್ಮ ಅವರು ತಮ್ಮ ಮನಸ್ಸಿನ ಮಾತುಗಳನ್ನು ಹೇಳಿಕೊಂಡಿದ್ದಾರೆ. ‘ಇಲ್ಲಿಗೆ ಬಂದು ಈ ರೀತಿಯೆಲ್ಲ (ನಾಲಾಯಕ್) ಹೇಳಿಸಿಕೊಳ್ಳಬಾರದು. ಇನ್ಮೇಲೆ ಬದಲಾಗಬೇಕು. ಇಲ್ಲವಾದರೆ ಈ ಭಾನುವಾರ ಹೊರಗೆ ಹೋಗಿಬಿಡಬೇಕು’ ಎಂದು ಧರ್ಮ ಕೀರ್ತಿರಾಜ್ ಅವರು ಹೇಳಿದ್ದಾರೆ.
ಚಿತ್ರರಂಗದಲ್ಲಿ ಧರ್ಮ ಕೀರ್ತಿರಾಜ್ ಅವರು ಹೆಸರು ಕೆಡಿಸಿಕೊಂಡಿಲ್ಲ. ನಿಧಾನವಾಗಿ ಆದರೂ ಅವರು ಯಶಸ್ಸಿನ ಕಡೆಗೆ ಸಾಗುತ್ತಿದ್ದಾರೆ. ಒಂದಷ್ಟು ಸಿನಿಮಾಗಳ ಮೂಲಕ ಬೇರೆ ಬೇರೆ ರೀತಿಯ ಪಾತ್ರಗಳನ್ನು ಪ್ರಯತ್ನಿಸಿದ್ದಾರೆ. ಅಷ್ಟೆಲ್ಲ ಕಷ್ಟಪಟ್ಟಿರುವವರಿಗೆ ಬಿಗ್ ಬಾಸ್ ಮನೆಮಂದಿಯೆಲ್ಲ ಸೇರಿ ನಾಲಾಯಕ್ ಎಂದು ಹೇಳಿದ್ದಕ್ಕೆ ಸಹಜವಾಗಿಯೇ ಧರ್ಮ ಕೀರ್ತಿರಾಜ್ ಬೇಸರ ಮಾಡಿಕೊಂಡಿದ್ದಾರೆ.
Leave a Comment