ಮಗಳ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ; ಹೆಸರು ರಿವೀಲ್ ಮಾಡಿದ ನಟಿ, ಇದರ ಅರ್ಥವೇನು ಗೊತ್ತಾ ?
ನ್ಯೂಸ್ ಆ್ಯರೋ: ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮನೆಗೆ ಮಗಳು ಬಂದ ಖುಷಿಯಲ್ಲಿದ್ದಾರೆ. ಇತ್ತೀಚಿಗಷ್ಟೇ ದೀಪಿಕಾ ಮಗಳ ಲಾಲನೆ-ಪಾಲನೆಗಾಗಿ ನಿದ್ದೆಗೆಡೋದು ಕಷ್ಟ ಕಷ್ಟ ಅಂತಿದ್ದಾರೆ. ತಾಯಿಯಾಗೋದು ಅಷ್ಟು ಸುಲಭವಲ್ಲ ಅನ್ನೋದು ದೀಪಿಕಾಗೆ ಅರಿವಾಗಿದೆ. ಅದಕ್ಕಿಂತ ಹೆಚ್ಚು ಸಂತೋಷವನ್ನು ಮಗಳು ತಂದು ಕೊಟ್ಟಿದ್ದಾಳೆ ಎಂದು ಈ ಬಾಲಿವುಡ್ ನಟಿ ಹೇಳಿದ್ದಾರೆ.
ದೀಪಿಕಾ ಹಾಗೂ ರಣವೀರ್, ಮಗಳ ಜೊತೆ ಮೊದಲ ದೀಪಾವಳಿ ಆಚರಿಸುತ್ತಿದ್ದಾರೆ. ದೀಪಗಳ ಹಬ್ಬದ ಸಂಭ್ರಮದಲ್ಲೇ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮಗಳ ಹೆಸರನ್ನು ರಿವೀಲ್ ಮಾಡಿದ್ದಾರೆ.
ಸೆಪ್ಟೆಂಬರ್ 9 ರಂದು ದೀಪಿಕಾ ಪಡುಕೋಣೆ ಮಗಳಿಗೆ ಜನ್ಮ ನೀಡಿದ್ರು. ಈ ಖುಷಿ ವಿಚಾರವನ್ನು ದೀಪಿಕಾ ಪಡುಕೋಣೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಅಪ್ಪ-ಅಮ್ಮನಾದ ಖುಷಿಯಲ್ಲಿರುವ ದೀಪಿಕಾ-ರಣವೀರ್ ಮಗಳಿಗೆ ಚೆಂದದ ಹೆಸರನನ್ನು ಇಟ್ಟಿದ್ದಾರೆ.
ದೀಪಿಕಾ ಅವರು ಮಗಳಿಗೆ ದುವಾ ಪಡುಕೋಣೆ ಸಿಂಗ್ ಎಂದು ಹೆಸರಿಟ್ಟಿದ್ದಾರೆ. ಮಗಳ ಪುಟಾಣಿ ಕಾಲಿನ ಫೋಟೋ ಹಂಚಿಕೊಂಡ ದೀಪಿಕಾ ಹೆಸರನ್ನು ರಿವೀಲ್ ಮಾಡಿದ್ದಾರೆ. ನಟಿ ದೀಪಿಕಾ ಮಗಳ ಹೆಸರಿನ ಅರ್ಥವನ್ನು ಕೂಡ ವಿವರಿಸಿದ್ದಾರೆ.
ದುವಾ ಎಂದರೆ ಪ್ರಾರ್ಥನೆ. ದೀಪಿಕಾ ತನ್ನ ಮತ್ತು ರಣವೀರ್ ಮಗಳ ಮೊದಲ ಫೋಟೋವನ್ನು ಹೆಸರಿನೊಂದಿಗೆ ಹಂಚಿಕೊಂಡಿದ್ದಾರೆ. “ದುವಾ ಪಡುಕೋಣೆ ಸಿಂಗ್, ‘ದುವಾ’ : ಪ್ರಾರ್ಥನೆ ಎಂದರ್ಥ. ಏಕೆಂದರೆ ಅವಳು ನಮ್ಮ ಪ್ರಾರ್ಥನೆಗಳಿಗೆ ಉತ್ತರವಾದಳು. ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ ಎಂದು ದೀಪಿಕಾ ಮತ್ತು ರಣವೀರ್ ಬರೆದಿದ್ದಾರೆ. ಮದುವೆಯಾದ 6 ವರ್ಷಗಳ ನಂತರ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಪೋಷಕರಾಗಿದ್ದು, ಮಗಳ ಬಂದ ಖುಷಿಯಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.
Leave a Comment